ಚೆನ್ನೈ : ಕೊರೊನಾ ದೇಶಕ್ಕೆ ಬಂದಾಗಿನಿಂದ ಅದ್ಧೂರಿಯಾಗಿ ಹಾಲ್ ಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆಲ್ಲಾ ಬ್ರೇಕ್ ಬಿದ್ದಿದೆ. ಕೇವಲ 50 ಜನ ರನ್ನ ಸೇರಿಸಿಕೊಂಡು ಮನೆಯಲ್ಲೋ, ದೇವಸ್ಥಾನದಲ್ಲೋ ಮದುವೆ ಕಾರ್ಯಗಲನ್ನು ಮಾಡುತ್ತಿದ್ದಾರೆ. ಈಗಿರುವಾಗ ರಜನೀಕಾಂತ್ ಒಡೆತನದ ಮದುವೆ ಹಾಲ್ ಗೆ ಚೆನ್ನೈ ಕಾರ್ಪೋರೇಷನ್ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದೆ. ಇದನ್ನು ಪ್ರಶ್ನಿಸಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಡಂಬಕಂನಲ್ಲಿರುವ ನಟ ರಜನಿಕಾಂತ್ ಅವರ ಮದುವೆ ಹಾಲ್ಗೆ ಚೆನ್ನೈ ಕಾರ್ಪೊರೇಷನ್ 6.50 ಲಕ್ಷ ಆಸ್ತಿ ತೆರಿಗೆಯನ್ನು ವಿಧಿಸಿದೆ. ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮಾರ್ಚ್ 24 ರಿಂದ ಮದುವೆ ಹಾಲ್ಗಳನ್ನು ಮುಚ್ಚಲಾಗಿತ್ತು. ಇಲ್ಲಿಯವರೆಗೆ ಯಾವ ಆದಾಯವೂ ಬಂದಿಲ್ಲ. ಹಾಗಿರುವಾಗ 6.50 ಲಕ್ಷದಷ್ಟು ಆಸ್ತಿ ತೆರಿಗೆ ಕಟ್ಟುವುದು ಹೇಗೆ ಎಂದು ಉಲ್ಲೇಖಿಸಿದ್ದಾರೆ.