ಬೆಂಗಳೂರು: ಈಗಾಗಲೇ ಸಾಕಷ್ಟು ಕಲಾವಿದರು ಕಿರುತೆರೆಯಲ್ಲಿ ಮಿಂಚಿ ಬೆಳ್ಳಿತೆರೆಗೆ ಬಂದಿದ್ದಾರೆ. ಈಗ ಆ ಸರದಿ ಮೋಕ್ಷಿತಾ ಪೈ ಅವರದ್ದು. ಕಿರುತೆರೆಯಲ್ಲಿ ಈಗಾಗಲೆ ತನ್ನದೇ ಛಾಪು ಮೂಡಿಸಿರುವ ನಟಿ ಈಗ ದುನಿಯಾ ವಿಜಯ್ ಹೊಸ ಸಿನಿಮಾಗೆ ಜೊತೆಯಾಗುತ್ತಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಮೋಕ್ಷಿತಾ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದು, ಪಾರು ಎಂದೇ ಖ್ಯಾತರಾಗಿದ್ದಾರೆ. ಇದೀಗ ಮೋಕ್ಷೀತಾ ದುನಿಯಾ ವಿಜಿ ನಿರ್ದೇಶನದ ಹೊಸ ಸಿನಿಮಾಗೆ ಸೇರಿದ್ದು, ಈ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.
ಡಾ. ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ಅವರ ಮೊಮ್ಮಗ ಲಕ್ಕಿ ನಾಯಕನಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ.ಈ ಸಿನಿಮಾದಲ್ಲಿ ನಾನು ನಾಯಕಿಯಾಗಿ ಆಯ್ಕೆ ಆಗಿದ್ದೇನೆ ಎಂದಾಗ ನನಗೆ ನಂಬಲಾಗಲೇ ಇಲ್ಲಎಂದು ಸಂತಸ ವ್ಯಕ್ತಪಡಿಸಿದ್ದಾರೆ. ‘ದುನಿಯಾ ವಿಜಯ್ ಅವರು ಕರೆ ಮಾಡಿ ನನ್ನ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಿದರು. ನಾನು ನನ್ನನ್ನೇ ಕರೆಯುತ್ತಿದ್ದಾರಾ ಎಂದು ಅನುಮಾನಕ್ಕೊಳಗಾದೆ. ಅವರು ಮತ್ತೊಮ್ಮೆ ಹೇಳಿದಾಗ ಕನ್ಫರ್ಮ್ ಆಯಿತು. ನನ್ನನ್ನು ಆಯ್ಕೆ ಮಾಡುವ ಮುನ್ನವೇ ಅವರು ನನ್ನ ಸೀರಿಯಲ್ನ ಕೆಲ ಎಪಿಸೋಡ್ಗಳನ್ನು ನೋಡಿದ್ದರಂತೆ. ಮೇಕಪ್ ಇಲ್ಲದೇ ಮನೆಗೆ ಬರಲು ಹೇಳಿದ್ದರು. ಹೋದಾಗ ನನ್ನ ಪಾತ್ರಕ್ಕೆ ಸೂಕ್ತವಾಗಿದ್ದೀರಿ ಎಂದು ಕಥೆ ಹೇಳಿದರು. ನಾನು ಕಥೆಯೊಳಗೆ ಮುಳುಗಿ ಹೋಗಿದ್ದೆ. ಅದರಿಂದ ಹೊರಬರಲು 15 ನಿಮಿಷ ತೆಗೆದುಕೊಂಡೆ ಎಂದಿದ್ದಾರೆ ಮೋಕ್ಷಿತಾ
ಸಲಗ ಸಿನಿಮಾ ನಂತರ ದುನಿಯಾ ವಿಜಿ ಹೊಸ ಸಿನಿಮಾಗೆ ಕೈ ಹಾಕಿದ್ದು ಅದರಲ್ಲಿ ರಾಜ್ ಕುಟುಂಬದ ಲಕ್ಕಿ ಗೋಪಾಲ್ ನಾಯಕನಾಗಿದ್ದಾರೆ. ನಾಯಕಿಯಾಗಿ ಪಾರು ಖ್ಯಾತಿಯ ಮೋಕ್ಷಿತಾ ಪೈ ಆಯ್ಕೆಯಾಗಿದ್ದಾರೆ. ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ ಆದ್ರೆ ಆದಷ್ಟು ಬೇಗ ಶೂಟಿಂಗ್ ಶುರುವಾಗಲಿದೆ ಅಂತ ಚಿತ್ರತಂಡ ತಿಳಿಸಿದೆ.