ನವ ದೆಹಲಿ : ಇಂದು ಮಹಾನವಮಿ ಹಬ್ಬ..ನಾಡಿನೆಲ್ಲೆಡೆ ಆಯುಧ ಪೂಜೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊರೊನಾ ನಡುವೆಯೂ ಹಬ್ಬದ ಆಚರಣೆಯನ್ನ ಬಿಡದೆ ಎಲ್ಲರೂ ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ದೇಶದಾದ್ಯಂತ ಕೊರೊನಾ ಉಲ್ಬಣಿಸುತ್ತಿದೆ. ಈ ಅಮಯದಲ್ಲಿ ಹಬ್ಬ ಆಚರಿಸುವಾಗ ತಾಳ್ಮೆ, ಎಚ್ಚರ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಮತ್ತೊಮ್ಮೆ ದೀಪ ಬೆಳಗಿಸಲು ಮೋದಿ ಕರೆ ನೀಡಿದ್ದಾರೆ. ದೇಶದ ಧೈರ್ಯಶಾಲಿ ಸೈನಿಕರು ಮತ್ತು ಭದ್ರತಾ ಪಡೆಗಳೊಂದಿಗೆ ಭಾರತ ದೃಢವಾಗಿ ನಿಂತಿದೆ. ಕೊರೊನಾ ಸಾಂಕ್ರಾಮಿಕ ವೈರಸ್ ನಡುವೆ ಹಬ್ಬಗಳನ್ನು ಆಚರಿಸುವಾಗ ಸೈನಿಕರಿಗಾಗಿ ದೀಪ ಬೆಳಗಿಸಬೇಕೆಂದು ಜನರಲ್ಲಿ ಪ್ರಧಾನಿ ಮನವಿ ಮಾಡಿದ್ದಾರೆ.
ದೇಶದ ಜನರನ್ನು ಹಾಗೂ ದೇಶವನ್ನು ಹೊರಗಿನವರ ದಾಳಿಯಿಂದ ಸುರಕ್ಷಿತವಾಗಿರಿಸಲು ನಮ್ಮ ಸೈನಿಕರು ಕುಟುಂಬಗಳಿಂದ ದೂರ ಇದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಮಯದಲ್ಲಿ ಈದ್, ದೀಪಾವಳಿಯಂತ ಹಲವು ಹಬ್ಬಗಳು ಬರಲಿವೆ. ಈ ಹಬ್ಬಗಳ ಸಮಯದಲ್ಲಿ ಗಡಿಯಲ್ಲಿ ನಿಂತಿರುವ ನಮ್ಮ ಕೆಚ್ಚೆದೆಯ ಸೈನಿಕರನ್ನು ನೆನಪಿನಲ್ಲಿಟ್ಟುಕೊಳ್ಳೋಬೇಕು ಎಂದಿದ್ದಾರೆ.