Monday, January 24, 2022
No menu items!
Home Latest ದೇಹದ ಬೊಜ್ಜು ಕರಗಿಸಲು ಎಳ್ಳು ಸೇವಿಸಿ

ದೇಹದ ಬೊಜ್ಜು ಕರಗಿಸಲು ಎಳ್ಳು ಸೇವಿಸಿ

ಆರೋಗ್ಯಕ್ಕಾಗಿ ಎಳ್ಳು ಸೇವಿಸಿರಿ ಎಂದ ಕೂಡಲೇ, ಅಯ್ಯೋ ಅದು ಉಷ್ಣ ಎನ್ನುತ್ತಾರೆ. ಎಳ್ಳೆಣ್ಣೆ ಹಚ್ಚಿ ಅಭ್ಯಂಗ ಸ್ನಾನಮಾಡಿ ಎಂದರೆ ಅಯ್ಯೋ ಅದು ತುಂಬಾ ತಂಪು, ಶೀತವಾಗುತ್ತದೆ ಎಂದು ಗೊಣಗುವವರ ಸಂಖ್ಯೆಯೇ ಜಾಸ್ತಿ.

ಭಾರತೀಯರು ಎಳ್ಳನ್ನು ಎಣ್ಣೆರೂಪದಲ್ಲಿ, ಆಹಾರದಲ್ಲಿ, ಹೋಮ-ಹವನ-ತರ್ಪಣಾದಿ ಕ್ರಿಯೆಗಳಲ್ಲೋ, ಔಷಧದಲ್ಲಿ ಉಪಯೋಗಿಸುತ್ತಾರೆ.
ಎಳ್ಳಿನಲ್ಲಿ ಕೊಬ್ಬು, ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಮ್, ಫೊಸ್ಪರಸ್, ಪ್ರೊಟೀನ್, ಜಿಂಕ್ ಹೀಗೆ ಹಲವಾರು ಘಟಕಗಳು ಕಂಡುಬರುತ್ತವೆ.

ಎಳ್ಳಲ್ಲಿರುವ ಕೊಬ್ಬಿನಂಶವು ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕುಗ್ಗಿಸುತ್ತದೆ. ದೇಹದ ಅಧಿಕ ಬೊಜ್ಜು ಹಾಗೂ ಕೊಬ್ಬಿನಂಶವನ್ನು ಕಡಿಮೆಗೊಳಿಸುತ್ತದೆ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ. ಎಳ್ಳಲ್ಲಿ ಸಾಕಷ್ಟು ನಾರಿನಂಶವಿದ್ದು ಮಲಬದ್ಧತೆ, ಮೂಲವ್ಯಾಧಿಗಳಂತಹ ಸಮಸ್ಯೆಗಳ ನಿವಾರಣೆಮಾಡುತ್ತದೆ. ಇದರಲ್ಲಿ ’ಫೊಲಿಕ್‌ಏಸಿಡ್’ ಅಧಿಕವಾಗಿ ಕಂಡುಬರುವ ಕಾರಣ ಇದನ್ನು ಗರ್ಭಧರಿಸುವ ಮುನ್ನ ದಿನನಿತ್ಯ ಒಂದು ಚಮಚ ತಿನ್ನಬಹುದು. ಗರ್ಭಧರಿಸಿದ ಮೇಲೆ ಎಳ್ಳಿನ ಸೇವನೆಯನ್ನು ನಿಲ್ಲಿಸಬೇಕು.


ಇದರ ಸಂಪೂರ್ಣ ಪ್ರಯೋಜನ ಪಡೆಯಲು ಆಹಾರದಲ್ಲಿ ಶುದ್ಧವಾದ ಕಪ್ಪು ಎಳ್ಳು ಅಥವಾ ಎಳ್ಳೆಣ್ಣೆಯನ್ನು ಬಳಸಬೇಕು.

ಪ್ರತಿನಿತ್ಯ ಒಂದು ಹೊತ್ತಿನ ಆಹಾರದ ಬದಲಿಗೆ ಎಳ್ಳುಪಾನಕ ಸೇವಿಸಿದರೆ ದೇಹದ ಬೊಜ್ಜು ನಿವಾರಣೆಯಾಗುವುದಲ್ಲದೆ ಸಂಧಿಗಳ ನೋವು, ಸವೆತವನ್ನು ತಡೆಗಟ್ಟಬಹುದು.


ಮಕ್ಕಳು ಪ್ರತಿದಿನ ಎರಡು ಎಳ್ಳುಂಡೆ ಸೇವಿಸಿದರೆ, ಮೂಳೆ, ಹಲ್ಲು ಚೆನ್ನಾಗಿ ಬೆಳೆಯುವುದು. ಏಕಾಗ್ರತೆ, ರೋಗನಿರೋಧಕಶಕ್ತಿ ಹೆಚ್ಚುವುದು.ಶರೀರದ ಬೆಳವಣಿಗೆಯು ಸಹಜವಾಗಿ ಆಗುವುದು.

ಎಳ್ಳು ಸೇವನೆಯಿಂದ ಮುಟ್ಟಿನಲ್ಲಿ ಏರುಪೇರು, ಮುಟ್ಟಿನ ನೋವಿನಿಂದ ಪರಿಹಾರ ಸಿಗುವುದು.

ಎಳ್ಳೆಣ್ಣೆಯಲ್ಲಿ ವಿಟಮಿನ್ ಇ ಹಾಗೂ ಕೀಟಾಣು, ವೈರಾಣು ನಾಶಕ ಗುಣಗಳಿವೆ. ಹಾಗಾಗಿ ದಿನನಿತ್ಯ ’ಆಯಿಲ್ ಪುಲ್ಲಿಂಗ್’ ಮಾಡಿದಲ್ಲಿ ವಸಡಿನ ರಕ್ತಸ್ರಾವ, ನೋವು, ಹಲ್ಲು ಹುಳುಕಾಗುವಿಕೆ, ಬಾಯಿಹುಣ್ಣಿನಂತ ಸಮಸ್ಯೆಗಳನ್ನು ಸುಲಭವಾಗಿ ಗುಣಪಡಿಸಬಹುದು.


ಎಳ್ಳೆಣ್ಣೆಯು ಚರ್ಮದ ಕಾಂತಿ ವೃದ್ಧಿಸುತ್ತದೆ. ಕೂದಲು ಕಪ್ಪಾಗಿ, ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ದೇಹವನ್ನು ತಂಪಾಗಿರಿಸುತ್ತದೆ. ಚರ್ಮದ ಮೇಲಿನ ಸುಕ್ಕು, ಗಾಯ, ಬಿರುಕು, ಕಲೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕೋಮಲಗೊಳಿಸುತ್ತದೆ.

ಕೂದಲು ಮತ್ತು ತ್ವಚೆಯ ರಕ್ಷಣೆಗೆ ವಾರಕ್ಕೊಮ್ಮೆಯಾದರೂ ಎಳ್ಳೆಣ್ಣೆ ಸ್ನಾನವನ್ನು ಮಾಡಬೇಕು.


ಮುಖದಲ್ಲಿ ಕಪ್ಪು ಕಲೆಗಳಿವೆಯಾ? ಕಪ್ಪೆಳ್ಳನ್ನು ಹಾಲಲ್ಲಿ ನೆನೆಸಿ, ರುಬ್ಬಿ, ಸಾಯಂಕಾಲ ಅರ್ಧಗಂಟೆ ಲೇಪಿಸಿರಿ.

ಮುಟ್ಟಾಗುವ ಐದು ದಿನ ಮೊದಲಿನಿಂದ ಒಂದು ದೊಡ್ಡ ಚಮಚ ಕಪ್ಪೆಳ್ಳನ್ನು ಹುರಿದು, ಹುಡಿಮಾಡಿ, ಒಂದು ಲೋಟ ನೀರಲ್ಲಿ ಕುದಿಸಿ, ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಯಿರಿ.


ಎಳ್ಳಿನಲ್ಲಿರುವ ಮ್ಯಾಗ್ನೇಶಿಯಂ ಮತ್ತು ಇನ್ನಿತರ ಪೋಷಕಾಂಶಗಳು ಮಧುಮೇಹವನ್ನು ಹತೋಟಿಗೆ ತರುವಲ್ಲಿ ಸಹಕಾರಿಯಾಗಿದೆ. ಇದು ಪ್ಲಾಸ್ಮಾ ಗ್ಲುಕೋಸ್‌ಅನ್ನು ಹೆಚ್ಚಿಸುವ ಕಾರಣ ಅಧಿಕ ರಕ್ತದೊತ್ತಡದಿಂದ ಬಳಲುವವರಿಗೆ ಸಹ ಎಳ್ಳಿನಿಂದ ಉಪಯೋಗವಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments