Saturday, June 19, 2021
No menu items!
Home Karnataka ತೀರ್ಥೋದ್ಭವದಲ್ಲಿ ತಂದೆಯನ್ನು ನೆನೆದು ಕಣ್ಣೀರಿಟ್ಟ ನಾರಾಯಣ್ ಆಚಾರ್ಯರ ಮಕ್ಕಳು

ತೀರ್ಥೋದ್ಭವದಲ್ಲಿ ತಂದೆಯನ್ನು ನೆನೆದು ಕಣ್ಣೀರಿಟ್ಟ ನಾರಾಯಣ್ ಆಚಾರ್ಯರ ಮಕ್ಕಳು

ಕೊಡಗಿನ ಭೂಕುಸಿತದಲ್ಲಿ ಬಲಿಯಾಗಿದ್ದ ಅರ್ಚಕ ನಾರಾಯಣ ಆಚಾರ್ ಅವರ ಇಬ್ಬರು ಹೆಣ್ಮಕ್ಕಳು ಇಂದು ತಲಕಾವೇರಿಯ ತೀರ್ಥೋದ್ಭವ ಕಾರ್ಯದಲ್ಲಿ ಭಾಗಿಯಾಗಿದ್ದರು. ಮೃತ ನಾರಾಯಣ ಆಚಾರ್ ಅವರ ಮಕ್ಕಳಾದ ಶಾರದ ಆಚಾರ್ ಮತ್ತು ನಮಿತಾ ಆಚಾರ್ ತಮ್ಮ ತಂದೆ ತಾಯಿ ಇಲ್ಲದ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಪ್ರತೀ ವರ್ಷ ತೀರ್ಥೋದ್ಭವ ಎಂದರೆ ಅದೇನೋ ಸಂಭ್ರಮ ಸಂತಸದಲ್ಲಿ ತನ್ನ ತಂದೆ ತಾಯಿಗಳೊಂದಿಗೆ ಕಳೆಯುತ್ತಿದ್ದ ಈ ಹೆಣ್ಣು ಮಕ್ಕಳು ಈ ಬಾರಿ ಅನಾಥವಾಗಿ ನಿಂತಿದ್ದರು. ಇಂದು ತಲಕಾವೇರಿಯಲ್ಲಿ ಕನ್ಯಾ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾದಳು. ಇದನ್ನ ನಾರಾಯಣ್ ಆಚಾರ್ ಮಕ್ಕಳು ಕೂಡ ಕಣ್ತುಂಬಿಕೊಂಡರು.

ಈ ವೇಳೆ ಮಾತನಾಡಿದ ಶಾರಾದ ಆಚಾರ್, ಈ ಸಂದರ್ಭದಲ್ಲಿ, ನಮ್ಮ ತಂದೆ, ತಾಯಿ ಮತ್ತು ದೊಡ್ಡಪ್ಪ ಅವರುಗಳು ಇರದೇ ಇರುವುದು ತೀವ್ರ ನೋವಾಗುತ್ತಿದೆ. ಅವರ ಆತ್ಮಕ್ಕೆ ಕಾವೇರಿ ತಾಯಿ ಶಾಂತಿ ನೆಮ್ಮದಿ ನೀಡಲಿ ಅಂತ ಬೇಡಿಕೊಳ್ತೇವೆ ಎಂದಷ್ಟೇ ಕೇಳಿಕೊಳ್ಳಲು ಸಾಧ್ಯ. ನಾಡಿನ ಜನರಿಗೆ ಮಾತೆ ಕಾವೇರಿ ಕಾಪಾಡಲಿ ಎಂದು ಹೇಳಿದರು. ಇದೆ ವೇಳೆ ಆಗಸ್ಟ್ 5 ರಂದು ಕೊಡಗಿನಲ್ಲಿ ಭಾರೀ ಭೂಕುಸಿತದಿಂದಾಗಿ ಭೂಸಮಾಧಿಯಾಗಿದ್ದ ಅವರ ತಂದೆ ನಾರಾಯಣ ಆಚಾರ್, ತಾಯಿ ಹಾಗೂ ಕುಟುಂಬದವರ ಜೊತೆಗೆ ಸಹಾಯಕ ಅರ್ಚಕರನ್ನೂ ನೆನೆದು ಶಾರದಾ ಆಚಾರ್ ಕಣ್ಣೀರು ಇಟ್ಟರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments