Monday, June 14, 2021
No menu items!
Home Bharata ಪಕ್ಕದ ಮನೆಯಲ್ಲೇ ಕಳ್ಳರಿದ್ದರೂ ಗೊತ್ತಾಗಲಿಲ್ವಾ..?

ಪಕ್ಕದ ಮನೆಯಲ್ಲೇ ಕಳ್ಳರಿದ್ದರೂ ಗೊತ್ತಾಗಲಿಲ್ವಾ..?

ಹೈದರಾಬಾದ್: 15 ತಿಂಗಳ ಹಿಂದೆ ದೇವಸ್ಥಾನಕ್ಕೆ ಹೋಗಿ ಬರುವುದರೋಳಗೆ ಆ ಒಂದು ಮನೆಯಲ್ಲಿ ಕಳ್ಳತನವಾಗಿತ್ತು. ಆದರೆ, ಕಳ್ಳ ಮಾತ್ರ ಸಿಗಲೇ ಇಲ್ಲ. ಆದರೆ 15 ತಿಂಗಳ ನಂತರ ಕಳ್ಳತನ ಮಾಡಿದವರ ಬಗ್ಗೆ ಮಾಹಿತಿ ನೀಡಿತ್ತು ಆ ಒಂದೇ ಒಂದು ವಾಟ್ಸಪ್ ಸ್ಟೇಟಸ್.

ಹೌದು.. ಹೈದರಾಬಾದ್ ನ ಸಾಯಿಪುರಿ ಕಾಲೋನಿಯ ನಿವಾಸಿ ರವಿಕಿರಣ್ ಎಂಬುವರು ಜುಲೈ 12ರಂದು 2019ರಂದು ಮನೆಯಿಂದ ಆಚೆ ದೇವಸ್ಥಾನಕ್ಕೆಂದು ಹೋಗಿದ್ದರು.

ದೇವಾಲಯಕ್ಕೆ ಹೋಗಿ ಬರುವುದರೊಳಗೆ ರವಿಕಿರಣ್ ಅವರ ಮನೆ ಬಾಗಿಲು ತೆರೆದಿತ್ತು. ತಾನೇ ಮರೆತು ಮನೆ ಬಾಗಿಲು ಹಾಕದೇ ದೇವಸ್ಥಾನಕ್ಕೆ ಹೋಗಿದ್ದೇನೆ ಎಂದುಕೊಂಡು ಒಳ ಹೋದರು. ಆದರೆ, ರವಿಕಿರಣ್ ಒಳ ಹೋದಾಗಲೇ ಗೊತ್ತಾಗಿದ್ದು, ಮನೆಯಲ್ಲಿ ಕಳ್ಳತನವಾಗಿದೆ ಎಂದು. ಮನೆಯಲ್ಲಿದ್ದ ಚಿನ್ನಾಭರಣಗಳು ಕಳುವಾಗಿದ್ದವು ಈ ಬಗ್ಗೆ ರಾಚಕೊಂಡ ಪೊಲೀಸ್ ಠಾಣೆಗೆ ದೂರು ನೀಡಿ ಸುಮ್ಮನಾಗಿದ್ದರು.

ಆದರೆ, ಕಳೆದವಾರ ಪಕ್ಕದ ಮನೆಯ ಹೆಂಗಸು ಒಡವೆ ಧರಿಸಿದ್ದ ಫೋಟೋವನ್ನು ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಈ ಸ್ಟೇಟಸ್ ನೋಡಿದ ರವಿಕಿರಣ್ ಶಾಕ್ ಆಗಿದ್ದಾರೆ. ಯಾಕಂದ್ರೆ ಆಕೆ ಹಾಕಿದ್ದ ಒಡವೆಗಳು ತಮ್ಮ ಮನೆಯದ್ದೇ ಆಗಿತ್ತು. ಅನುಮಾನಗೊಂಡ ರವಿಕಿರಣ್, ಪೊಲೀಸ್ ಠಾಣೆಯಲ್ಲಿ ಮತ್ತೆ ದೂರು ನೀಡಿದರು.

ನಂತರ ಪೊಲೀಸರು ಬಂದು ಮಹಿಳೆಯನ್ನು ವಿಚಾರಣೆ ನಡೆಸಿದ್ದರು. ವಿಚಾರಣೆ ನಡೆಸಿದಾಗ ಮಹಿಳೆ ಓಡವೆಗಳನ್ನು 15 ತಿಂಗಳ ಹಿಂದೆ ತಮ್ಮ ಮಗ ಜಿತೇಂದರ್ ತಂದುಕೊಟ್ಟಿದ್ದು ಎಂದು ಹೇಳಿದ್ದಾರೆ. ಕೊನೆಗೆ ಪೊಲೀಸರು ಜೀತೇಂದರ್ ಅವರನ್ನು ವಿಚಾರಣೆ ನಡೆಸಿ ಕಳ್ಳತನದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಬಳಿಕ, ಆರೋಪಿ ಜಿತೇಂದರ್ ನನ್ನು ಅರೆಸ್ಟ್ ಮಾಡಿದ ಪೊಲೀಸರು, ಕಳ್ಳತನದ ಬಗ್ಗೆ ಗೊತ್ತಿದ್ದರೂ, ಪೊಲೀಸರಿಗೆ ಮಾಹಿತಿ ನೀಡಿಲ್ಲವೆಂದು ಹೇಳಿ ತಾಯಿಗೆ ನೊಟೀಸ್ ನೀಡಲಾಗಿದೆ. ಇನ್ನು ಒಡವೆಗಳನ್ನು ಪೊಲೀಸರು ರವಿಕಿರಣ್ ಅವರಿಗೆ ವಾಪಸ್ ಮಾಡಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments