Friday, September 24, 2021
No menu items!
Home Bharata ದೇಹ ಮಧ್ಯಪ್ರದೇಶ ಆದ್ರೆ ತಲೆ ಸಿಕ್ಕಿದ್ದು ಮಾತ್ರ ಬೆಂಗಳೂರಲ್ಲಿ..!

ದೇಹ ಮಧ್ಯಪ್ರದೇಶ ಆದ್ರೆ ತಲೆ ಸಿಕ್ಕಿದ್ದು ಮಾತ್ರ ಬೆಂಗಳೂರಲ್ಲಿ..!

ಬೆಂಗಳೂರು : ಕಳೆದ 2 ವಾರಗಳ ಹಿಂದೆ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಬಗ್ಗೆ ಸುದ್ದಿಯಾಗಿತ್ತು. ಅದು ಮಧ್ಯಪ್ರದೇಶದ ಬೇತುಲ್ ಬಳಿ. ಶವ ಫೂರ್ಣಪ್ರಮಾಣದಲ್ಲಿ ಪತ್ತೆಯಾಗಿದ್ದಿದ್ರೆ ಕೇಸ್ ಬೇಗ ಸಾಲ್ವ್ ಆಗ್ತಾ ಇತ್ತು ಅಂತ ಅನ್ನಿಸ್ತಿತ್ತು. ಆದ್ರೆ ಅಂದು ಬೇತುಲ್ ಬಳಿ ಕೇವಲ ದೇಹ ಮಾತ್ರ ಪತ್ತೆಯಾಗಿತ್ತು. ಅದರ ರುಂಡ ಎಲ್ಲಿ ಅಂತ ಹುಡುಕಾಟ ನಡೆಸಿದಾಗ ಪತ್ತೆಯಾಗಿದ್ದೆ ಅಚ್ಚರಿಕೆ ಕಾರಣವಾಗಿದೆ.

ಹೌದು, ಆ ದೇಹದ ತಲೆ ಬರೋಬ್ಬರಿ 1,300 ಕಿಮೀ ದೂರದ ಬೆಂಗಳೂರಿನಲ್ಲಿ ಸಿಕ್ಕಿದೆ. ಅಕ್ಟೋಬರ್ 3ರಂದು ಬೇತುಲ್ ಬಳಿಯ ಮಚ್ನಾ ಸೇತುವೆ ಬಳಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ರೈಲ್ವೆ ಪೊಲೀಸರು ವರದಿ ಮಾಡಿದ್ದರು. ತನಿಖೆಯ ವೇಳೆ ಹೊಸದಿಲ್ಲಿ – ಬೆಂಗಳೂರು ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ವ್ಯಕ್ತಿ ಅಡ್ಡಬಂದಿದ್ದ ಎಂದು ತಿಳಿದುಬಂದಿತ್ತು. ಬಳಿಕ ಎಲ್ಲ ಕಡೆ ಅಲರ್ಟ್ ನೀಡಲಾಗಿತ್ತು ಎಂದು ಎಂದು ಬೇತುಲ್ನ ಹೆಡ್ ಕಾನ್ಸ್ಟೆಬಲ್ ವೇದ್ಪ್ರಕಾಶ್ ಹೇಳಿದ್ದಾರೆ. ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ತಲೆ ಬೆಂಗಳೂರಿನಲ್ಲಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೇ ಹಳಿಗಳಿಂದ ಪೊಲೀಸರು ವ್ಯಕ್ತಿಯ ದೇಹದ ಭಾಗಗಳನ್ನು ಸಂಗ್ರಹಿಸಿದ್ದಾರೆ. ನಂತರ ಮರಣೋತ್ತದ ಪರೀಕ್ಷೆ ನಡೆಸಿದ್ದಾರೆ. ಅಕ್ಟೋಬರ್ 4 ರಂದು ಬೆಂಗಳೂರಿನ ರೈಲ್ವೇ ಸಿಬ್ಬಂದಿಗೆ ತಲೆ ಸಿಕ್ಕಿತ್ತು. ತಲೆ ಯಾರದ್ದೆಂದು ತಿಳಿಯಲು ಬೆಂಗಳೂರು ರೈಲ್ವೇ ಪೊಲೀಸರು ತಲೆ ಫೋಟೋವನ್ನು ರೈಲ್ವೇ ವಲಯಗಳಲ್ಲಿ ಹಾಕಿದ್ದರು. ಇದರ ಬೆನ್ನಲ್ಲೇ ಬೇತುಲ್ನಲ್ಲಿ ವ್ಯಕ್ತಿಯ ತಲೆ ಇಲ್ಲದ ಶವ ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದು ಬಂದಿತ್ತು.

ಸುಮಾರು ನಾಲ್ಕು ದಿನಗಳ ಹಿಂದೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿಯ ತಲೆ ಸಿಕ್ಕಿರುವ ಬಗ್ಗೆ ಬೇತುಲ್ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮೃತ ವ್ಯಕ್ತಿಯನ್ನು ಬೇತುಲ್ ನಿವಾಸಿ ರವಿ ಮಾರ್ಕಮ್ (28) ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ಬೆಂಗಳೂರಿನ ಪೊಲೀಸ್ ತಂಡ ಬೆತುಲ್ಗೆ ತೆರಳಿದೆ. ಆರ್ಥಿಕ ಕಾರಣಗಳಿಂದಾಗಿ ಮೃತನ ಕುಟುಂಬ ಸದಸ್ಯರಿಗೆ ಬೆಂಗಳೂರಿಗೆ ಹೋಗಲು ಸಾಧ್ಯವಾಗದ ಕಾರಣ, ಪೊಲೀಸರು ಅಲ್ಲಿಯೇ ತಲೆ ಸಮಾಧಿ ಮಾಡಿದ್ದಾರೆ ಎಂದು ವೇದ್ಪ್ರಕಾಶ್ ಹೇಳಿದ್ದಾರೆ. ಉಳಿದಿರುವ ದೇಹದ ಭಾಗಗಳನ್ನು ಅಂತಿಮ ವಿಧಿವಿಧಾನಕ್ಕಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಒಟ್ಟಾರೆ ಮಧ್ಯಪ್ರದೇಶದಲ್ಲಿ ದೇಹ ಸಿಕ್ಕಿ, ಅದರ ತಲೆ ಬೆಂಗಳೂರಿನಲ್ಲಿ ಸಿಕ್ಕಿರುವುದು ಮಾತ್ರ ಆಶ್ಚರ್ಯಕ್ಕೆ ಕಾರಣವಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments