ನವದೆಹಲಿ: ಕೊರೊನಾ ವೈರಸ್ ಕಾಟ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಕುತ್ತು ಬೀಳುತ್ತಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಧೈರ್ಯ ಮಾಡಿ ಸರ್ಕಾರ ಶಾಲೆ ತೆರೆಯುತ್ತಿದೆಯಾದರೂ, ಅದರಿಂದ ತೊಂದರೆಯೇ ಆಗುತ್ತಿದೆ. ಶಾಲೆಗೆ ಹೋದ ಮಕ್ಕಳು ಮತ್ತು ಶಿಕ್ಷಕರಿಗೆ ಕೊರೊನಾ ಇನ್ನಿಲ್ಲದಂತೆ ಬಾಧಿಸುತ್ತಿದೆ
ಆಂಧ್ರದ ಅಮರಾವತಿಯಲ್ಲೂ ನಿನ್ನೆ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಶಾಲೆಗಳನ್ನ ಆರಂಭಿಸಿದ ಎರಡೇ ದಿನಕ್ಕೆ ಸುಮಾರು 262 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಷ್ಟೇ ಅಲ್ಲ 160 ಶಿಕ್ಷಕರಿಗೆ ಪಾಸಿಟಿವ್ ಬಂದಿರುವ ವರದಿಯಾಗಿದೆ.
ಇದೀಗ ಇಂಥದ್ದೆ ಪರಿಸ್ಥಿತಿ ಉತ್ತರಾಖಂಡ್ ನಲ್ಲೂ ಎದುರಾಗಿದೆ. ಉತ್ತರಾಖಂಡ್ ಗರ್ವಾಲಾ ವಿಭಾಗದ ಪೌರಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ನಿಯಮ ಹಾಗೂ ಮಾರ್ಗಸೂಚಿಯಂತೆ ನವೆಂಬರ್ 2 ರಿಂದ ಶಾಲೆಗಳನ್ನ ಪುನರಾರಂಭಗೊಳಿಸಲಾಗಿತ್ತು. ನಾಲ್ಕು ದಿನಗಳವರೆಗೆ ತರಗತಿಗಳನ್ನ ನಡೆಸುದ್ದಾರೆ.
ಅಲ್ಲಿನ ರಾಜ್ಯದಲ್ಲಿ ಒಟ್ಟು 84 ಶಾಲೆಗಳನ್ನ ತೆರೆಯಲಾಗಿತ್ತು. ಐದೇ ದಿನಕ್ಕೆ 80 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಶಾಲೆಯನ್ನು ಬಂದ್ ಮಾಡಲಾಗಿದೆ.
ಉತ್ತರಾಖಂಡ್ ಪೌರಿ ಜಿಲ್ಲೆಯ ಖಿರ್ಸು, ಪೌರಿ, ಕೊಟ್, ಪಬೊ ಮತ್ತು ಕಲ್ಜಿಖಲ್ ವಿಭಾಗಗಳಲ್ಲಿ 9 ರಿಂದ 12 ನೇ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿತ್ತು. ಅದರಂತೆ 13 ಜಿಲ್ಲೆಗಳಲ್ಲಿ ಶಾಲೆಗಳು ಆರಂಭಗೊಂಡಿದ್ದವು.