ಮುಂಬೈ : ಹೈದರಬಾದ್ ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆಯೇ ಸೋಂಕು ಕಾಣಿಸಿಕೊಂಡು ತಮನ್ನಾ ಆಸ್ಪತ್ರೆ ಸೇರಿದ್ದರು. ಇದೀಗ ಕೊರೊನಾದಿಂದ ಚೇತರಿಸಿಕೊಂಡು ಸೇಫಾಗಿ ಮನೆ ಸೇರಿದ್ದಾರೆ.
ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ನಟಿ ತಮನ್ನಾ ಪೋಸ್ಟ್ ನೋಡಿ ಅಭಿಮಾನಿಗಳು ಪ್ರಾರ್ಥನೆ ಂಆಡಿದ್ದರು. ನೆಚ್ಚಿನ ನಟಿ ಕೊರೊನಾದಿಂದ ಬೇಗ ಗುಣಮುಖರಾಗಲಿ ಎಂದು ಹರಸಿದ್ದರು. ಹೀಗಾಗಿ ಇಂದು ಗುಣಮುಖರಾಗಿ ಮನೆಗೆ ತೆರಳಿರುವ ತಮನ್ನಾ, ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಕುಟುಂಬ ಸದಸ್ಯರ ಪ್ರೀತಿಯ ಹಾರೈಕೆಯಿಂದಾಗಿ ನಾನು ಶೀಘ್ರ ಚೇತರಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಜೊತೆಗೆ ಕೋವಿಡ್ ಸೋಂಕು ತಗುಲಿದ್ದ ಸಮಯದಲ್ಲಿ ತಮಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ವೈದ್ಯರಿಗೂ ತಮನ್ನಾ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಸಂದೇಶವೊಂದನ್ನು ಬರೆದು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Words cannot describe how grateful I am to the doctors, nurses and the staff at @Continental_hyd. I was so sick, weak & scared but the you made sure that I was comfortable and treated in the best possible way. The kindness, sincere caring, and concern made everything better! 🙏🏼😇 pic.twitter.com/nSKBC19UwU
— Tamannaah Bhatia (@tamannaahspeaks) October 17, 2020
ಮೊದ ಮೊದಲಿಗೆ ತಮನ್ನಾ ಮನೆಯಲ್ಲಿ ಅಡುಗೆ ಮಾಡುವವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆನಂತರ ಅವರ ಪೋಷಕರಿಗೆ ಟೆಸ್ಟ್ ಮಾಡಿಸಿದಾಗ ಅವರಿಗೂ ಪಾಸಿಟಿವ್ ಬಂದಿತ್ತು. ಆದ್ರೆ ತಮನ್ನಾಗೆ ಮಾತ್ರ ನೆಗೆಟಿವ್ ಬಂದಿತ್ತು. ಪೋಷಕರು ಚೇತರಿಸಿಕೊಂಡು ಮನೆಗೆ ಹೋಗಿದ್ದರು. ತಮನ್ನಾ ಕೂಡ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದರು. ಪೋಷಕರಿಗೆ ಕೊರೊನಾ ಬಂದ ಬರೋಬ್ಬರಿ ಒಂದು ತಿಂಗಳ ನಂತರ ತಮನ್ನಾಗೂ ಪಾಸಿಟಿವ್ ಬಂದಿತ್ತು. ಇದೀಗ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ.