Wednesday, October 27, 2021
No menu items!

ಬೆಂಗಳೂರು: ಕೋವಿಡ್ 19 ಹಾವಳಿ ಜನರಿಗೆ ತಂದಿಟ್ಟ ಸಂಕಟ ಅಷ್ಟಿಷ್ಟಲ್ಲ. ಇದೀಗ ಕೊರೋನಾ ಹಾವಳಿಯಿಂದ ಮುಚ್ಚಿದ್ದ ಥಿಯೇಟರ್‌ಗಳು ಮತ್ತೆ ತೆರೆಯಲ್ಪಟ್ಟಿವೆ.ಆದರೆ ಪ್ರೇಕ್ಷಕ ಮಹಾಪ್ರಭುಗಳು ಮಾತ್ರ ಅಷ್ಟಾಗಿ ಚಿತ್ರಮಂದಿರದತ್ತ ಧಾವಿಸುತ್ತಿಲ್ಲ. ಇದರ ಬೆನ್ನಲ್ಲೇ ಇಂದು ಲಾಕ್ಡೌನ್ ಬಳಿಕ ಮೊದಲ ಬಾರಿಗೆ ಹೊಸ ಕನ್ನಡ ಚಿತ್ರವೊಂದು ಥಿಯೇಟರ್ ಗೆ ಲಗ್ಗೆಯಿಡುತ್ತಿದೆ.

ಹರಿವು, ನಾತಿಚರಾಮಿ ಖ್ಯಾತಿಯ ಮಂಸೋರೆ ನಿರ್ದೇಶನದ ಹೊಸ ಚಿತ್ರ ‘ಆಕ್ಟ್-1978’ ಇಂದು ತೆರೆಕಾಣಲಿದೆ. ಪ್ರೇಕ್ಷಕರಿಲ್ಲದೇ ಬಿಕೋ ಎಂದು ಭಣಗುಡುತ್ತಿದ್ದ ಚಿತ್ರಮಂದಿರ ಮಾಲೀಕರಿಗೆ ಈ ಚಿತ್ರ ರಿಲೀಸ್ ನಿಂದಾಗಿದೆ ಹೊಸ ಬೂಸ್ಟ್ ಸಿಕ್ಕಿದೆ.ಹಿಂದಿನ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿಗೆ ವಿಶೇಷ ಪ್ರಾತಿನಿಧ್ಯ ನೀಡಿರುವ ನಿರ್ದೇಶಕರು ಈ ಸಿನಿಮಾದಲ್ಲೂ ಸಾಮಾಜಿಕ ಹೊಣೆಯ ಗುಣವನ್ನು ತೋರಿದ್ದಾರೆ. ಸರಣಿ ಪೋಸ್ಟರ್​ಗಳ ಮೂಲಕ ಹಲವು ಸಾಮಾಜಿಕ ಕಳಕಳಿಯ ವಿಚಾರಗಳನ್ನು ಆಕ್ಟ್-1978 ಸಿನಿಮಾ ಹಂಚಿಕೊಂಡಿದೆ.

ಲಾಕ್​ಡೌನ್​ ಬಳಿಕ ಥಿಯೇಟರ್‌ ಗಳು ತೆರೆದ ನಂತರ ರಿಲೀಸ್ ಆಗಿರುವ ಮೊದಲ ಸಿನಿಮಾ ಇದಾಗಿದ್ದು, ಇದಕ್ಕೆ ಸಿಗಲಿರುವ ಪ್ರತಿಕ್ರಿಯೆಯತ್ತ ಇಡೀ ಸ್ಯಾಂಡಲ್​ವುಡ್​ ಕಣ್ಣು ನೆಟ್ಟಿದೆ. ಇನ್ನು ಈ ಸಿನಿಮಾಗೆ ಬೆಂಬಲವಾಗಿ ಸ್ಯಾಂಡಲ್​ವುಡ್​ ನ ರಿಷಭ್ ಶೆಟ್ಟಿ, ಸುದೀಪ್, ಡಾಲಿ ಧನಂಜಯ ಸೇರಿದಂತೆ ಬಹುತೇಕ ಸೆಲೆಬ್ರಿಟಿಗಳು ನಿಂತಿದ್ದು, ಚಿತ್ರತಂಡಕ್ಕೆ ಶುಭ ಕೋರುತ್ತಿದ್ದಾರೆ.

ಹಿಟ್ ಸಿನಿಮಾಗಳನ್ನು ನೀಡಿರುವ ಮಂನ್ಸೋರೆ ಈ ಚಿತ್ರ ನಿರ್ದೇಶಿಸಿದ್ದು ,ನಟಿ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದು, ಪ್ರಮೋದ್​ ಶೆಟ್ಟಿ, ಸಂಚಾರಿ ವಿಜಯ್​, ಶ್ರುತಿ, ಬಿ.ಸುರೇಶ್, ಅಚ್ಯುತ್ ಕುಮಾರ್ ಸೇರಿದಂತೆ 48 ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments