ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರುತ್ತಿದೆ. ಒಂದು ವಾರದ ಮುಂಚೆಯೇ ಪಟಾಕಿ ಹೊಡೆಯಲು ಆರಂಭಿಸಿದ್ರೆ ಒಂದು ತಿಂಗಳ ಮುನ್ನವೇ ಪಟಾಕಿ ಮಾರಾಟ ಶುರುವಾಗುತ್ತೆ. ಆದ್ರೆ ಈ ಬಾರಿ ಯಾರೆಂದರೆ ಅವರು ಪಟಾಕಿ ಮಾರಾಟ ಮಾಡುವಂತಿಲ್ಲ. ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗ ಸೂಚಿಯೊಂದನ್ನು ಹೊರಡಿಸಿದ್ದು, ಆ ಮಾರ್ಗಸೂಚಿಯನ್ನು ಅನುಸರಿಸಿಯೇ ಪಟಾಕಿಗಳನ್ನ ಮಾರಾಟ ಮಾಡಬೇಕಾಗಿದೆ.
ಈ ಮಾರ್ಗಸೂಚಿಯಲ್ಲಿ 10 ನಿಯಮಗಳಿಗೆ. ಆ ಎಲ್ಲಾ ನಿಯಮಗಳು ಪಾಲಿಸಿಯೇ ಮಾರಾಟ ಮಾಡಬೇಕಾಗಿದೆ. ಆ ನಿಯಮಗಳು ಈ ಕೆಳ ಕಂಡಂತಿವೆ :
1) ಸಂಬಂಧ ಪಟ್ಟ ಇಲಾಖೆಯಿಂದ ಯಾರು ಪಟಾಕಿ ಮಾರಲು ಅನುಮತಿ ಪಡೆದಿರುತ್ತಾರೋ, ಅವರಿಗೆ ಮಾತ್ರ ಮಾರಾಟದ ಅವಕಾಶ ಸಿಗುತ್ತದೆ.
2) ಪಟಾಕಿ ಮಳಿಗೆಗಳನ್ನ ಪ್ರತಿ ವರ್ಷದಂತೆ ತಿಂಗಳ ಮುಂಚೆಯೇ ತೆರೆದಿರುವಂತಿಲ್ಲ. ನವೆಂಬರ್ 1 ರಿಂದ 17 ರವರೆಗೆ ಮಾತ್ರ ತೆರೆದಿಡಬೇಕಾಗುತ್ತದೆ.
3) ನಿಗದಿ ಪಡಿಸಿದ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಅಂಗಡಿಗಳನ್ನು ಇಡಬೇಕಾಗುತ್ತದೆ.
5) ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಬೇಕಾಗುತ್ತದೆ.
6) ಮಳಿಗೆಗಳಲ್ಲಿ ಎರಡು ಕಡೆಯಿಂದಾನು ಗಾಳಿಯಾಡಬೇಕು. ಒಂದು ಮಳಿಗೆಯಿಂದ ಇನ್ನೊಂದು ಮಳಿಗೆಗೆ 6 ಮೀಟರ್ ಅಂತರವಿರಬೇಕು.
7) ಪಟಾಕಿ ಮಳಿಗೆಗಳ ಸುತ್ತಮುತ್ತ ಪ್ರತಿದಿನ ಸ್ಯಾನಿಟೈಸ್ ಮಾಡಬೇಕು. ಜೊತೆಗೆ ಪಟಾಕಿ ಖರೀದಿಗೆ ಬರುವ ಜನರಿಗೂ ಸ್ಯಾನಿಟೈಸ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಪಟಾಕಿ ಕೊಳ್ಳುವಾಗ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
8) ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ/ ಕಾರ್ಪೊರೇಷನ್/ ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.
9) ಪರವಾನಗಿಯನ್ನು ಎಲ್ಲರಿಗೂ ಕಾಣುವಂತೆ ಹಾಕಬೇಕು.
10) ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಈಗಾಗಲೇ ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಹಬ್ಬಗಳಲ್ಲೂ ಮಂಕು ಕವಿದಿತ್ತು. ಅದ್ಧೂರಿಯಿಂದ ಆಚರಿಸುತ್ತಿದ್ದ ಎಲ್ಲಾ ಹಬ್ಬಗಳನ್ನು ಮನೆ ಮಂದಿ ಮಾತ್ರ ಆಚರಿಸುವಂತಾಯಿತು. ಜಾತ್ರೆ ನಿಂತು ಹೋಗಿವೆ. ಇದೀಗ ದೀಪಾವಳಿ ಮೇಲೆಯೂ ಕೊರೊನಾ ಕರಿಛಾಯೆ ಮೂಡಿದೆ.