Monday, June 14, 2021
No menu items!
Home Bharata ರಾಜಸ್ಥಾನ್ ವರ್ಸಸ್ ಪಂಜಾಬ್; ಸೋತ ತಂಡ ಟೂರ್ನಿಯಿಂದಲೇ ಔಟ್…?

ರಾಜಸ್ಥಾನ್ ವರ್ಸಸ್ ಪಂಜಾಬ್; ಸೋತ ತಂಡ ಟೂರ್ನಿಯಿಂದಲೇ ಔಟ್…?

ದುಬೈ : ಇಲ್ಲಿ ನಡೆಯುತ್ತಿರುವ 13 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇಂದು 50 ನೇ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳಿಗೂ ಇಂದಿನ ಗೆಲುವು ಅನಿವಾರ್ಯವಾದ ಹಿನ್ನೆಲೆಯಲ್ಲಿ ರೋಚಕ ಹೋರಾಟ ನಿರೀಕ್ಷಿಸಲಾಗಿದೆ .

ಮೊದಲು ಹಲವು ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ತದನಂತರ ಪುಟಿದೆದ್ದು ಸತತ 5 ಗೆಲುವು ದಾಖಲಿಸಿದೆ. ಇನ್ನೊಂದು ಗೆಲುವು ಸಾಧಿಸಿದರೆ ಪಂಜಾಬ್ ಪ್ಲೇ ಆಫ್ ಹಂತ ಪ್ರವೇಶಿಸುವುದು ಖಚಿತ. ಆದ್ದರಿಂದ ಕನ್ನಡಿಗ ಕೆ.ಎಲ್ ರಾಹುಲ್‌ ಸಾರಥ್ಯದ ಪಂಜಾಬ್ ತಂಡ ಸತತ 6 ನೇ ಗೆಲುವಿನತ್ತ ಕಣ್ಣಿಟ್ಟಿದೆ.

ಇತ್ತ ಸ್ಟೀವನ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ 7 ರಲ್ಲಿ ಸೋತು ಕೇವಲ 5 ರಲ್ಲಿ ಗೆಲುವು ಸಾಧಿಸಿದೆ. ಆದರೆ ಪ್ಲೇ ಹಂತ ಪ್ರವೇಶಿಸಬೇಕಾದರೆ ಇನ್ನೊಂದು ಪಂದ್ಯ ಗೆಲ್ಲಲೇ ಬೇಕಿದ್ದು ಅದಕ್ಕಿಂದು ಕೊನೆಯ ಛಾನ್ಸ್ ದೊರಕಲಿದೆ. ಆದ್ದರಿಂದ ಇಂದಿನ ಪಂದ್ಯ ಗೆಲ್ಲಲೇ ಬೇಕಾದ ಇಕ್ಕಟ್ಟಿಗೆ ರಾಜಸ್ಥಾನ್ ರಾಯಲ್ಸ್ ಸಿಲುಕಿದೆ. ಇಂದಿನ ಪಂದ್ಯ ಸೋತರೆ ಮನೆಗೆ ಗಂಟು ಮೂಟೆ ಕಟ್ಟಲೇಬೇಕಾದ ಅನಿವಾರ್ಯತೆ ರಾಜಸ್ಥಾನ್ ತಂಡಕ್ಕೆ ಎದುರಾಗಿದೆ.

ದುಬೈ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್‌ ವಿಭಾಗ ಹೊಂದಿದೆ. ಪಂಜಾಬ್ ತಂಡದಲ್ಲಿ ಕೆ.ಎಲ್ ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದರೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಕೂಡಾ ಅಬ್ಬರಿಸಲು ಅಣಿಯಾಗಿದ್ದಾರೆ. ಇತ್ತ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಾಜಸ್ಥಾನ್ ತಂಡದ ಬೆನ್ ಸ್ಟೋಕ್ ಕೂಡಾ ಪಂಜಾಬ್ ತಂಡವನ್ನ ಮಣಿಸಲು ಸನ್ನದ್ದರಾಗಿದ್ದಾರೆ.

ರೋಚಕ ಘಟ್ಟ ತಲುಪುತ್ತಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಯಾವ ತಂಡ ಉಳಿಯಲಿದೆ ಯಾವ ತಂಡ ಗಂಟು ಮೂಟೆ ಕಟ್ಟಲಿದೆ ಎನ್ನುವುದೇ ತಿಳಿಯದಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments