Friday, January 21, 2022
No menu items!
Home Entertainment ( Kan ) ಯಥರ್ವ್ ಯಶ್ ಯಾರ ಥರ ಇದ್ದಾನೆ..? ಅಭಿಮಾನಿಗಳಿಗೆ ಹೀಗೊಂದು ಪ್ರಶ್ನೆ

ಯಥರ್ವ್ ಯಶ್ ಯಾರ ಥರ ಇದ್ದಾನೆ..? ಅಭಿಮಾನಿಗಳಿಗೆ ಹೀಗೊಂದು ಪ್ರಶ್ನೆ

ಬೆಂಗಳೂರು: ತನ್ನಿಬ್ಬರು ಮಕ್ಕಳ ಲಾಲನೆ ಪಾಲನೆ ಜೊತೆ ಅಭಿಮಾನಿಗಳ ಜೊತೆಯೂ ಸದಾ ಸಂಪರ್ಕದಲ್ಲಿರುವ ನಟಿ ರಾಧಿಕಾ ಪಂಡಿತ್. ತಮ್ಮ ಮಕ್ಕಳ ಫೋಟೋಗಳು, ತುಂಟಾಟದ ವಿಡಿಯೋ ಹೀಗೆ ಅನೇಕ ಪೋಸ್ಟ್ ಗಳನ್ನು ಹಾಕುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಆದ್ರೆ ಇದೀಗ ತಮ್ಮ ಮಗ ಯಥರ್ವ್ ಬಗ್ಗೆ ಅಭಿಮಾನಿಗಳಿಗೆ ಪ್ರಶ್ನೆಯೊಮದನ್ನು ಕೇಳಿದ್ದಾರೆ.

ಯಥರ್ವ್ ಹಾಗೂ ತಮ್ಮ ಬಾಲ್ಯದ ಫೋಟೋಗಳನ್ನು ರಾಧಿಕಾ ಪಂಡಿತ್ ಕೊಲಾಜ್ ಮಾಡಿದ್ದು, ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮಾಷೆಯಾಗಿ ಶೀರ್ಷಿಕೆ ಬರೆದಿದ್ದಾರೆ.

ಯಥರ್ವ್ ಹಾಗೂ ನನ್ನ ಬಾಲ್ಯದ ಫೋಟೋ ನೋಡಿರುವ ಹಲವರು ನನ್ನ ಮಗ ನನ್ನಂತೆಯೇ ಕಾಣುತ್ತಾನೆ ಎಂದು ಹೇಳುತ್ತಾರೆ. ಆದರೆ, ಯಥರ್ವ್, ಯಶ್ ಹಾಗೂ ನನ್ನ ಕಾಂಬಿನೇಷನ್ ಅಂತ ಬರೆದಿದ್ದಾರೆ.

ತಾವು ಸಣ್ಣ ಪಾಪು ಇದ್ದಾಗ ತೆಗೆದಿರುವ ಚಿತ್ರವನ್ನು ತಮ್ಮ ಮಗ ಯಥರ್ವನ ಚಿತ್ರವನ್ನು ಒಟ್ಟಿಗೆ ಪ್ರಕಟಿಸಿರುವ ರಾಧಿಕಾ ಪಂಡಿತ್, ಯಥರ್ವ ಯಾರನ್ನು ಹೋಲುತ್ತಾನೆ ಎಂದು ನಿರ್ಣಯಿಸುವ ಅವಕಾಶವನ್ನು ಅಭಿಮಾನಿಗಳಿಗೆ ಬಿಟ್ಟಿದ್ದಾರೆ.

ರಾಧಿಕಾ ಪಂಡಿತ್ ಪೋಷಕರು ಪುಟ್ಟ ಪಾಪುವಾಗಿದ್ದ ರಾಧಿಕಾರನ್ನು ಹಿಡಿರುವ ಚಿತ್ರದ ಪಕ್ಕದಲ್ಲಿ ರಾಧಿಕಾ ತಾಯಿ ಯಥರ್ವನನ್ನು ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಯಥರ್ವ ಥೇಟ್ ಅಮ್ಮನಂತೆಯೇ ಕಾಣುತ್ತಿದ್ದಾನೆ.

https://www.instagram.com/p/CIBX8ZUAFNK/?utm_source=ig_web_copy_link

ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗೆ ಇಬ್ಬರು ಮಕ್ಕಳು. ಐರಾ ಯಶ್ ಸ್ವಲ್ಪ ಅಪ್ಪನ ಹೋಲಿಕೆಯಿದ್ದು, ಯಶ್ ತಂಗಿಯ ರೀತಿಯ ಹೋಲಿಕೆಯೂ ಸ್ವಲ್ಪ ಇದೆ. ಎರಡನೇ ಮಗುವಿನ ಡೆಲಿವರಿಯಾದಾಗ ನಡೆದ ಸುದ್ದಿಗೋಷ್ಟಿಯಲ್ಲೂ ರಾಧಿಕಾ, ಎರಡು ಮಕ್ಕಳನ್ನ ನಾನೇ ಎತ್ತಿದ್ದೇನೆ. ಆದ್ರೆ ಇಬ್ಬರು ನನ್ನ ರೀತಿ ಇಲ್ಲ ಎಂದಿದ್ರು. ಇದೀಗ ಅದೇ ರೀತಿಯ ಪ್ರಶ್ನೆಯನ್ನು ಅಭಿಮಾನಿಗಳ ಬಳಿ ಕೇಳಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments