Thursday, May 13, 2021
No menu items!
Home Entertainment ( Kan ) ಪ್ರೀತಿ ತೋರಿಸಿದ ಅಭಿಮಾನಿಗಳಿಗೆ ಸಂಜನಾ ಕೊಟ್ರು ಹಾರ್ಟ್

ಪ್ರೀತಿ ತೋರಿಸಿದ ಅಭಿಮಾನಿಗಳಿಗೆ ಸಂಜನಾ ಕೊಟ್ರು ಹಾರ್ಟ್

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಜೈಲಿನಿಂದ ಬಂದಾದ ಮೇಲೆ ಇದೀಗ ಸಖತ್ ಆ್ಯಕ್ಟೀವ್ ಆಗಿದ್ದಾರೆ. Instagram ನಲ್ಲಿ ಸಂಜನಾ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.


ಜೈಲಿನಲ್ಲಿದ್ದಾಗ ಯಾರೆಲ್ಲಾ ಪ್ರೀತಿ ತೋರಿಸಿದ್ದಾರೋ ಅವರಿಗೆಲ್ಲಾ ಸಂಜನಾ ಮೆಸೇಜ್ ಪಾಸ್ ಮಾಡಿದ್ದಾರೆ. ನಾನು ಜೈಲಲಿದ್ದಾಗ ಯಾರೆಲ್ಲಾ ಪಾಸಿಟಿವ್ ಮೆಸೇಜ್ ಮಾಡಿದ್ದೀರೋ, ಅವರಿಗೆಲ್ಲಾ ಲಾಟ್ಸ್ ಆಫ್ ಲವ್ ಹೇಳ್ತೀನಿ. ನಾನು ಪ್ರತಿಯೊಂದು ಮೆಸೇಜ್ ನೂ ನೋಡಿದ್ದೇನೆ. ನಿಮ್ಮ ಆಶೀವಾರ್ದಿಂದ ಮೆಸೇಜ್ ನಿಂದ ಖುಷಿಯಾಗಿದೆ ಎಂದಿದ್ದಾರೆ.


ನನ್ನ ಆರೋಗ್ಯ ಸರಿ ಹೋದ ಮೇಲೆ ನಾನು ವಾಪಾಸ್ ಸೋಷಿಯಲ್ ಮೀಡಿಯಾ ಬರುತ್ತೇನೆ. ನಿಮಗೆಲ್ಲಾ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಅದರಲ್ಲೂ ನನ್ನ ಫ್ಯಾಮಿಲಿ, ಸ್ನೇಹಿತರು ಹಾಗೂ ಇನ್ಸ್ಟಾಗ್ರಾಂ ಅಭಿಮಾನಿಗಳಿಗೆ, ಲವ್ ಯು ಆಲ್ ಎಂದು ಪೋಸ್ಟ್ ಮಾಡಿದ್ದಾರೆ.

ಸಂಜನಾ ಪೋಸ್ಟ್ ಗೆ ಅಭಿಮಾನಿಗಳು ಕೂಡ ಪಾಸಿಟಿವ್ ಕಮೆಂಟ್ಸ್ ಮಾಡಿದ್ದಾರೆ. ಬೇಸರ ಪಟ್ಟುಕೊಳ್ಳಬೇಡಿ, ಧೈರ್ಯವಾಗಿ ಕಮ್ ಬ್ಯಾಕ್ ಮಾಡಿ. ಈ ಎಲ್ಲಾ ಜಂಜಾಟದ ನಡುವೆ ಧೈರ್ಯವಾಗಿರಿ. ನಮ್ಮನ್ನು ನಿಮ್ಮ ಕುಟುಂಬದಂತೆ ನೋಡಿದ್ದೀರಾ. ಆ ಕೆಟ್ಟ ಘಟನೆ ಮರೆತು ಬಿಗ್ ಕಮ್ ಬ್ಯಾಕ್ ಮಾಡಿ ಎಂದು ಅಭಿಮಾನಿಗಳು ಸಂಜನಾ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಂಜನಾ ಸುಮಾರು 3 ತಿಂಗಳ ಬಳಿಕ ಸೋಷಿಯಲ್ ಮೀಡಿಯಾಗೆ ಬಂದಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ಸಂಜನಾ, ಅನಾರೋಗ್ಯ‌ ಕಾರಣದಿಂದ ಜಾಮೀನು ತೆಗೆದುಕೊಂಡು ಬಂದಿದ್ದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments