Monday, June 14, 2021
No menu items!
Home Special 2,350 ಕೆಜಿ ತೂಕದ ಕುಂಬಳಕಾಯಿ ನೋಡಿ ಜನ ಗಾಬರಿ..!

2,350 ಕೆಜಿ ತೂಕದ ಕುಂಬಳಕಾಯಿ ನೋಡಿ ಜನ ಗಾಬರಿ..!

ಅಮೆರಿಕಾ : ಈ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಜನ ಹಲವು ವಿಚಾರಗಳನ್ನ ಕಲಿತುಕೊಂಡಿದ್ದಾರೆ. ತಮ್ಮಿಷ್ಟದ ಚಟುವಟಿಕೆಗಳನ್ನ ಮಾಡಿಕೊಳ್ಳೋದಕ್ಕೆ ಸಮಯವೇ ಸಿಕ್ತಾ ಇಲ್ಲ ಅನ್ನುತ್ತಿದ್ದ ಎಲ್ಲರಿಗೂ ಈ ಕೊರೊನಾ ಒಂದಷ್ಟು ಸಮಯವನ್ನ ಕೊಟ್ಟಿದೆ. ಈ ಸಮಯವನ್ನ ಸಾಕಷ್ಟು ಜನ ಚೆನ್ನಾಗಿನೇ ಉಪಯೋಗಿಸಿಕೊಂಡಿದ್ದಾರೆ. ತೋಟಗಾರಿಕೆ ಮಾಡಲು ಆಸೆಯಿದ್ದವರು ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಬೆಳೆಗಳನ್ನು ಬೆಳೆದು ತೃಪ್ತಿ ಪಟ್ಟುಕೊಂಡಿದ್ದಾರೆ.

ಅದರಂತೆ ಕ್ಯಾಲಿಫೋರ್ನಿಯಾದಲ್ಲೂ ಒಬ್ಬ ವ್ಯಕ್ತಿ ಸತತ ಪ್ರಯತ್ನ, ಪರಿಶ್ರಮ ನೀಡಿ ಕುಂಬಳಕಾಯಿಯನ್ನ ಬೆಳೆದಿದ್ದಾನೆ. ಅದು ಅಂತಿಂಥ ಕುಂಬಳಕಾಯಿ ಅಲ್ಲ. ಆ ಕುಂಬಳಕಾಯಿ ಸುಮಾರು 2,350 ಕೆಜಿ ತೂಕವಿದೆ.

ಇದನ್ನ ಬೆಳೆದಿರುವುದು ಒಬ್ಬ ತೋಟಗಾರಿಕಾ ಶಿಕ್ಷಕ. ಹೌದು 40 ವರ್ಷದ ಗಿಯೆಂಜರ್ ಈ ಕುಂಬಳಕಾಯಿ ಬೆಳೆದ ಶಿಕ್ಷಕ. ಲಾಕ್ ಡೌನ್ ನಲ್ಲಿ ಸಾಕಷ್ಟು ಸಮಯವನ್ನು ಈ ಕುಂಬಳಕಾಯಿ ಬೆಳೆಯೋದಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲ ಗಿಡಗಳನ್ನ ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ. ಸಸ್ಯಗಳಿಗೆ ದಿನಕ್ಕೆ 10 ಬಾರಿ ನೀರು ಹಾಕುತ್ತಿದ್ದರಂತೆ. ಎರಡು ಬಾರಿ ರಸಗೊಬ್ಬರವನ್ನ ಹಾಕಿ ಆರೋಗ್ಯಯುತವಾಗಿ ಬೆಳೆಸಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕಂತ ಫಲ ಇದೀಗ ಸಿಕ್ಕಿದೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರತಿ ವರ್ಷವೂ ಒಂದು ಸ್ಪರ್ಧೆ ನಡೆಯುತ್ತದೆ. ಕುಂಬಳಕಾಯಿ ಸ್ಪರ್ಧೆ. ಇಲ್ಲಿ ದೊಡ್ಡ ದೊಡ್ಡ ಕುಂಬಳಕಾಯಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಶಿಕ್ಷಕ ಗಿಯೆಂಜರ್ ಭಾಗವಹಿಸಿದ್ದಾರೆ. ಅವರು ಬೆಳೆದ ಕುಂಬಳಕಾಯಿ ಎಲ್ಲರ ಗಮನ ಸೆಳೆದಿದೆ. ಅಷ್ಟೇ ಅಲ್ಲ ಈ ಸ್ಪರ್ಧೆಯಲ್ಲಿ ಶಿಕ್ಷಕ ಬೆಳೆದ ಕುಂಬಳಕಾಯಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಕುಂಬಳಕಾಯಿ ಫೋಟೋ ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments