ನವದೆಹಲಿ: ಅಮಿತ್ ಶಾ ಫೋಟೋಗೆ ಕಾಪಿ ರೈಟ್ಸ್ ಉಲ್ಲಂಘನೆಯಾಗಿದೆ. ಈ ಹಿಂದೆ ಬಿಸಿಸೈ ಅಧಿಕೃತ ಟ್ವಿಟ್ಟರ್ ಖಾತೆಯ ಪ್ರೋಫೈಲ್ ಫೋಟೋವನ್ನು ಕಾಪಿರೈಟ್ ಸಮಸ್ಯೆಯಿಂದ ತೆಗೆದು ಹಾಕಿತ್ತು. ಇದೀಗ ಅಮಿತ್ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ತೆಗೆದು ಹಾಕಲಾಗಿದೆ.
ಕಾಪಿ ರೈಟ್ ಉಲ್ಲಂಘನೆಯಾಗಿದೆ ಎಂದು ಗೃಹ ಸಚಿವ ಅಮಿತ್ ಷಾ ಅವರ ಟ್ವಿಟರ್ ಪ್ರೊಫೈಲ್ ಫೋಟೋ ತೆಗೆದು ಹಾಕಿ, ಕೆಲ ಸಮಯದ ಬಳಿಕ ಮತ್ತೆ ಫೋಟೋ ಹಾಕಿದ್ದಾರೆ. ನಿನ್ನೆ ರಾತ್ರಿ ಕೆಲ ಸಮಯದವರೆಗೆ ಅಮಿತ್ ಷಾ ಅವರ ಟ್ವಿಟರ್ ಪ್ರೊಫೈಲ್ ದಿಢೀರ್ ಕಾಣೆಯಾಗಿತ್ತು. ಕಾಪಿ ರೈಟ್ ಉಲ್ಲಂಘನೆಯಾಗಿದೆ ಎಂದು ಪ್ರೊಫೈಲ್ನಲ್ಲೇ ಸೂಚನೆ ನೀಡಲಾಗಿತ್ತು. ಕಾಪಿ ರೈಟ್ ಮಾಲೀಕ ವರದಿ ಮಾಡಿದ್ದರಿಂದ ತಾತ್ಕಾಲಿಕವಾಗಿ ತಡೆಹಿಡಿದಿದ್ದ ಟ್ವಿಟರ್ ಪ್ರೊಫೈಲ್ ಅನ್ನು ಕೆಲ ಸಮಯದ ಬಳಿಕ ಮತ್ತೆ ಹಾಕಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್, ನಮ್ಮ ಜಾಗತಿಕ ನಿಯಮಗಳಿಗೆ ಅನುಸಾರವಾಗಿ ಟ್ವಿಟರ್ ಖಾತೆಯಲ್ಲಿ ಅಜಾಗರೂಕ ದೋಷಗಳು ಕಂಡುಬಂದಿರುವುದರಿಂದ ಈ ಖಾತೆಯ ಪ್ರೊಫೈಲ್ ಅನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿತ್ತು. ಆದಷ್ಟು ಬೇಗ ನಮ್ಮ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ಇದೀಗ ಟ್ವಿಟರ್ ಖಾತೆ ಸಂಪೂರ್ಣ ಕಾರ್ಯ ನಿರ್ವಹಿಸುತ್ತಿದೆ ಎಂದು ಟ್ವಿಟರ್ ವಕ್ತಾರ ಮಾಹಿತಿ ನೀಡಿದ್ದಾರೆ.