ಈ ಕೊರೊನಾ ವೈರಸ್ ನಿಂದಾಗಿ ಜನ ಮನರಂಜನೆಗಾಗಿ ಹೋಗುತ್ತಿದ್ದ ಸ್ಥಳವನ್ನೇ ಸಂಪೂರ್ಣ ಬಂದ್ ಮಾಡಲಾಗಿದೆ. ಯಾವಾಗ ಚಿತ್ರಮಂದಿರ ತೆರೆಯುತ್ತೆ, ನಾವ್ಯಾವಾಗ ಅಲ್ಲಿಗೆ ಹೋಗ್ತೀವಿ ಅಂತ ಜನ ಕೂಡ ಕ್ಯೂನಲ್ಲಿ ನಿಂತಿದ್ದಾರೆ. ಓಟಿಟಿ ಚಾನೆಲ್ ನಲ್ಲಿ ಹೊಸ ಸಿನಿಮಾಗಳು ರಿಲೀಸ್ ಆದ್ರೂ ಕೂಡ, ಥಿಯೇಟರ್ ನಲ್ಲಿ ನೋಡೋ ಮಜವೇ ಬೇರೆ. ಹೀಗಾಗಿ ಥಿಯೇಟರ್ ಓಪನ್ ಆದ್ರೆ ಸಾಕು ಅಂತ ಪ್ರೇಕ್ಷಕರು ಕೂಡ ಕಾಯುತ್ತಿದ್ದಾರೆ. ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು, ಥಿಯೇಟರ್ ಓಪನ್ ಆಗುವ ಲಕ್ಷಣಗಳು ಸಿಕ್ಕಿವೆ.
ಇದೇ ತಿಂಗಳ 15 ರಿಂದ ಚಿತ್ರಮಂದಿರ ಬಾಗಿಲು ತೆರೆಯಲಿದ್ದು, ಕೆಲವು ರೂಲ್ಸ್ಗಳನ್ನು ಫಾಲೋ ಮಾಡಬೇಕಾಗಿದೆ. ಕೊರೊನಾ ವೈರಸ್ ಹರಡದಂತೆ ಅಲ್ಲಿಯೂ ಕೂಡ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರಿಗೂ ಕೂಡ ಮನರಂಜನೆಗೆ ಬ್ರೇಕ್ ಬಿದ್ದಿದ್ದು, ಯಾವಾಗ ಥಿಯೇಟರ್ ಓಪನ್ ಆಗುತ್ತೋ ಅಂತ ಕಾಯುತ್ತಿದ್ದರು. ಹೀಗಾಗಿ ಚಿತ್ರಮಂದಿರ ತೆರೆಯುತ್ತಿರುವುದು ಸಿನಿ ಪ್ರೇಕ್ಷಕರಿಗೆ ಸಂತಸ ತಂದಿದೆ. ಇದರ ಜೊತೆಗೆ ಸ್ಟಾರ್ ನಟರ ಸಿನಿಮಾಗಳು ಕೂಡ ರಿಲೀಸ್ ಗೆ ಕ್ಯೂನಲ್ಲಿವೆ.
ದರ್ಶನ್ ಅಭಿನಯದ ರಾಬರ್ಟ್ ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿಕೊಂಡಿದ್ದು, ರಿಲೀಸ್ಗೆ ರೆಡಿಯಾಗಿದೆ. ಅಷ್ಟೆ ಅಲ್ಲ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡ ರಿಲೀಸ್ಗೆ ರೆಡಿಯಾಗಿದೆ.
ಥಿಯೇಟರ್ ಓಪನ್ ಆದ ಕೂಡಲೇ ರಾಬರ್ಟ್ ಸಿನಿಮಾ ರಿಲೀಸ್ ಮಾಡಿ ಅಂತ ದರ್ಶನ್ ಅಭಿಮಾನಿಗಳು ಆಗಲೇ ಒತ್ತಾಯಿಸಿದ್ರು. ಹೀಗಾಗಿ ಚಿತ್ರತಂಡ ಕೂಡ ಸೆನ್ಸಾರ್ಗೆ ಅಪ್ಲೈ ಮಾಡಲಿದ್ದು, ಚಿತ್ರಮಂದಿರ ಆರಂಭವಾದ ಕೂಡಲೇ ರಾಬರ್ಟ್ ರಿಲೀಸ್ ಆಗುವ ಸಾಧ್ಯತೆ ಇದೆ.
ಇದರ ಜೊತೆಗೆ ರಮೇಶ್ ಅರವಿಂದ್ ಅವರ 100 ಸಿನಿಮಾ, ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ, ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್, ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾಗಳು ಕೂಡ ಈ ಸಾಲಿನಲ್ಲಿ ನಿಲ್ಲುತ್ತವೆ.
ಒಟ್ಟಾರೆ ಸಿನಿಮಾ ನೋಡುವ ಕಾತುರದಲ್ಲಿ ಪ್ರೇಕ್ಷಕರಿದ್ದರೇ, ಯಾವಾಗ ರಿಲೀಸ್ ಮಾಡೋದು ಅನ್ನೋ ಕಾತುರದಲ್ಲಿ ಚಿತ್ರತಂಡಗಳು ಇವೆ. ಮನರಂಜನೆ ಇಲ್ಲದೆ ಕಂಗೆಟ್ಟ ಪ್ರೇಕ್ಷಕರು ಫಸ್ಟ್ ಶೋಗೆ ಫುಲ್ ಆಗುವ ಸಾಧ್ಯತೆ ಹೆಚ್ಚಾಗಿದೆ.