ನವರಸ ನಾಯಕ ಜಗ್ಗೇಶ್ ಸದಾ ಹಸನ್ಮುಕಿ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟ. ಅಭಿಮಾನಿಗಳಿಗೂ ಸೋಷಿಯಲ್ ಮೀಡಿಯಾದಿಂದ ಹತ್ತಿರರಾಗಿದ್ದಾರೆ. ಯಾರು, ಏನೇ ಪ್ರಶ್ನಿಸಿದರು ಉತ್ತರ ನೀಡುತ್ತಾರೆ. ಇದೆ ಸೋಷಿಯಲ್ ಮೀಡಿಯಾದಲ್ಲೇ ಒಬ್ಬರು ಕೇಳಿದ ಪ್ರಶ್ನೆಗೆ ಇದೀಗ ಜಗ್ಗೇಶ್ ಕೆಲಸ ಮಾಡಿ ತೋರಿಸಿ ಉತ್ತರ ಕೊಟ್ಟಿದ್ದಾರೆ.
ಹೌದು, ನಟ ಜಗ್ಗೇಶ್ ಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿರುವುದು ಗೊತ್ತೆ ಇದೆ. ಹೀಗಿರುವಾಗ ಅವರ ಊರಿನ ಗ್ರಾಮದ ರಸ್ತೆಗೆ ಡಾಂಬರು ಹಾಕುವ ಬಗ್ಗೆ ಸುಮಾರು ಜನ ಪ್ರಶ್ನಿಸಿದ್ದರಂತೆ. ಆ ಪ್ರಶ್ನೆಗೆ ನಟ ಜಗ್ಗೇಶ್ ಖಾಲಿ ಉತ್ತರ ಕೊಟ್ಟಿಲ್ಲ. ಬದಲಿಗೆ ಡಾಂಬರು ಹಾಕಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೆ ಆ ಕೆಲಸ 75% ರಷ್ಟು ಮುಗಿದಿದ್ದು, ಜಗ್ಗೇಶ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ನನ್ನ ಗ್ರಾಮದ ವಿಡಿಯೋ ಪೋಸ್ಟ್ ಮಾಡಿದ್ದೆ. ಆಗ ಅನೇಕರು ಏನ್ ಸರ್ ನಿಮ್ಮೂರಿನ ರೋಡ್ ಹಿಂಗಿದೆ. ಟಾರ್ ಹಾಕಿಲ್ವೆ ಎಂದು ಪ್ರಶ್ನಿಸಿದ್ದರು. ನಾನು ಆ ಕಾರ್ಯ ಮಾಡುವೆ ಎಂದು ಹೇಳಿದ್ದರು ಯಾಕೋ ಕೆಲವರು ಅರ್ಥ ಮಾಡಿಕೊಳ್ಳದೇ ಹಂಗಿಸಿಬಿಟ್ಟರು. ಕೊರೊನಾದಿಂದ ನಿಂತಿದ್ದ ರಸ್ತೆ ಕಾಮಗಾರಿ ಈಗ ಆರಂಭವಾಗಿದೆ. ಸಮಾಧಾನ ಆಯಿತೆ ಸ್ನೇಹಿತರಿಗೆ ಎಂದು ಪ್ರಶ್ನಿಸಿದ್ದಾರೆ.