Thursday, September 23, 2021
No menu items!
Home Latest ಜೀವಂತ ಬೇರುಗಳಿಂದಾದ ಸುಂದರ ಸೇತುವೆಗಳ ರಹಸ್ಯ!

ಜೀವಂತ ಬೇರುಗಳಿಂದಾದ ಸುಂದರ ಸೇತುವೆಗಳ ರಹಸ್ಯ!

ಮ್ಮ ಕಣ್ಣು, ಕೈಯಳತೆಯಲ್ಲಿರೋದರ ಬಗ್ಗೆ ನಮ್ಮಲ್ಲೊಂದು ಸದರವಾದ ಭಾವನೆ ಇರುತ್ತೆ. ಅದು ಮನುಷ್ಯ ಸಹಜವಾದ ಗುಣ ಇದ್ದಿರಬಹುದೇನೋ. ಏನಾದರೂ ಸುಂದರವಾದ ಸ್ಥಳಗಳು, ಕುತೂಹಲಕರವಾದ ಅಂಶಗಳೆದುರಾದರೆ ಅವೆಲ್ಲ ಯಾವುದೋ ಬೇರೆ ದೇಶದ್ದಿರಬಹುದೆಂದೇ ಅಂದುಕೊಳ್ಳುತ್ತೇವೆ. ಆದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿಯೋ, ಇತರೇ ಮೂಲಗಳಿಂದಲೇ ಕಣ್ತುಂಬಿಕೊಳ್ಳುವ ಅದೆಷ್ಟೋ ವೈಶಿಷ್ಟ್ಯಗಳು ನಮ್ಮ ಸುತ್ತಲಿನದ್ದೇ ಆಗಿರುತ್ತದೆ ಅನ್ನೋದು ನಿಜವಾದ ಮಜದ ಸಂಗತಿ.

ಜೀವಂತ ಮರದ ಬೇರುಗಳಿಂದಲೇ ರಚನೆಯಾದ ಮೋಹಕ ಸೇತುವೆಗಳನ್ನು ಆಗಾಗ ನೋಡುತ್ತಿರುತ್ತೇವೆ. ಅವುಗಳ ರಚನೆ ಎಂಥವರನ್ನೂ ಅರೆಕ್ಷಣ ಸೆಳೆದುಕೊಂಡು ಅದರ ಸುತ್ತಲೇ ಆಲೋಚನೆಗೆ ಹಚ್ಚುವಂತಿರುತ್ತವೆ. ನಿಖರವಾಗಿ ಹೇಳಬೇಕಂದ್ರೆ ಅಂಥಾ ಸಜೀವ ಪ್ರಾಕೃತಿಕ ಸೇತುವೆಗಳಿರೋದು ನಮ್ಮದೇ ನೆಲವಾದ ಚಿರಾಪುಂಜಿಯಲ್ಲಿ!

ಚಿರಾಪುಂಜಿ ಸದಾ ಮಳೆಯಿಂದಲೇ ಮಾಘಸ್ನಾನ ಮಾಡಿಸಿಕೊಳ್ಳುವ ಪ್ರದೇಶ. ಅದಕ್ಕೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆಯೂ ಇದೆ. ಹೀಗೆ ಮಳೆ ಬೀಳೋದರಿಂದಲೇ ಈ ಪ್ರದೇಶದಲ್ಲಿ ಅಗಾಧವಾದ ಸಸ್ಯರಾಶಿಗಳಿವೆ, ಯಾವ ಕಾಲಕ್ಕೂ ಬತ್ತದ ಜೀವತೊರೆಗಳಿವೆ. ಅಂಥಾ ತೊರೆಗಳ ಸಮೀಪ ಎರಡು ಪ್ರದೇಶಗಳನ್ನು ಎರಡೂ ಬದಿಯ ಮರದ ಬೇರುಗಳೇ ಸೇತುವೆಯಂತೆ ಹೊಸೆದುಕೊಂಡು ಬೆಸೆದಿರುತ್ತವೆ. ಅದರ ರಚನೆ ಆಧುನಿಕ ಸೇತುವೆಗಳಿಗೇ ಸವಾಲೆಸೆಯುವಂತಿರುತ್ತವೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments