Tuesday, October 26, 2021
No menu items!
Home Karnataka ಜೆಡಿಎಸ್ ಸಮಾವೇಶದಲ್ಲಿ ನಿಖಿಲ್_ಪ್ರಜ್ವಲ್ ಫುಲ್ ಹೈಲೇಟ್ : ಅಭಿಮಾನಿಗಳು ಫುಲ್ ಖುಷ್

ಜೆಡಿಎಸ್ ಸಮಾವೇಶದಲ್ಲಿ ನಿಖಿಲ್_ಪ್ರಜ್ವಲ್ ಫುಲ್ ಹೈಲೇಟ್ : ಅಭಿಮಾನಿಗಳು ಫುಲ್ ಖುಷ್

ಬೆಂಗಳೂರು: ನಗರ ಜೆಪಿ ಭವನದಲ್ಲಿ ಇಂದು ಜೆಡಿಎಸ್ ಸಮಾವೇಶ ನಡೆಯಿತು. ಉಪಚುನಾವಣೆ ಸಂದರ್ಭದಲ್ಲಿ ಶಿರಾದಲ್ಲಿ ನಡೆದ ಸಮಾವೇಶದಲ್ಲಿ ಇಬ್ಬರೂ ಸಹೋದರರ ನಡುವಿನ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ ಅದಕ್ಕೆಲ್ಲ ತೆರೆ ಎಳೆದಿರುವ ಸಹೋದರರು, ಇಂದು ಒಂದೇ ವೇದಿಕೆ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಇನ್ನೂ ಕೆಲ ನಾಯಕರು ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರ್ಸ್ವಾಮಿಯನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಎಲ್ಲಾ ಕಡೆ ಯುವಕರ ಗಾಳಿ ಬೀಸುತ್ತಿದೆ. ಇವರಿಬ್ಬರೂ ಪ್ರವಾಸ ಮಾಡಿದರೆ ಯುವಕರನ್ನ ಸೆಳೆಯಬಹುದು. ಪಕ್ಷದಲ್ಲೂ ಯುವಕರನ್ನು ಬೆಳೆಸಬೇಕೆಂದರೆ ಪ್ರಜ್ವಲ್, ನಿಖಿಲ್ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಗ ಪಕ್ಷ ಸಂಘಟನೆಗೆ ದೊಡ್ಡ ಬಲ ಬಂದಂತಾಗಲಿದೆ. ಬೂತ್ ಮಟ್ಟದಲ್ಲಿಯೇ ಪಕ್ಷ ಸಂಘಟನೆಯ ದೊಡ್ಡ ಕೊರತೆ ಇದೆ. ಮೊದಲು ಸ್ಥಳೀಯವಾಗಿ ಪಕ್ಷದ ಬೇರುಗಳು ಗಟ್ಟಿಯಾಗಬೇಕು ಎಂದಿದ್ದಾರೆ.

ಯಾವುದೇ ಚುನಾವಣೆ ಆದರೂ ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಬೇಕು. ಪಕ್ಷದಲ್ಲಿ ಹೆಣ್ಣು ಮಕ್ಕಳನ್ನ ಕಡೆಗಣಿಸಲಾಗುತ್ತಿದೆ. ಸಂಘಟನೆಗೆ ಮಹಿಳೆಯರನ್ನೂ ಬಳಸಿಕೊಳ್ಳಬೇಕು. ಪದಾಧಿಕಾರಿಗಳ ಬದಲಾವಣೆ ಮಾಡಬೇಕು. ಹೀಗೆ ಹಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಇದೆ ವೇಳೆ ಮಾತನಾಡಿರುವ ನಿಖಿಲ್ ಗೌಡ, ತಮ್ಮ ಭಾಷಣದ ವೇಳೆ ಪ್ರಜ್ವಲ್ ರೇವಣ್ಣ ಹೆಸರನ್ನ ಪ್ರಸ್ತಾಪಿಸಿದರು. ನನ್ನ ಸಹೋದರ ಪ್ರಜ್ವಲ್ ಬಂದಿದ್ದಾರೆ. ಪಕ್ಷದಲ್ಲಿ ನಾನು, ಪ್ರಜ್ವಲ್ ಮಾತ್ರ ಯುವಕರಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಯುವಕರಿದ್ದಾರೆ. ಉಪಚುನಾವಣೆಯಲ್ಲಿ ನಾವು ಸೋತಿರಬಹುದು. ಹಾಗಂತ ಕಾರ್ಯಕರ್ತರ ಉತ್ಸಾಹ ಕಡಿಮೆ ಆಗಿಲ್ಲ ಅಂದ್ರು. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತೇನೆ. ಯುವಪಡೆಯನ್ನ ಕಟ್ಟಿಕೊಂಡು ಪ್ರವಾಸ ಮಾಡ್ತೇನೆ. ಈಗಾಗಲೇ ಬ್ಲೂಪ್ರಿಂಟ್ ಸಹ ಸಿದ್ಧಪಡಿಸಿಕೊಂಡಿದ್ದೇನೆ. ಕೊರೊನಾ, ಮದುವೆ ಕಾರಣ ಸ್ವಲ್ಪ ತಡವಾಗಿದೆ. ಬರುವ ದಿನಗಳಲ್ಲಿ ಸಕ್ರಿಯವಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ತೇನೆ. ಈಗಿನಿಂದಲೇ ಆ ಬಗ್ಗೆ ಗಮನಹರಿಸಬೇಕಿದೆ ಎಂದಿದ್ದಾರೆ.

ಇನ್ನು ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದ್ದು, ಪಕ್ಷಕ್ಕೆ ದೊಡ್ಡ ಶಕ್ತಿಯೇ ಕಾರ್ಯಕರ್ತರು. ಕುಮಾರಣ್ಣೋರು ನನಗೆ ಸಾಕಷ್ಟು ಸಲಹೆಗಳನ್ನ ಕೊಟ್ಟಿದ್ದಾರೆ. ದೂರದಲ್ಲಿ ಕಾಣುವವರಿಗೆ ಗೊಂದಲವಾಗಿಯೇ ಇರುತ್ತದೆ. ಶಿರಾದಲ್ಲಿ ಗೊಂದಲವಾಯ್ತು ಅಂತಾ ಸುದ್ದಿಯಾಯ್ತು. ನಾನು ಸಂಸದ ಅಲ್ಲ, ಪಕ್ಷದ ಕಾರ್ಯಕರ್ತ. ಶಿರಾ ಸಮಾವೇಶದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಅಂದು ಸಂಜೆ ಬಹಿರಂಗ ಪ್ರಚಾರ ಮುಗಿಸಿ ಕ್ಷೇತ್ರ ತೊರೆಯಬೇಕಿತ್ತು. ಹಾಗಾಗಿ ಅಂದು ನಮ್ಮ ನಾಯಕರಿಗೆ ಹೇಳಿಯೇ ಕಾರ್ಯಕ್ರಮದಿಂದ ತೆರಳಿದ್ದೆ. ಅಂದು ಸಭೆಯಿಂದ ಹೊರ ನಡೆದದ್ದು ಮೂರು ಗ್ರಾಮಗಳಲ್ಲಿ ಪ್ರಚಾರ ಮುಗಿಸಬೇಕಿತ್ತು. ನಾನೇನು ಬೇಸರ ಮಾಡಿಕೊಂಡು ಹೋಗಲಿಲ್ಲ. ಊಹಾಪೋಹವನ್ನ ನಮ್ಮವರು ಮೊದಲು ಬಿಡಬೇಕು ಎಂದು ಪ್ರಜ್ಚಲ್ ರೇವಣ್ಣ ಹೇಳಿದ್ದಾರೆ.

ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಹೆಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರು, ಸಂಸದರು ಭಾಗಿಯಾಗಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments