Thursday, January 27, 2022
No menu items!
Home Latest ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಇಲ್ಲಿವೆ ಪರಿಹಾರಗಳು..

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಇಲ್ಲಿವೆ ಪರಿಹಾರಗಳು..

ಚಳಿಗಾಲ ಬಂದ ಕೂಡಲೇ ಆರೋಗ್ಯ, ಚರ್ಮ ಸಮಸ್ಯೆಗಳು ಹೆಚ್ಚು ತಲೆದೂರುತ್ತವೆ. ಡ್ರೈಸ್ಕಿನ್, ತ್ವಚೆಯ ಕಾಂತಿ ಕುಂದುವುದು, ಕೂದಲು ಒಣಗುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಇದರ ಜೊತೆಗೆ ಪಾದದ ಬಿರುಕು, ತುಟಿ ಒಡೆಯುವುದು ಸೇರಿಕೊಂಡರಂತೂ ಮುಗಿದೇ ಹೋಯಿತು.
ಚಳಿಗಾಲ ಈಗಾಗ್ಲೇ ಶುರುವಾಗಿದ್ದು, ಇನ್ನೂ 2-3 ತಿಂಗಳ ಕಾಲ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಹೋಗುತ್ತದೆ. ಈ ನಡುವಲ್ಲೇ ಕೊರೊನಾ ವೈರಸ್ ಕೂಡ ತಲೆದೂರಿದ್ದು, ಚಳಿಗಾಲ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದ ನಡುವಲ್ಲೇ ಎದುರಾಗುವ ಚರ್ಮದ ಸಮಸ್ಯೆಗಳಿಗೆ ಚರ್ಮ ರೋಗ ತಜ್ಞರು ನೀಡಿರುವ ಕೆಲ ಸಲಹೆಗಳು ಇಂತಿವೆ.
ನಿರಂತರವಾಗಿ ಮಾಸ್ಕ್ಗಳನ್ನು ಬಳಕೆ ಮಾಡುವುದರಿಂದ ಚರ್ಮದ ಮೇಲೆ ಒತ್ತಡ ಹೆಚ್ಚಾಗಲಿದ್ದು, ಗಾಳಿಯಾಡುವುದು ಕಡಿಮೆಯಾಗುತ್ತದೆ. ಇದರಿಂದ ಮುಖ ಎಣ್ಣೆಯುಕ್ತವಾಗಲಿದ್ದು, ಬೆವರುವಿಕೆ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಚರ್ಮದ ಅಲರ್ಜಿ ಹೆಚ್ಚಾಗುತ್ತದೆ. ಮೊಡವೆಗಳು ಹೆಚ್ಚಾಗುವುದು, ದದ್ದುಗಳಾಗುವುದು ಹೀಗೆ ಚರ್ಮ ಸಮಸ್ಯೆಗಳು ಹೆಚ್ಚಾಗುತ್ತದೆ. ಇದರಿಂದ ದೂರ ಉಳಿಯರು ಫೇಸ್ ಫ್ರೆಂಡ್ಲಿ ಆಂಟಿ ಬ್ಯಾಕ್ಟೀರಿಯಲ್ ವೈಪ್ಸ್ಗಳನ್ನು ಬಳಕೆ ಮಾಡಬೇಕು. ಇದರಿಂದ ಒಮ್ಮೆಯಾದರೂ ಮುಖವನ್ನು ಒರೆಸುವುದರಿಂದ ಸಮಸ್ಯೆಗಳು ದೂರಾಗುತ್ತವೆ. ಮಾಸ್ಕ್ ಗಳಿಂದ ಅಲರ್ಜಿ ಎದುರಿಸುವವರು ಬಟ್ಟೆಗಳಿಂದ ಮಾಡಿದ ಮಾಸ್ಕ್ ಧರಿಸುವುದು ಉತ್ತಮ.
ಸೂಕ್ತ ಉತ್ಪನ್ನವನ್ನು ಬಳಸುವುದರಿಂದ ಚರ್ಮ ತೇವಯುತವಾಗಿರುವಂತೆ ನೋಡಿಕೊಳ್ಳಬೇಕು.
ಸೂರ್ಯನಕಿರಣಗಳು ಬಟ್ಟೆಯನ್ನು ಭೇದಿಸಿ ಚರ್ಮದ ಮೇಲೆ ತಾಕುವುದರಿಂದ ಸನ್ಸ್ಟ್ರೀನ್ ಬಳಸುವುದು ಉತ್ತಮ.
ಪಾದರಕ್ಷೆಗಳನ್ನು ಧರಿಸುವುದಕ್ಕೂ ಮೊದಲು ನಿಮ್ಮ ಪಾದಗಳನ್ನು ಸಂಪೂರ್ಣವಾಗಿ ಒಣಗಿಸಿ ಮತ್ತು ಮೈಮೇಲೆ ಧರಿಸುವುದಕ್ಕೂ ಮೊದಲು ನಿಮ್ಮ ಬಟ್ಟೆಗಳು ಸಂಪೂರ್ಣವಾಗಿ ಒಣಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಚರ್ಮದ ಸೋಂಕುಗಳಾಗುತ್ತಿವೆಯೇ ಎಂಬುದನ್ನು ಆಗಾಗ ಗಮನಿಸುತ್ತಿರಿ. ಮುಖ್ಯವಾಗಿ ನಿಮ್ಮ ಕಾಲುಗಳ ಮೇಲೆ ಹೆಚ್ಚಿನ ಗಮನಹರಿಸಿ. ಮಲಗುವ ಮುನ್ನ ಪ್ರತಿ ರಾತ್ರಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ ಒಣಗಿಸಿ. ನೀವು ಮದುಮೇಹದಿಂದ ಬಳಲುತ್ತಿದ್ದರೆ, ಪಾದಗಳ ಆರೈಕೆ ಅತ್ಯಂತ ಮುಖ್ಯವಾಗುತ್ತದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments