Friday, May 14, 2021
No menu items!
Home Karnataka ಮತ್ತೊಮ್ಮೆ ಸೆಂಚುರಿ ಬಾರಿಸಿದ ಈರುಳ್ಳಿ …!!

ಮತ್ತೊಮ್ಮೆ ಸೆಂಚುರಿ ಬಾರಿಸಿದ ಈರುಳ್ಳಿ …!!

ಬೆಂಗಳೂರು : ರಾಜ್ಯದೆಲ್ಲಡೆ ಎಡೆಬಿಡದೆ ಧಾರಕಾರಾವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರ ಜೀವನವೇ ದುಸ್ತರವಾಗಿದ್ದರೆ, ಇತ್ತ ರೈತರು ಬೆಳೆದ ಬೆಳೆಗಳೆಲ್ಲವೂ ಸಂಪೂರ್ಣ ನೆಲಕಚ್ಚಿವೆ. ಪರಿಣಾಮ ಈರುಳ್ಳಿ ದರ ಕೆಜಿ ಗೆ 100 ರೂ ತಲುಪಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಗಳಾದ ಬಳ್ಳಾರಿ , ದಾವಣಗೆರೆ , ರಾಯಚೂರು , ವಿಜಯಪುರ ಮತ್ತು ಹುಬ್ಬಳ್ಳಿ ಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಆದ್ದರಿಂದ ರೈತರು ಬೆಳೆದಿರುವ ಬೆಳೆಯೆಲ್ಲಾ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ. ಪರಿಣಾಮ ಮಾರ್ಕೆಟ್ ಗೆ ಹೊಸ ಈರುಳ್ಳಿ ಸರಬರಾಜು ಆಗುತ್ತಿಲ್ಲ. ಕೇವಲ ದಾಸ್ತಾನುವಿನಲ್ಲಿದ್ದ ಈರುಳ್ಳಿ ಮಾತ್ರ ಸರಬರಾಜು ಆಗುತ್ತಿದ್ದು ಈ ಹಿನ್ನೆಲೆಯಲ್ಲಿ ಈರುಳ್ಳಿ ದರ ಹೆಚ್ಚಳವಾಗುತ್ತಾ ಹೋಗುತ್ತಿದೆ.

ಉತ್ತಮ ಈರುಳ್ಳಿ ದರ ಕೆ.ಜಿ ಗೆ 100 ರೂ ತಲುಪಿದ್ದರೆ ಸಾಮಾನ್ಯ ಗುಣಮಟ್ಟದ ಈರುಳ್ಳಿ ಕೆ.ಜಿ ಗೆ 80- 90 ರೂ ಗಳ ವರೆಗೆ ಮಾರಾಟವಾಗುತ್ತಿದೆ. ಅತ್ತ ಈರುಳ್ಳಿ ಅತೀ ಹೆಚ್ಚಾಗಿ ಬೆಳೆಯುವ ನೆರೆಯ ಮಹರಾಷ್ಟ್ರ ವೂ ವರುಣಾಘಾತಕ್ಕೆ ಸಿಲುಕಿದ್ದು ಅಲ್ಲಿಂದಲೂ ಈರುಳ್ಳಿ ಆಮದು ಆಗದೇ ಇರುವುದು ದಿಡೀರ್ ಏರಿಕೆಯಾಗುವುದಕ್ಕೆ ಮತ್ತೊಂದು ಕಾರಣ

ಈರುಳ್ಳಿ ಕೊಯ್ಲಿಗೆ ಸಿದ್ದತೆಗೊಳ್ಳುತ್ತಿರುವ ಸಮಯದಲ್ಲೇ ಭಾರೀ ಮಳೆ ಬಂದು ರೈತರು ತಲೆ ಮೇಲೆ ಕೈಯಿಟ್ಟು ಕುಳಿತಿದ್ದರೆ ಇತ್ತ ಸಾಮಾನ್ಯ ವರ್ಗದ ಜನತಗೆ ಈರುಳ್ಳಿ ಗಗನಕುಸುಮವಾಗಿ ಪರಿಣಮಿಸುವ ದಿನಗಳು ಹತ್ತಿರದಲ್ಲಿವೆ. ಈಗಲೇ ಈರುಳ್ಳಿ ದರ 100 ರೂ ತಲುಪಿದ್ದು ಮುಂದಿನ ದಿನಗಳಲ್ಲಿ 150 ರೂಗಳ ವರೆಗೂ ತಲುಪಬಹುದು ಎಂದು ಅಂದಾಜಿಸಲಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments