Wednesday, June 16, 2021
No menu items!
Home Bharata RRR ಸಿನಿ ವಿವಾದ; ನಿರ್ದೇಶಕ ರಾಜಮೌಳಿಗೆ ಬಿಜೆಪಿ ರಾಜ್ಯಾಧ್ಯಕ್ಷನಿಂದ ಬೆದರಿಕೆ..

RRR ಸಿನಿ ವಿವಾದ; ನಿರ್ದೇಶಕ ರಾಜಮೌಳಿಗೆ ಬಿಜೆಪಿ ರಾಜ್ಯಾಧ್ಯಕ್ಷನಿಂದ ಬೆದರಿಕೆ..

ಹೈದ್ರಾಬಾದ್: ಸಿನಿ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ . ಇವರ ನಿರ್ದೇಶನದ ಸಿನಿಮಾ ಎಂದರೆ ಸಾಕು ಇಡೀ ದೇಶದ ಚಿತ್ರರಂಗವೇ ಇವರ ಕಡೆ ತಿರುಗಿ ನೋಡುತ್ತದೆ. ಬಾಹುಬಲಿ, ಈಗ, ಮಗಧೀರ ಸಿನಿಮಾಗಳೇ ಇವರ ನಿರ್ದೇಶನಕ್ಕೆ ಸಾಕ್ಷಿ . ಇದೀಗ ರಾಜಮೌಳಿ ಬಹುತಾರಾಗಣದ ‘ಆರ್ ಆರ್ ಆರ್’ ಸಿನಿಮಾ ನಿರ್ದೇಶಿಸುತ್ತಿದ್ದು , ಈ ಸಿನಿಮಾ ಇದೀಗ ವಿವಾದದ ಕಿಡಿ ಹೊತ್ತಿಸುತ್ತಿದೆ.

ಬಹುತಾರಾಗಣ ಹೊಂದಿರುವ ಈ ಸಿನಿಮಾದಲ್ಲಿ ರಾಮ್ ಚರಣ್, ಜೂ.ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ತಾರಾನಟರು ನಟಿಸುತ್ತಿದ್ದಾರೆ. ಆದರೆ ” RRR” ಚಿತ್ರವನ್ನ ರಿಲೀಸ್ ಮಾಡಿದರೆ ಥಿಯೇಟರ್‌ಗಳಿಗೆ ಬೆಂಕಿ ಇಡುವುದಾಗಿ ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ , ರಾಜಮೌಳಿಗೆ ಬೆದರಿಕೆ ಹಾಕಿದ್ದಾರೆ.

ಚಿತ್ರತಂಡ ಅಕ್ಟೋಬರ್ 21 ರಂದು ಆರ್ ಆರ್ ಆರ್ ಸಿನಿಮಾದ ಟೀಸರ್ ಮಾಡಿತ್ತು. ಟೀಸರ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮರಾಮ್ ಭೀಮ್ ಅವರನ್ನ ತಪ್ಪಾಗಿ ಬಿಂಬಿಸಲಾಗಿದೆ ಎನ್ನುವುದೇ ಈ ಎಲ್ಲಾ ಕೋಪಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮರಾಮ್ ಭೀಮ್ ಅವರ ಪಾತ್ರವನ್ನ ಜೂ. ಎನ್ ಟಿ ಆರ್ ನಿರ್ವಹಿಸುತ್ತಿದ್ದಾರೆ . ಕೊಮರಾಮ್ ಭೀಮ್ ಅವರು ಬುಡಕಟ್ಟು ಜನಾಂಗದ ನೆಲ- ಜಲಕ್ಕಾಗಿ ಹೋರಾಡಿದವರು. ಆದರೆ ಅವರನ್ನ ಚಿತ್ರದಲ್ಲಿ ಮುಸ್ಲಿಂ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದೇ ಇದೀಗ ವಿವಾದದ ಕಿಡಿ ಹೊತ್ತಲು ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಸಂಜಯ್ ಕುಮಾರ್ , ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ, ಸಿನಿಮಾದಲ್ಲಿ ಇಂತಹ ದೃಶ್ಯ ತೋರಿಸದಿರಿ, ತಾಕತ್ತಿದ್ದರೆ ನಿಮ್ಮ ಮುಸ್ಲಿಂ ನವಾಬನಿಗೆ ಕೇಸರಿ ರುಮಾಲು ಸುತ್ತಿಕೊಳ್ಳಲು ಹೇಳಿ. ಆದಿವಾಸಿ ವ್ಯಕ್ತಿಗೆ ಮುಸ್ಲಿಂ ವೇಷ ಧರಿಸಿ ಅವಮಾನ ಮಾಡುತ್ತಿದ್ದೀರಿ. ಇಂತಹ ದೃಶ್ಯಗಳನ್ನು ತೋರಿಸಿದರೆ ಥಿಯೇಟರ್‌ಗಳಿಗೆ ಬೆಂಕಿ ಇಡುವುದಾಗಿ ವಾರ್ನ್ ಮಾಡಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments