Sunday, October 17, 2021
No menu items!
Home Entertainment ( Kan ) ಕೊರೊನಾ ಭಯ, ಥಿಯೇಟರ್ ನತ್ತ ಹೋಗ್ತಿಲ್ಲ ಜನ ; ಪಿವಿಆರ್ ಕೊಡ್ತು ಭರ್ಜರಿ ಆಫರ್..!

ಕೊರೊನಾ ಭಯ, ಥಿಯೇಟರ್ ನತ್ತ ಹೋಗ್ತಿಲ್ಲ ಜನ ; ಪಿವಿಆರ್ ಕೊಡ್ತು ಭರ್ಜರಿ ಆಫರ್..!

ಬೆಂಗಳೂರು : ಕೊರೊನಾ ಕಾರಣದಿಂದಾಗಿ ಮುಚ್ಚಿದ್ದ ಥಿಯೇಟರ್ ಗಳು ಬರೋಬ್ಬರಿ 7 ತಿಂಗಳ ಬಳಿಕ ಓಪನ್ ಆಗಿವೆ. ಆದ್ರೆ ಜನ ಮಾತ್ರ ಚಿತ್ರಮಂದಿರದತ್ತ ಸುಳಿಯುತ್ತಿಲ್ಲ. ಜನರಿಗೆ ಇನ್ನು ಕೊರೊನಾ ಭಯ ಇರುವ ಕಾರಣ ಥಿಯೇಟರ್ ಗಳು, ಮಲ್ಟಿಫ್ಲೆಕ್ಸ್ ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಕೇವಲ 50% ಜನರಿಗೆ ಮಾತ್ರ ಅವಕಾಶ ನೀಡಿದ್ದರು, ಅದು ಕೂಡ ಈಗ ಸಂಪೂರ್ಣವಾಗದೆ ಇರುವುದು ಮಾಲೀಕರನ್ನು ಚಿಂತೆಗೀಡು ಮಾಡಿದೆ. ಆದ್ರೆ ಆ ಚಿಂತೆಯಿಂದ ದೂರಾಗಿ ಜನರನ್ನು ಥಿಯೇಟರ್ ಕಡೆಗೆ ತರುವತ್ತ ಮಾಲೀಕರು ಗಮನಹರಿಸಿ ಹೊಸ ಐಡಿಯಾ ಹುಡುಕಿದ್ದಾರೆ.

ಹೌದು, ಪ್ರೇಕ್ಷಕರನ್ನು ಸೆಳೆಯಲು ಪಿವಿಆರ್ ಸಿನಿಮಾಸ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. 1,200 ರೂಪಾಯಿ ಇದ್ದ ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆಯನ್ನು ಕೇವಲ 165 ರೂಪಾಯಿಗೆ ಇಳಿಸಿದೆ. ಅಷ್ಟೆ ಅಲ್ಲ 300 ರಿಂದ 600 ರೂಪಾಯಿ ಇದ್ದ ಪ್ರೀಮಿಯಂ ಕ್ಲಾಸ್ ಟಿಕೆಟ್ ಬೆಲೆಯನ್ನು ಕೇವಲ 85 ರೂಪಾಯಿಗೆ ಇಳಿಕೆ ಮಾಡಲಾಗಿದೆ.

ಕುಟುಂಬ ಸಮೇತ ಶೋ ವೀಕ್ಷಿಸುವುದಾದರೆ ಗೋಲ್ಡ್ ಕ್ಲಾಸ್ನ ಒಂದು ಶೋನಲ್ಲಿ 15 ಸೀಟುಗಳಿಗೆ ಕೇವಲ 2,500 ರೂ. ನಿಗದಿಪಡಿಸಲಾಗಿದೆ. ಪ್ರೀಮಿಯರ್ ಕ್ಲಾಸ್ 30 ಟಿಕೆಟ್ ಗಳ ಒಂದು ಶೋ ಬುಕ್ ಮಾಡಲು ಕೇವಲ 2,500 ರೂ. ನಿಗದಿಪಡಿಸಲಾಗಿದೆ. ಹಾಗೇ, ಕುಟುಂಬ ಸದಸ್ಯರ ಹುಟ್ಟುಹಬ್ಬ, ವೆಡ್ಡಿಂಗ್ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಿನಿಮಾ ನೋಡಿಕೊಂಡು ಆಡಿಟೋರಿಯಂನಲ್ಲಿ ಆಚರಿಸಲು ಅವಕಾಶ ನೀಡಲಾಗಿದೆ.

ಸದ್ಯ ಥಿಯೇಟರ್ ನಲ್ಲಿ ರಿರಿಲೀಸ್ ಪರ್ವ ಶುರುವಾಗಿದ್ದು, ಹೊಸ ಸಿನಿಮಾಗಳು ರಿಲೀಸ್ ಆಗುವವರೆಗೂ ಪಿವಿಆರ್ನಲ್ಲಿ ಈ ಆಫರ್ ಜಾರಿಯಲ್ಲಿರಲಿದೆ.

ಚಿತ್ರಮಂದಿರಗಳಲ್ಲೂ ಮುಂಜಾಗ್ರತ ಕ್ರಮತೆಗೆದುಕೊಂಡು, ಫುಲ್ ಸ್ಯಾನಿಟೈಸ್ ಮಾಡಿದ್ರು ಜನ ಧೈರ್ಯ ತೋರುತ್ತಿಲ್ಲ. ಮಲ್ಟಿಫ್ಲೆಕ್ಸ್ ಗಳಲ್ಲೂ ಜನ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಕಾಣುತ್ತಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments