Saturday, June 19, 2021
No menu items!
Home Entertainment ( Kan ) ಅಂಬಿಯ ಎರಡನೇ ವರ್ಷದ ಪುಣ್ಯತಿಥಿ: ಮಂಡ್ಯದಲ್ಲಿ ನಿರ್ಮಾಣವಾಯ್ತು ಅಂಬಿಯ ಗುಡಿ

ಅಂಬಿಯ ಎರಡನೇ ವರ್ಷದ ಪುಣ್ಯತಿಥಿ: ಮಂಡ್ಯದಲ್ಲಿ ನಿರ್ಮಾಣವಾಯ್ತು ಅಂಬಿಯ ಗುಡಿ

ಬೆಂಗಳೂರು: ನವೆಂಬರ್ 24..ಸ್ಯಾಂಡಲ್ ವುಡ್ ರೆಬಲ್ ಸ್ಟಾರ್..ಕಲಿಯುಗದ ಕರ್ಣ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಎರಡು ವರ್ಷ. ಹೀಗಾಗಿ ಕಂಠೀರವ ಸ್ಟುಡಿಯೋಗೆ ತೆರಳಿದ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಕಳೆದ ವರ್ಷ ವರ್ಷದ ಪುಣ್ಯ ಸ್ಮರಣೆಗೆ ‘ಸ್ನೇಹ ಸಾಗರ, ಪ್ರೀತಿ ಅಜರಾಮರ’ ಎನ್ನುವ ಹೆಸರಿನಲ್ಲಿ ಅಂಬರೀಶ್ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ಅಂಬಿ ಪುಣ್ಯತಿಥಿಗೆ ಕೊರೊನಾ ಅಡ್ಡಿ ಬಂದ ಹಿನ್ನಲ್ಲೆ ಕುಟುಂಬದವರು ಮಾತ್ರ ಪುಣ್ಯ ತಿಥಿ ಕಾರ್ಯ ಮಾಡಲಿದ್ದಾರೆ.

ಇನ್ನು ಮಂಡ್ಯದಲ್ಲಿ ಅಂಬಿಯ ನೆನಪಿಗಾಗಿ ಸುಂದರವಾದ ಗುಡಿ ಕಟ್ಟಿದ್ದಾರೆ. ವ್ಯಕ್ತಿ ಸತ್ತರು ಅಂಬಿ ಮೇಲಿನ ಪ್ರೀತಿ, ಅಭಿಮಾನ ಕಡಿಮೆ ಆಗಿಲ್ಲ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗ ಕರ್ಣನಿಗೆ ಅಭಿಮಾನಿಗಳು ಪ್ರೀತಿಯಿಂದ ಗುಡಿ ಕಟ್ಟಿದ್ದಾರೆ. ಅಂಬರೀಶ್ ಅವರ ವ್ಯಕ್ತಿತ್ವದ ನೆನಪನ್ನ ಮುಂದಿನ ಪೀಳಿಗೆಗು ತಿಳಿಯುವಂತೆ ಮಾಡುತ್ತಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಗುಡಿ ಕಟ್ಟಿದ್ದಾರೆ. ಇಲ್ಲಿನ ಜನರಿಗೆ ಅಂಬರೀಶ್ ಒಬ್ಬ ನಾಯಕ ನಟ ಅಲ್ಲ ಆರಾಧ್ಯ ದೈವ. ಹಾಗಾಗಿ ಈ ಜನರು ಅಂಬಿಯನ್ನ ದೇವರೆಂದೆ ಭಾವಿಸಿದ್ದಾರೆ. ಸುಮಾರು 100 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರು ಅಂಬಿ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಅಂಬರೀಶ್ ಹುಟ್ಟಿದ ದಿನ ಮೇ 29ರಂದು ಈ ಊರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಮನೆಮನೆಗಳಲ್ಲೂ ಹಸಿರು ತೋರಣ ಕಟ್ಟಿ ಅಂಬಿ ಹುಟ್ಟುಹಬ್ಬವನ್ನ ಊರ ಹಬ್ಬದ ರೀತಿಯಲ್ಲಿ ಆಚರಿಸುವ ಇವರು. ತಮ್ಮೂರಿನ ಮೇಲಿದ್ದ ಅಂಬಿಯ ಅವಿನಾಭಾವ ಸಂಬಂಧಕ್ಕೆ ಈಗ ಅಂಬಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸಲು ಮುಂದಾಗಿದ್ದಾರೆ.

ಅಂಬರೀಶ್ ಅವರು ಮರಣಹೊಂದಿದಾಗ ಅವರ ಚಿತಾಭಸ್ಮ ತಂದು ಸತತ ಒಂದು ವರ್ಷಗಳ ಕಾಲ ಗುಡಿ ನಿರ್ಮಾಣ ಮಾಡುವರೆಗೂ ಕಚೇರಿಯಲ್ಲಿಟ್ಟು ಪೂಜಿಸುತ್ತಿದರು. ಊರಿನ ಅಭಿಮಾನಿಗಳಿಂದಲೇ ಸುಮಾರು 8 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಗುಡಿ ಕಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಮಲತಾ, ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರೋದು ಅದ್ಭುತ. ಆ ಊರಿನವರು ನನ್ನಿಂದ ಯಾವುದೇ ಸಹಾಯ ತಗೊಂಡಿಲ್ಲ. ನನಗೆ ಇದು ಸರ್ಪ್ರೈಸ್, ಜೊತೆಗೆ ಅಂಬಿ ಪ್ರೀತಿಗೆ ಕಂಚಿನ ಪುತ್ಥಳಿ ಸಂಕೇತ. ಅವರು ಬದುಕಿದ್ದಾಗ ಪ್ರತಿದಿನ ಜನರ ಮಧ್ಯೆ ಇರುತ್ತಿದ್ದರು ಎಂದು ತಿಳಿಸಿದರು.

ಅಂಬರೀಶ್ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ 2018 ನವೆಂಬರ್ 24 ರಂದು ಅನಾರೋಗ್ಯದ ಹಿನ್ನಲೆ ಆಸ್ಪತ್ರೆ ಸೇರಿದ ರೆಬಲ್ ಸ್ಟಾರ್ ಮತ್ತೆ ವಾಪಸ್ ಬರಲೇ ಇಲ್ಲ. ತೀವ್ರ ಉಸಿರಾಟ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡ ಅಂಬಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರೆಬಲ್ ಸ್ಟಾರ್ ಕೊನೆಯುಸಿರೆಳೆದಿದ್ದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments