ಬೆಂಗಳೂರು : ನಿನ್ನೆ ನಗರದ ಕಾಟನ್ ಪೇಟೆಯ ಬಾಳೆ ಮಂಡಿಯಲ್ಲಿ ಸಿಕ್ಕ ಸಿಕ್ಕವರಿಗೆ ಇರಿದಿದ್ದ ಆರೋಪಿ ಗಣೇಶ್ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿತ್ತು. ಆರೋಪಿ ಗಣೇಶ್ 2 ವರ್ಷ ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಎಂದು ಆತನ ತಾಯಿ ಹೇಳಿಕೆ ನೀಡಿದ್ದರು. ಆದ್ರೆ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದರು ಸದ್ಯ ಮಾನಸಿಕವಾಗಿ ಸರಿಯಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಆರೋಪಿ ಗಣೇಶ್ ನಾಲ್ಕೈದು ವರ್ಷದಿಂದ ಹೆಂಡತಿಯಿಂದ ದೂರ ಇದ್ದು, ತಾಯಿಯ ಜೊತೆ ವಾಸವಿದ್ದ ಎಂಬುದು ತಿಳಿದು ಬಂದಿದೆ.
ನಿನ್ನೆ ಭಾನುವಾರವಾದ ಕಾರಣ ಮಟನ್ ತರುತ್ತೇನೆಂದು ಬೆಳಗ್ಗೆ 8.30ರ ಸುಮಾರಿಗೆ ಹೋಗಿದ್ದ ಈ ವೇಳೆ ಆತನಿಗೆ ಅದೇನಾಯ್ತೊ ಏನೋ ಏಕಾಏಕಿ ಮಟನ್ ಶಾಪ್ ನಲ್ಲಿದ್ದ ಚಾಕು ತೆಗೆದುಕೊಂಡು ಎಸ್ಕೇಪ್ ಆಗಿದ್ದ. ಆನಂತರ ಚಾಕು ತೆಗೆದುಕೊಂಡು ರಸ್ತೆಗೆ ಬಂದ ಗಣೇಶ್ ಬಿನ್ನಿ ಮಿಲ್ ಬಳಿ ರಸ್ತೆಯಲ್ಲಿ ಒಬ್ಬ ಯುವಕನ ಎದೆಗೆ ಚಾಕು ಇರಿದಿದ್ದಾನೆ. ಚಾಕು ಇರಿದ ರಭಸಕ್ಕೆ ಆ ವ್ಯಕ್ತಿಗೆ ತೀವ್ರ ರಕ್ತಸ್ರಾವವಾಗಿದ್ದು, ಅಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ರಸ್ತೆಯಲ್ಲಿ ಮುಂದೆ ಸಾಗಿದ ಆರೋಪಿ ಗಣೇಶ್ ಐವರಿಗೆ ಚಾಕು ಇರಿದಿದ್ದಾನೆ. ಐವರು ಗಾಯಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯಲ್ಲಿ ಇಂದು ಒಬ್ಬ ಸಾವನ್ನಪ್ಪಿದ್ದಾನೆ.