Wednesday, June 16, 2021
No menu items!
Home Bharata ಮದುವೆಗೆ ಹುಡಗಿಯನ್ನು ಹೀಗೂ ಹುಡುಕಬಹುದು..

ಮದುವೆಗೆ ಹುಡಗಿಯನ್ನು ಹೀಗೂ ಹುಡುಕಬಹುದು..

ಕೊಟ್ಟಾಯಂ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಇಲ್ಲೊಬ್ಬ ಯುವಕ ಏನ್ ಮಾಡಿದ್ದಾನೆ ಗೊತ್ತಾ..?

ಐದಾರು ವರ್ಷಗಳಿಂದ ಹುಡುಗಿ ಹುಡುಕಿ ಹುಡುಕಿ ಸಾಕಾದ ಕೇರಳದ ಕೊಟ್ಟಾಯಂ ಯುವಕನೊಬ್ಬ ಅದ್ಭುತ ಪ್ಲ್ಯಾನ್ ಮಾಡಿಬಿಟ್ಟಿದ್ದಾನೆ. ವಧು-ವರರ ಕೇಂದ್ರದಲ್ಲಿ ಹೆಸರು ನೋಂದಾಯಿಸಿದರೂ, ವೆಬ್ಸೈಟ್ಗಳಲ್ಲಿ ವಧು ಬೇಕಾಗಿದ್ದಾಳೆ ಎಂದು ಜಾಹೀರಾತು ಕೊಟ್ಟರೂ ಫಲ ಕಾಣದ 35 ವರ್ಷದ ಯುವಕನ ಪ್ಲ್ಯಾನ್ ಈಗ ಯಶಸ್ಸು ಕಂಡಿದೆ.

ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ತನ್ನದೇ ಆದ ವುಡ್ ಮಿಲ್ ಹೊಂದಿರುವ 35 ವರ್ಷದ ಅನೀಶ್ ಸೆಬಾಸ್ಟೀಯನ್, ತನ್ನದೇ ಮಾಲೀಕತ್ವದ ಮರದ ಮಿಲ್ನ ಹೊರಗಡೆ ‘ವಧು ಬೇಕಾಗಿದ್ದಾಳೆ’ ಎಂಬ ಫ್ಲೆಕ್ಸ್ ಹಾಕಿಸಿಬಿಟ್ಟಿದ್ದಾನೆ. ಈತನ ಅದೃಷ್ಟ ಖುಲಾಯಿಸಿ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಇದೀಗ ಅನೇಕ ಮಂದಿ ಈತನನ್ನು ಸಂಪರ್ಕಿಸುತ್ತಿದ್ದಾರೆ. ವಧು ಹುಡುಕುತ್ತಿದ್ದೇನೆ. ಪ್ರೀತಿಯೇ ಮುಖ್ಯ ಎಂಬ ಯೋಚನೆಯಲ್ಲಿ ಇರುವ, ಯಾವುದೇ ಬೇಡಿಕೆಗಳಿಲ್ಲದ, ನಮ್ಮ ಸಂಸ್ಕೃತಿಯ ಜತೆಗೂಡಿ ಸಾಗುವಂಥ ವಧು ಬೇಕಾಗಿದ್ದಾಳೆ. ಇಷ್ಟವಿದ್ದರೆ ಈ ಸಂಖ್ಯೆ ಸಂಪರ್ಕಿಸಿ’ ಎಂದು ಫ್ಲೆಕ್ಸ್ನಲ್ಲಿ ಬರೆದಿದ್ದಾನೆ.

ಹುಡುಗಿಯನ್ನು ಹುಡುಕಿ ಹುಡುಕಿ ಸಾಕಾದ ಮೇಲೆ ಈ ಪ್ಲ್ಯಾನ್ ಮಾಡಿದ್ದೇನೆ. ಫೋಟೋ ತೆಗೆಸಿ, ಡಿಸೈನ್ ಮಾಡಿಸಿ, ಅದರಲ್ಲೇ ವಾಟ್ಸಪ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಫ್ಲೆಕ್ಸ್ ಹಾಕಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿಬಿಟ್ಟಿದೆ, ನನಗೇ ಅಚ್ಚರಿಯಾಯಿತು. ಅನೇಕ ಮಂದಿ ಬಂದಿದ್ದಾರೆ. ವಿದೇಶದಿಂದಲೂ ಕೆಲವರು ಸಂಪರ್ಕಿಸಿದ್ದಾರೆ.

ಆದರೆ ಈ ರೀತಿ ಸಂಪರ್ಕಕ್ಕೆ ಬಂದವರು ಯಾಕೋ ನನಗೆ ಸರಿ ಅನ್ನಿಸಲಿಲ್ಲ. ಜೀವನಪೂರ್ತಿ ಬಾಳಿ ಬದುಕಬೇಕಾದವರನ್ನು ಹುಡುಕುತ್ತಿರೋದಲ್ವಾ. ಆದ್ದರಿಂದ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡುತ್ತಿದ್ದೇನೆ ಎನ್ನುತ್ತಾನೆ ಅನೀಶ್.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments