Tuesday, October 26, 2021
No menu items!
Home Karnataka ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ಅಭ್ಯರ್ಥಿ ಘೋಷಿಸಿದ ಜೆಡಿಎಸ್

ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ಅಭ್ಯರ್ಥಿ ಘೋಷಿಸಿದ ಜೆಡಿಎಸ್

ಮಂಡ್ಯ: ನಾಗಮಂಗಲ ಕ್ಷೇತ್ರಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಚುನಾವಣೆ ಎರಡೂವರೆ ವರ್ಷ ಇರುವಾಗಲೇ ಈಗಲೇ ನಿಖಿಲ್ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ ಅವರು, ನಾಗಮಂಗಲ ಕ್ಷೇತ್ರಕ್ಕೆ ಸುರೇಶ್ ಗೌಡ ಅವರೇ ಅಭ್ಯರ್ಥಿ ಎಂದಿದ್ದಾರೆ. ಕ್ಷೇತ್ರದಲ್ಲಿ ಭಿನ್ನಮತ ಸೃಷ್ಟಿಯಾಗಿರುವ ಹೊತ್ತಲ್ಲೇ ನಿಖಿಲ್ ಕುಮಾರಸ್ವಾಮಿ ಟಿಕೆಟ್ ಘೋಷಣೆ ಮಾಡಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇದು ನಮ್ಮ ಪಕ್ಷದ ತೀರ್ಮಾನವಾಗಿದೆ. ರಾಷ್ಟ್ರೀಯ ಅಧ್ಯಕ್ಷ ಕುಮಾರಣ್ಣ, ಕಾರ್ಯಕರ್ತರ ತೀರ್ಮಾನವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್ ಗೌಡ ಅವರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿ ಮಾಡಲು ನಾವು ಬಿಡುವುದಿಲ್ಲ ಎಂದು ಹೆಳುವ ಮೂಲಕ ಪರೋಕ್ಷವಾಗಿ ಶಿವರಾಮೇಗೌಡಗೆ ಟಾಂಗ್ ನೀಡಿದರು.

ನಾಗಮಂಗಲ ಕ್ಷೇತ್ರದ ಹಾಲಿ-ಮಾಜಿ ಶಾಸಕರಾದ ಸುರೇಶ್ ಗೌಡ -ಎಲ್.ಆರ್.ಶಿವರಾಮೇಗೌಡ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಮುಂದಿನ ಚುನಾವಣೆಯ ಅಭ್ಯರ್ಥಿ ನಾನೇ ಎಂದು ಶಿವರಾಮೇಗೌಡರು ಹೇಳಿದ್ದರು. ಬಳಿಕ ಸುರೇಶ್ ಗೌಡ, ಶಿವರಾಮೇಗೌಡರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.

ಇದೇ ವೇಳೆ ನಿಖಿಲ್ ರಾಜಕೀಯಕ್ಕೆ ರೀ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಶಾಸಕ ಆಗಬೇಕೆಂದು ಹುಚ್ಚು ಹಿಡಿಸಿಕೊಂಡಿದ್ರೇ ಯಾವತ್ತೋ ರಾಜಕಾರಣಕ್ಕೆ ನುಗ್ಗುತ್ತಿದೆ. ಎಷ್ಟೋ ಜನ ನಮ್ಮ ತಂದೆ ಹೆಸರಲ್ಲಿ ಶಾಸಕರಾಗಿದ್ದಾರೆ. ನಾನು 10 ವರ್ಷದ ಹಿಂದೆಯೇ ಶಾಸಕ ಆಗಿಬಿಡ್ತಿದ್ದೆನೇನೋ. ಸಿನಿಮಾ ರಂಗದಲ್ಲಿ ನನ್ನನ್ನ ನಾನು ತೊಡಗಿಸಿಕೊಂಡಿದ್ದೇನೆ. ನನಗೆ ಒಂದು ಪ್ಯಾಷನ್ ಇತ್ತು, ಅದನ್ನು ಮುಂದುವರಿಸುತ್ತೇನೆ ಎಂದರು.

ಪಕ್ಷ ಒಂದು ಜವಬ್ದಾರಿ ಕೊಟ್ಟಿದೆ, ಯುವ ಘಟಕದ ಸ್ಥಾನ ನೀಡಿದ್ದಾರೆ. ರಾಮನಗರ ಜಿಲ್ಲೆ, ಮಂಡ್ಯ ಜಿಲ್ಲೆ ಯುವಕರು ನಾನು ಬರಬೇಕೆಂದು ಬಯಸುತ್ತಾರೆ. ಇದು ಒಂದು ಉದ್ದೇಶ ಬಿಟ್ಟರೆ, ಅಲ್ಲಿ ನಿಲ್ಲಬೇಕು, ಇಲ್ಲಿ ನಿಲ್ಲಬೇಕೆಂಬ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ. ಅದಕ್ಕೆ ನಾನು ಬದ್ಧನಾಗಿ ಕೆಲಸ ಮಾಡ್ತೇನೆ ಎಂದು ಹೇಳಿದರು.

ಕುಟುಂಬ ರಾಜಕಾರಣ ಕುರಿತು ಮಾತನಾಡಿದ ನಿಖಿಲ್, ಯಡಿಯೂರಪ್ಪರ ಮಕ್ಕಳು ರಾಜಕಾರಣ ಮಾಡ್ತಿಲ್ವಾ? ಸಿದ್ದರಾಮಯ್ಯ ಮಕ್ಕಳು ರಾಜಕಾರಣದಲ್ಲಿಲ್ವ? ಅವರಿಗೂ ಪ್ರಶ್ನೆ ಮಾಡಬೇಕಾಗುತ್ತೆ? ಎಂದು ಗದರಿದರು. ನಾವು ಜನಗಳ ಜತೆ ಬೇರಿತೀವಿ, ಇರ್ತಿವಿ ಎಂದು ಹೇಳಿದರು.

?

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments