2020 ರ ಆವೃತ್ತಿಯಲ್ಲಿ ಮೂರು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ಗಳು ಆಟ ನೋಡಿ ಅಭಿಮಾನಿಗಳ ಕೋಪ ದ್ವೇಷದತ್ತ ತಿರುಗಿದೆ. ನಿನ್ನೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸಿಎಸ್ ಕೆ ಸೋತ ನಂತರ, ವಿಕೃತ ಮನಸ್ಥಿತಿಯವರು ಆಟಗಾರರು ಮತ್ತು ಅವರ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರೆ.

ಇಷ್ಟು ದಿನ ಕಳಪೆ ಪ್ರದರ್ಶನಕ್ಕೆ ಆಟಗಾರರನ್ನ ಟಾರ್ಗೆಟ್ ಮಾಡ್ತಿದ್ರು. ಟ್ರೋಲ್ ಕೂಡ ಮಾಡ್ತಾ ಇದ್ರು. ಆದ್ರೀಗ ಕೆಲ ದುರುಳರು ಆಟಗಾರರ ಕುಟುಂಬವನ್ನ ಟಾರ್ಗೆಟ್ ಮಾಡೋದಕ್ಕೆ ಶುರುಮಾಡಿದ್ದಾರೆ. ಧೋನಿ ಚೆನ್ನಾಗಿ ಆಡಿಲ್ಲವೆಂದು, ಧೋನಿ ಮಗಳು ಜೀವಾಳನ್ನ ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ಮಿಸ್ಟರ್ ವಿಜಯ್ ಎಂಬ ಈ ನೀಚ ಮನಸ್ಸಿನ ದುರುಳ, ಧೋನಿ ಮಗಳು ಜೀವಳನ್ನು ರೇಪ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಧೋನಿ ಮಗಳಿಗೆ ಬೆದರಿಕೆಯೊಡ್ಡಿರುವ ಸ್ಕ್ರೀನ್ ಶಾಟ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಕೇವಲ ಅತ್ಯಾಚಾರ ಮಾಡ್ತೀನಿ ಅನ್ನೋದಷ್ಟೇ ಅಲ್ಲ.. ಕೆಲ ಕ್ರಿಮಿಗಳು ಜೀವಾ ಹೆಸರನ್ನ ಬಳಸಿ ಅಶ್ಲೀಲ ಕಮೆಂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದಿದ್ದಾರೆ. ಜೀವಾಳಿಗೆ ಬೆದರಿಕೆ ಹಾಕಿರೋ ಕಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ನಿಜವಾದ ಕ್ರಿಕೆಟ್ ಪ್ರೇಮಿಗಳು ಇದನ್ನ ನೋಡಿ ಬೆಚ್ಚಿ ಬಿದ್ದಿದ್ದಾರೆ.