ಬೆಂಗಳೂರು: ಕೋವಿಡ್ ಕಾಟದಿಂದಾಗಿ ಶಾಲೆಗಳ ಪುನರಾರಂಭದ ವಿಷಯ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಎಲ್ಲ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ. ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ 4 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ ಎಂದು ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶಾಲೆ ಪುನರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ.
ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಪರ್ಫಾರ್ಮೆನ್ಸ್ ಪರಿಗಣಿಸಿ ಬಡ್ತಿ ನೀಡಿ.

ಮಕ್ಕಳ ಓದುವಿಕೆ ಆಧಾರದಲ್ಲಿ ಎಲ್ಲ ಮಕ್ಕಳಿಗೂ A,B,C,D, ಎಂಬ ದರ್ಜೆಯನ್ನು ಸಂಬಂಧಿಸಿದ ಶಾಲೆಗಳೆ ನಿರ್ಧರಿಸಿ ನೀಡಲಿ. 10 ಮತ್ತು 12ನೇ ತರಗತಿಗೆ ಇದು ಸಂಪೂರ್ಣವಾಗಿ ಅನ್ವಯವಾಗಲಿ. 1 ರಿಂದ 9ನೇ ತರಗತಿಯವರಿಗೆ ಸಮಾನ ದರ್ಜೆ ನೀಡಿ ಬಡ್ತಿ ನೀಡಲಿ. 2021ರ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿ.

ಕೊರೋನಾ ನಿಯಂತ್ರಣಕ್ಕೆ ಬಾರದೆ ಸೋಂಕು ವಿಪರೀತ ವಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳ ಆರಂಭ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ ಎಂಬುದನ್ನು ಸರಕಾರ ಮನಗಾಣಬೇಕು ಎಂದು ಸರ್ಕಾರ ಹೆಚ್ಡಿಕೆ ಎಚ್ಚರಿಸಿದ್ದಾರೆ.ಇದೇ ವಿಚಾರವಾಗಿ ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಶಾಲೆ ಪ್ರಾರಂಭಿಸಿಬಾರದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು