ಜೈಪುರ: ಕಲಿಕಾ ಪರೀಕ್ಷೆಗೂ ಜೀವನದ ಪರೀಕ್ಷೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದಕ್ಕೆ ಈ ಟಾಪರ್ಸ್ ಗಳ ಸ್ಟೋರಿ ಅತ್ಯುತ್ತಮ ನಿದರ್ಶನ. ದೇಶದ ಪ್ರತಿಷ್ಟಿತ ಪರೀಕ್ಷೆಯಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಗಳಾಗಿ ತದನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಐಎಎಸ್ ದಂಪತಿ ಇದೀಗ ವಿಚ್ಚೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
2015ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದ ಐಎಎಸ್ ಅಧಿಕಾರಿ ಟೀನಾ ದಾಬಿ ಮತ್ತು ಅವರ ಐಎಎಸ್ ಪತಿ ಅಥರ್ ಅಮೀರ್ ಖಾನ್ ವಿಚ್ಛೇದನಕ್ಕಾಗಿ ಜೈಪುರದ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಈ ವಿಚ್ಛೇದನ ಪಡೆಯಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.2018ರಲ್ಲಿ ಇವರು ಮದುವೆಯಾಗಿದ್ದರು. ಯುಪಿಎಸ್ಸಿ ಅಗ್ರಸ್ಥಾನಿಗಳ ಈ ಮದುವೆ 2018 ನೇ ಇಸವಿಯಲ್ಲಿ ಭಾರೀ ಸದ್ದು ಮಾಡಿತ್ತು.
2015 ರಲ್ಲಿ ಟೀನಾ ಯುಪಿಎಸ್ಸಿಯ ಅಗ್ರಸ್ಥಾನ ಪಡೆದಾಗ ಅದೇ ವರ್ಷ ಅಥರ್ ಅಮೀರ್ ಖಾನ್ ಎರಡನೇ ಸ್ಥಾನದಲ್ಲಿದ್ದರು. ತರಬೇತಿಯ ಸಮಯದಲ್ಲಿ ಟೀನಾ ಮತ್ತು ಅಮೀರ್ ಅವರಲ್ಲಿ ಸ್ನೇಹ ಬೆಳೆದು ಮದುವೆಯಯಾಗಲು ನಿರ್ಧರಿಸಿದ್ದರು. ಇಬ್ಬರೂ ರಾಜಸ್ಥಾನ ಕೇಡರ್ ಅಧಿಕಾರಿಗಳಾಗಿದ್ದು ಜೈಪುರದಲ್ಲಿ ಹುದ್ದೆ ಪಡೆದಿದ್ದಾರೆ.
ಕೆಲ ದಿನಗಳ ಹಿಂದೆ ಇವರಿಬ್ಬರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ಏರ್ಪಟ್ಟಿತ್ತು. ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್ʼ ಸರ್ ನೇಮ್ ತೆಗೆದು ಹಾಕಿದ್ದರು. ಅಥರ್ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಟಿನಾ ಅವರನ್ನು ಅನ್ಫಾಲೋ ಮಾಡಿದ್ದರು.ಈ ಜಗಳ ಇದೀಗ ಅವರ ವೈವಾಹಿಕ ಜೀವನದ ಅಂತ್ಯದ ವರೆಗೆ ತಂದು ನಿಲ್ಲಿಸಿದೆ.ಇದೀಗ ಅಧಿಕೃತವಾಗಿ ಇಬ್ಬರೂ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಲಿಕೆಯಲ್ಲಿ ಟಾಪ್ ರ್ಯಾಂಕ್ ಗಳಿಸಿದ್ದರೂ ಜೀವನದ ಬಂಡಿಯಲ್ಲಿ ಇಬ್ಬರೂ ಫೇಲ್ ಆಗಿದ್ದಾರೆ.