Wednesday, October 27, 2021
No menu items!
Home Karavali ಮಂಗಳೂರಿನಲ್ಲಿ ರೌಡಿಶೀಟರ್ ಇಂದ್ರಜಿತ್ ಭೀಕರ ಹತ್ಯೆ..!

ಮಂಗಳೂರಿನಲ್ಲಿ ರೌಡಿಶೀಟರ್ ಇಂದ್ರಜಿತ್ ಭೀಕರ ಹತ್ಯೆ..!

ಮಂಗಳೂರು: ನಗರದ ಬೊಕ್ಕಪಟ್ಟಣ್ಣದ ಕರ್ನಲ್ ಗಾರ್ಡನ್ ಬಳಿ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ಆಗಿರಬಹುದೆಂದು ಶಂಕಿಸಲಾಗಿದ್ದು, ಮೃತ ವ್ಯಕ್ತಿಯನ್ನು ಇಂದ್ರಜೀತ್ (29) ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಸ್ನೇಹಿತನ ಮೆಹಂದಿ ಕಾರ್ಯಕ್ರಮಕ್ಕೂ ತೆರಳಿದ್ದ. ಈ ವೇಳೆ ಸ್ನೇಹಿತರ ಜೊತೆಗೂಡಿ ಅಮಲೇರಿಸಿಕೊಂಡ ಬಳಿಕ ಮತ್ತೆ ಹಳೇ ಘಟನೆಗಳು ನೆನಪಾಗಿವೆ. ಸ್ಥಳೀಯ ಯುವಕರ ಜೊತೆ ಮಾತಿಗೆ ಮಾತು ಬೆಳೆದು ಹೊಡೆದಾಟ ಕೂಡ ಆಗಿದೆ. ಗ್ಯಾಂಗ್ಗಳ ನಡುವಿನ ಹೊಡೆದಾಟ ಭೀಕರ ಹತ್ಯೆಯ ಮೂಲಕ ಅಂತ್ಯಗೊಂಡಿದೆ. ಐದು ವರ್ಷಗಳ ಹಿಂದೆ ಇದೇ ಇಂದ್ರಜಿತ್ ಮೇಲೆ ಬೇರೆ ತಂಡವೊಂದು ಹತ್ಯೆಯತ್ನ ಮಾಡಿತ್ತು. ಈ ಘಟನೆಯಲ್ಲಿ ಇಂದ್ರಜಿತ್ ಕೈಗೆ ಗಂಭೀರ ಸ್ವರೂಪದ ಗಾಯವಾಗಿ ಮತ್ತೆ ಭಾರಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಇಂದ್ರಜಿತ್ ತಾಯಿ ಸ್ಥಳೀಯ ಕ್ಯಾಟರಿಂಗ್ನಲ್ಲಿ ಕೆಲಸ ಮಾಡಿಕೊಂಡಿದ್ದು ನಿನ್ನೆ ರಾತ್ರಿ ಎಂಟು ಗಂಟೆಯವರೆಗೂ ಇಂದ್ರಜಿತ್ ಮನೆಯಲ್ಲೇ ಇದ್ದ. ಆ ಮೇಲೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದು ಅಲ್ಲಿ ಗಲಾಟೆ ಆಗಿ ಆತನ ಕೊಲೆಯಾಗಿದೆ. ಬೆಳಗ್ಗಿನ ಜಾವ ಮನೆಯಲ್ಲಿದ್ದು, ರಾತ್ರಿ ತಿರುಗುವ ಚಟ ಹೊಂದಿದ್ದ ಇಂದ್ರಜಿತ್ ನಿನ್ನೆ ನಡುರಾತ್ರಿಯಲ್ಲೇ ಹತ್ಯೆಯಾಗಿದ್ದಾನೆ.

ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಇಂದ್ರಜಿತ್ ಹಲವು ಸಮಯದಿಂದ ಪಾತಕಲೋಕದ ಕಿರಿಕಿರಿಯಿಂದ ದೂರು ಉಳಿದಿದ್ದ. ಘಟನಾ ಸ್ಥಳಕ್ಕೆ ಬರ್ಕೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments