Tuesday, August 3, 2021
No menu items!
Home Karnataka ಡಿಜಿಟಲ್ ಇಂಡಿಯಾದಿಂದ ದೇಶ ಅಭಿವೃದ್ಧಿಯತ್ತ ಸಾಗಿದೆ: ಪ್ರಧಾನಿ ಮೋದಿ

ಡಿಜಿಟಲ್ ಇಂಡಿಯಾದಿಂದ ದೇಶ ಅಭಿವೃದ್ಧಿಯತ್ತ ಸಾಗಿದೆ: ಪ್ರಧಾನಿ ಮೋದಿ

ಬೆಂಗಳೂರು : ಇಂದು ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮುಜಲಕ ಉದ್ಘಾಟಿಸಿದ ಮೋದಿ ಅವರು, ಡಿಜಿಟಲ್ ಇಂಡಿಯಾ ಇಂದು ಎಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಡಿಜಿಟಲ್ ಇಂಡಿಯಾದಿಂದ ದೇಶ ಅಭಿವೃದ್ದಿಯತ್ತ ಸಾಗಿದೆ ಎಂದು ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಜಾರಿಯಾಗಿ ಇಂದಿಗೆ 5 ವರ್ಷವಾಗಿದೆ. ಡಿಜಿಟಲ್ ಇಂಡಿಯಾದಿಂದ ದೇಶ ಅಭಿವೃದ್ದಿಯತ್ತ ಸಾಗಿದೆ. ಡಿಜಿಟಲ್ ಇಂಡಿಯಾದಿಂದ ಜೀವನ ಸುಧಾರಿಸಿದೆ. ಡಿಜಿಟಲ್ ಇಂಡಿಯಾ ಜನರ ಜೀವನ ಪದ್ಧತಿಯಾಗಿದೆ ಎಂದರು.

ತಂತ್ರಜ್ಞಾನ ನಮ್ಮ ಎಲ್ಲಾ ಯೋಜನೆಗಳ ಅವಿಭಾಜ್ಯ ಅಂಗ. ಆಡಳಿತದ ಭಾಗ. ಟೆಕ್ನಾಲಜಿ ಮೊದಲು ಎಂಬುದು ಎಲ್ಲರ ಆದ್ಯತೆಯಾಗಿದೆ. ಭಾರತದಲ್ಲಿ ದೊಡ್ಡ ಆರೋಗ್ಯ ಯೋಜನೆ ಜಾರಿಗೆ ತರುವಲ್ಲಿ ತಂತ್ರಜ್ಞಾನ ಕೊಡುಗೆ ಅಪಾರವಾಗಿದೆ. ತಂತ್ರಜ್ಞಾನ ಸಹಕಾರದಿಂದಲೇ ಆರೋಗ್ಯ ಸೌಲಭ್ಯಗಳು ಸಾಮಾನ್ಯ ಜನರಿಗೂ ತಲುಪುತ್ತಿವೆ. ಕೊರೋನಾ ಸಮಯದಲ್ಲಿ ತಂತ್ರಜ್ಞಾನ ನೆರವಿಗೆ ಬಂದಿದೆ ಎಂದು ಮೋದಿ ತಿಳಿಸಿದರು.

ಹೊಸ ಸಂಶೋಧನೆಯಿಂದ ಟೆಕ್ನಾಲಜಿ ಇನ್ನಷ್ಟು ಬೆಳೆಯುತ್ತದೆ. ಹೀಗಾಗಿ ಯುವಕರು ಇದರತ್ತ ಇನ್ನಷ್ಟು ಮುಖಮಾಡಬೇಕು ಎಂದು ಮೋದಿ ಹೇಳಿದರು. ತಂತ್ರಜ್ಞಾನದಿಂದ ಜನರಿಗೆ ಯೋಜನೆಗಳು ತಲುಪುತ್ತಿವೆ. ಟೆಕ್ನಾಲಜಿ ನಮ್ಮ ಎಲ್ಲಾ ಯೋಜನೆಗಳ ಅವಿಭಾಜ್ಯ ಅಂಗ. ಹೊಸ ತಂತ್ರಜ್ಞಾನ ಅವಿಷ್ಕಾರಕ್ಕೆ ನೆರವು ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ವಿದ್ಯುನ್ಮಾನ , ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ , ಬೆಂಗಳೂರು ವತಿಯಿಂದ ಇಂದಿನಿಂದ ನವೆಂಬರ್ 21 ರವರೆಗೆ ಮೊದಲ ಬಾರಿಗೆ ವರ್ಚ್ಯುಯಲ್ ವೇದಿಕೆ ಮೇಲೆ ’23ನೇ ಬೆಂಗಳೂರು ಟೆಕ್ ಸಮ್ಮಿಟ್’ನಡೆಯುತ್ತಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments