Saturday, December 4, 2021
No menu items!
Home Karnataka ಮಳೆಯಿಂದಾಗಿ ಈರುಳ್ಳಿ ಬೆಳೆ ಹಾನಿ : ಬೆಂಗಳೂರು ಸೇರಿದಂತೆ ಹಲವೆಡೆ ಹೇಗಿದೆ ಗೊತ್ತಾ ಬೆಲೆ..?

ಮಳೆಯಿಂದಾಗಿ ಈರುಳ್ಳಿ ಬೆಳೆ ಹಾನಿ : ಬೆಂಗಳೂರು ಸೇರಿದಂತೆ ಹಲವೆಡೆ ಹೇಗಿದೆ ಗೊತ್ತಾ ಬೆಲೆ..?

ಬೆಂಗಳೂರು : ಒಂದೆಡೆ ಕೊರೊನಾದಿಂದ ಕಂಗೆಟ್ಟ ಜನ..ಇನ್ನೊಂದೆಡೆ ದಿನನಿತ್ಯ ಬಳಕೆಯ ಸಾಮಾಗ್ರಿಗಳ ಏರಿಕೆ..ಈ ಕೊರೊನಾ ವೈರಸ್ ಹಾವಳಿ ಶುರುವಾದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಉದ್ಭವಿಸುತ್ತಲೇ ಇದೆ. ಎಷ್ಟೋ ಜನ ಜೀವನ ಕಟ್ಟಿಕೊಳ್ಳುವುದಕ್ಕೆಂದು ಊರಿಂದ ಊರಿಗೆ ಬಂದವರು ಕೊರೊನಾದಿಂದಾಗಿ ಮತ್ತೆ ಬರಿಗೈನಲ್ಲಿ ಊರು ಸೇರಿದ್ದಾರೆ. ಈ ಮಧ್ಯೆ ಮೂಲಭೂತ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕಳೆದ ಎರಡು ದಿನಗಳಿಂದ ಈರುಳ್ಳಿ ಬೆಲೆ ಕೇಳಿದ್ರೆ ತೆಗೆದುಕೊಳ್ಳುವ ಮುನ್ನವೇ ಕಣ್ಣಲ್ಲಿ ನೀರು ಬರುತ್ತಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಗಾರು ಈರುಳ್ಳಿಯ ಮೇಲೆ ಪರಿಣಾಮ ಬೀರಿದೆ. ರಾಜಸ್ಥಾನದಿಂದ ಹೊಸ ಬೆಳೆಗಳ ಆಗಮನ ಪ್ರಾರಂಭವಾಗಿದ್ದು, ದೇಶೀಯ ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಷ್ಟು ಪೂರೈಸಲು ಸಾಧ್ಯವಿಲ್ಲದಂತಾಗಿದೆ. ಮಧ್ಯಪ್ರದೇಶದಿಂದ ಹೊಸ ಈರುಳ್ಳಿ ಬೆಳೆಯು ಡಿಸೆಂಬರ್ನಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಕೊಯ್ಲು ಮಾಡಲಾಗಿದ್ದ ಈರುಳ್ಳಿಯು ಪ್ರಸ್ತುತ ಮಾರುಕಟ್ಟೆಗೆ ಸರಬರಾಜಾಗುತ್ತಿದೆ. ಹೊಸ ಮುಂಗಾರು ಈರುಳ್ಳಿ ಬರಬೇಕಾಗಿತ್ತು. ಆದ್ರೆ ಮಳೆಯಿಂದಾಗಿ ವಿಳಂಬವಾಗಿದೆ. ಹೆಚ್ಚುತ್ತಿರುವ ಈರುಳ್ಳಿಯ ಬೇಡಿಕೆಗೆ ತಕ್ಕಂತೆ ಈರುಳ್ಳಿ ಪೂರೈಕೆ ಕುಸಿದಿದ್ದರಿಂದಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲೂ ಈರುಳ್ಳಿ ದರ ದಿಢೀರ್ ಏರಿಕೆ ಕಂಡಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಸಗಟು ದರದಲ್ಲೇ ಪ್ರತಿ ಕೆ.ಜಿ.ಗೆ 100 ರೂಪಾಯಿಯಂತೆ ಮಾರಾಟವಾಗಿದೆ.

ಈರುಳ್ಳಿಯ ಸೋಮವಾರದ ದರ 60ರಿಂದ 70 ರೂಪಾಯಿ ಯಷ್ಟಿತ್ತು. ಒಂದೇ ದಿನದಲ್ಲಿ ದಿಢೀರ್ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ಕನಿಷ್ಠ 80 ರಿಂದ ಗರಿಷ್ಠ 100 ರೂಪಾಯಿಗೆ ತಲುಪಿದೆ. ಹಾಪ್ಕಾಮ್ಸ್ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ 85 ರೂಪಾಯಿ ಹಾಗೂ ಚಿಲ್ಲರೆ ದರ 120 ರೂಪಾಯಿ ವರೆಗೆ ದಾಟಿದೆ.

ಇಂದು ದಾವಣಗೆರೆಯಲ್ಲಿ ಕ್ವಿಂಟಲ್ ಈರುಳ್ಳಿ ಕನಿಷ್ಠ 300 ರಿಂದ ಗರಿಷ್ಠ 3,800 ರೂಪಾಯಿ ವರೆಗೆ ಮಾರಾಟವಾಗಿದೆ. ನಂಜನಗೂಡಿನಲ್ಲಿ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ 1,300 ರಿಂದ ಗರಿಷ್ಠ 2,100 ರೂಪಾಯಿ ಸಗಟು ದರ ಇತ್ತು. ಬೆಂಗಳೂರಿನಲ್ಲಿ ಪೂನಾದಿಂದ 5,659 ಕ್ವಿಂಟಲ್ ಈರುಳ್ಳಿ ಆವಕವಾಗಿದ್ದು, ಕ್ವಿಂಟಲ್ಗೆ ಕನಿಷ್ಠ 7,000 ದಿಂದ ಗರಿಷ್ಠ 7,500 ರೂಪಾಯಿ ಯಷ್ಟಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments