Wednesday, June 16, 2021
No menu items!
Home Latest ಅಬ್ಬಾ.. ಮೊಸಳೆ ಬಾಯಿಗೆ ಕೈ ಹಾಕಿ ನಾಯಿ ಮರಿ ಕಾಪಾಡಿದ..!

ಅಬ್ಬಾ.. ಮೊಸಳೆ ಬಾಯಿಗೆ ಕೈ ಹಾಕಿ ನಾಯಿ ಮರಿ ಕಾಪಾಡಿದ..!

ಮೊಸಳೆ ಕಂಡ್ರೆ ಯಾರಿಗೆ ತಾನೇ ಭಯ ಇರಲ್ಲ ಹೇಳಿ. ಅದರ ಹತ್ತಿರಕ್ಕೆ ಹೋಗುವುದಕ್ಕೂ ಭಯ ಪಡುತ್ತೇವೆ. ಹತ್ತಿರ ಹೋದರೇ ಇನ್ನೆಲ್ಲಿ ನಮ್ಮನ್ನು ತಿಂದು ಬಿಡುತ್ತೋ ಅನ್ನೋ ಭಯ. ಆದ್ರೆ ಇಲ್ಲೊಬ್ಬ ವೃದ್ಧ ಮೊಸಳೆ ಬಾಯಲ್ಲಿದ್ದ ನಾಯಿಮರಿಯನ್ನೇ ರಕ್ಷಿಸಿದ್ದಾರೆ.

ಹೌದು, ಮೊಸಳೆಯನ್ನು ಕಂಡು ಭಯ ಪಡದೆ, ತನ್ನ ಪ್ರಾಣವನ್ನು ಲೆಕ್ಕಿಸದೇ ಈ ವೃದ್ಧ ಮೊಸಳೆಯಿಮದ ತನ್ನ ನಾಯಿಮರಿಯನ್ನು ರಕ್ಷಿಸಿದ್ದಾರೆ. ಅಮೆರಿಕಾದ ರಿಚರ್ಡ್ ವಿಲ್ಬ್ಯಾಂಕ್ಸ್ ಎನ್ನುವವರೇ ಈ ಸಾಹಸ ಮಾಡಿದ ವ್ಯಕ್ತಿ.

ರಿಚರ್ಡ್ ಅವರ ಮನೆಯ ಹಿಂದೆ ಒಂದು ಕೊಳ ಇದೆ. ಆ ಕೊಳದಲ್ಲಿ ಮೊಸಳೆ ವಾಸ ಮಾಡುತ್ತಿದೆ. ಈ ಮೊಸಳೆ ರಿಚರ್ಡ್ ಅವರು ಸಾಕಿದ ನಾಯಿಯನ್ನೇ ತಿನ್ನಲು ಯತ್ನಿಸಿತ್ತು. ಮೂರು ತಿಂಗಳ ನಾಯಿಯನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಇದನ್ನು ಗಮನಿಸಿದ ರಿಚರ್ಡ್ ಸುಮ್ಮನೆ ಕುರಲಿಲ್ಲ. ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮೊಸಳೆಯ ಜೊತೆ ಯುದ್ಧ ಮಾಡಿದ್ದಾರೆ.

ಕೊಳದ ನೀರಿಗೆ ಜಿಗಿದ ರಿಚರ್ಡ್ತನ್ನ ನಾಯಿಯನ್ನ ಕಾಪಾಡಲು ಮುಂದಾಗಿದ್ದಾರೆ. ಮೊಸಳೆ ನಾಯಿಮರಿಯನ್ನ ತನ್ನ ಚೂಪಾದ ಹಲ್ಲುಗಳಿಂದ ಬಿಗಿಯಾಗಿ ಹಿಡಿದುಕೊಂಡಿತ್ತು. ಹೀಗಾಗಿ ರಿಚರ್ಡ್ ಮರಿಯನ್ನ ಬಿಡಿಸಲು ಮೊಸಳೆಯನ್ನ ಅಲುಗಾಡಿಸಿದ್ರೂ ಪ್ರಯೋಜನವಾಗಲಿಲ್ಲ. ಬಳಿಕ ಅವರು ಮೊಸಳೆಯ ಬಾಯನ್ನ ಅಗಲಿಸಿದ್ರು. ನಾಯಿ ತಕ್ಷಣ ಅಲ್ಲಿಂದ ಓಡಿ ಹೋಯಿತು. ಘಟನೆ ಬಗ್ಗೆ ಮಾತನಾಡಿರೋ ರಿಚರ್ಡ್, ನಾವು ಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ವಿ. ಆಗ ಮೊಸಳೆ, ನೀರಿನಿಂದ ಮಿಸೈಲ್ನಂತೆ ಬಂತು. ಮೊಸಳೆಗಳು ಅಷ್ಟು ವೇಗವಾಗಿ ಚಲಿಸುತ್ತವೆ ಅಂತ ನನಗೆ ಗೊತ್ತೇ ಇರಲಿಲ್ಲ. ಅಷ್ಟು ಕ್ವಿಕ್ ಆಗಿತ್ತು. ಎಂದಿದ್ದಾರೆ.

ಇಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಮೊಸಳೆ ಬಾಯಿಗೆ ಸಿಲುಕಿದ್ದ ನಾಯಿಗೆ ಸಣ್ಣ ಗಾಯವಾಗಿದೆ. ರಿಚರ್ಡ್ ಅವರ ಕೈಗಳೂ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಈ ದೃಶ್ಯ ನೋಡಿದವರ ಮೈ ಝುಮ್ ಎನ್ನುವಂತೆ ಮಾಡಿದೆ. ರಿಚರ್ಡ್ ಸಾಹಸ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://fb.watch/1XfDJIbe2s/

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments