ವಧು_ವರ ಇಬ್ಬರಿದ್ದರೇ ಮಾತ್ರ ಮದುವೆಯಾಗೋಕೆ ಸಾಧ್ಯ ಅಲ್ವಾ. ಒಂದು ವೇಳೆ ಕುಟುಂಬಸ್ಥರು ಇಲ್ಲ ಅಂದ್ರು ದೇವಸ್ಥಾನದ ಮುಂದೆ ಬೇಕಾದರೂ ಮದುವೆಯಾಗಬಹುದು. ಆದ್ರೆ ವಧು ಇಲ್ಲ ಅಂದ್ರೆ ಮದುವೆ ಆಗೋದಾದ್ರು ಹೇಗೆ..? ಇಲ್ಲೊಬ್ಬ ವರ ಆ ಸಾಧನೆಯನ್ನ ಮಾಡಿ ತೋರಿಸಿದ್ದಾನೆ.
ಬ್ರೆಜಿಲ್ನ ಬಹಿಯಾ ರಾಜ್ಯದ ಇಟಕೇರ್ ನಿವಾಸಿ ಡಿಯಾಗೊ ರಾಬೆಲೊ ಎಂಬಾತ ತನ್ನನ್ನು ತಾನೇ ಮದುವೆಯಾಗಿದ್ದಾನೆ. ಯಾಕೆ ಈ ರೀತಿ ಒಬ್ಬನೇ ಮದುವೆಯಾದ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡಿದೆ. ಅದಕ್ಕೂ ಕಾರಣ ಇದೆ.
ಡಿಯಾಗೋ ಮತ್ತು ಆತನ ಗೆಳತಿ ವಿಕ್ಟರ್ ಬಿಯೆನೋಗೆ ಕಳೆದ ವರ್ಷ ನವೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಲು ನಿರ್ಧರಿಸಿತ್ತು. ಆದರೆ, ನಿಶ್ಚಿತಾರ್ಥದ ಬಳಿಕ ಈ ಜೋಡಿಯ ನಡುವೆ ಪದೇ ಪದೇ ವೈಮನಸ್ಸು ಮೂಡಿತ್ತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ವಿಕ್ಟರ್ ದೂರವಾಗಿದ್ದಳು.
ಭಾವಿ ಪತ್ನಿ ಸಂಬಂಧ ಕಡಿದುಕೊಂಡಳು ಅಂತ ನಾನ್ಯಾಕೆ ಮದುವೆ ಆಗೋದನ್ನು ನಿಲ್ಲಿಸಬೇಕು ಎಂದ ಡಿಯಾಗೂ, ಮೊದಲೇ ಗೊತ್ತಾದ ಮದುವೆಯ ದಿನಾಂಕದಂದೇ ವಧುವಿಲ್ಲದೆ ಮದುವೆಯಾಗಿದ್ದಾನೆ. ಖುಷಿಯಾಗಿರಲು ನನಗೆ ಮದುವೆಯ ಅಥವಾ ಹೆಂಡತಿಯ ಅವಶ್ಯಕತೆ ಇಲ್ಲ. ಆದರೆ, ನನಗೂ ಮದುವೆಯಾಗಬೇಕು ನನ್ನ ಮಕ್ಕಳಿಗೆ ತಂದೆಯಾಗಬೇಕು ಎಂಬ ಬಯಕೆ ಇದೆ. ನನ್ನ ಖುಷಿ ಮದುವೆಯ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿಕೊಂಡಿದ್ದಾನೆ.