Tuesday, October 26, 2021
No menu items!
Home Special ಬಾರ್ಲಿಯಿಂದ ತೂಕ ಇಳಿಕೆ ಮಾತ್ರವಲ್ಲ ಆರೋಗ್ಯವು ವೃದ್ಧಿಸುತ್ತೆ

ಬಾರ್ಲಿಯಿಂದ ತೂಕ ಇಳಿಕೆ ಮಾತ್ರವಲ್ಲ ಆರೋಗ್ಯವು ವೃದ್ಧಿಸುತ್ತೆ

ಆರೋಗ್ಯವನ್ನೂ ಉಳಿಸಿಕೊಂಡು ಹೆಚ್ಚಿನ ತೂಕವನ್ನೂ ಕಳೆದುಕೊಳ್ಳುವಂತಾದರೆ ಮಾತ್ರ ಇದು ನಿಜವಾದ ತೂಕ ಇಳಿಕೆಯಾಗಿದೆ. ಈ ಬಗೆಯ ಜಾಣತನದ ಕ್ರಮ ಅನುಸರಿಸುವವರಿಗೆ ಬಾರ್ಲಿ ಅತ್ಯುತ್ತಮ ಆಹಾರವಾಗಿದೆ ಹಾಗೂ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಅಧಿಕ ತೂಕವನ್ನು ಇಳಿಸಿ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ. ಇದರ ಪ್ರಯೋಜನಗಳನ್ನು ಅರಿತವರು ಬಾರ್ಲಿಯ ನೀರನ್ನು ನಿಯಮಿತವಾಗಿ ಸೇವಿಸಿ ಹೊಟ್ಟೆಯ ಕೊಬ್ಬನ್ನು ಹಾಗೂ ಹಠಮಾರಿಯಾಗಿರುವ ಇತರ ಕೊಬ್ಬನ್ನು ಕರಗಿಸಿಕೊಳ್ಳುತ್ತಿದ್ದಾರೆ.

ಬಾರ್ಲಿ ಸೇವನೆಯ ಪ್ರಯೋಜನಗಳು:

* ಬಾರ್ಲಿಯ ಸೇವನೆಯಿಂದ ತೂಕದ ಇಳಿಕೆಯ ಹೊರತಾಗಿ ಲಭಿಸುವ ಇತರ ಆರೋಗ್ಯಕರ ಪ್ರಯೋಜನಗಳಲ್ಲಿ ಪ್ರಮುಖವಾದುದೆಂದರೆ ಹಲವಾರು ಅಪಾಯಕಾರಿಯಾಗಿ ಪರಿಣಮಿಸಬಹುದಾದ ಕಾಯಿಲೆಗಳು ಆವರಿಸುವ ಸಾಧ್ಯತೆಗಳನ್ನು ತಗ್ಗಿಸುತ್ತದೆ.

ಉದಾಹರಣೆಗೆ ಅಧಿಕ ರಕ್ತದೊತ್ತಡ, ಹೃದಯದ ತೊಂದರೆಗಳು, ಮಧುಮೇಹ, ಸ್ಥೂಲಕಾಯ, ಸಂಧಿವಾತ, ಅಸ್ತಮಾ, ಪಿತ್ತಕೋಶದ ಕಲ್ಲುಗಳು, ನಪುಂಸಕತ್ವ, ಇತ್ಯಾದಿ.

* ಬಾರ್ಲಿಯ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಉತ್ತಮಗೊಳ್ಳುತ್ತದೆ ಹಾಗೂ ತ್ವಚೆಯ ಆರೋಗ್ಯವೂ ವೃದ್ಧಿಸುತ್ತದೆ. ಸಾಮಾನ್ಯವಾಗಿ ಬಾರ್ಲಿಯನ್ನು ಬೇಯಿಸಿ ಅಥವಾ ಹಿಟ್ಟಿನಿಂದ ಬ್ರೆಡ್ ತಯಾರಿಸಿ ಸೇವಿಸಲಾಗುತ್ತದೆ. ಕೆಲವೊಮ್ಮೆ ಅಕ್ಕಿಯ ಪರ್ಯಾಯವಾಗಿಯೂ ಬಾರ್ಲಿಯನ್ನು ಸೇವಿಸಲಾಗುತ್ತದೆ. ಈ ಅದ್ಭುತ ಧಾನ್ಯದ ಸೇವನೆಯನ್ನು ನಿಯಮಿತವಾಗಿ ಸೇವಿಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಇದರ ಪ್ರಯೋಜನಗಳು ಹೇಗೆ ಒದಗುತ್ತವೆ ಎಂಬುದನ್ನು ಸ್ವತಃ ಕಾಣಬಹುದು.

* ತೂಕ ಇಳಿಕೆಗೆ ಬಾರ್ಲಿ ನೀರು ಕುಡಿದರೆ ಇತ್ತಮ. ಬಾರ್ಲಿಯಲ್ಲಿ ಅಧಿಕಾಂಶವಿರುವ ಕರಗದ ನಾರೇ ತೂಕ ಇಳಿಸಲು ಪ್ರಮುಖ ಕಾರಣವಾದ ಪೋಷಕಾಂಶವಾಗಿದೆ. ಇದೇ ಗುಣವನ್ನು ಓಟ್ಸ್ ರವೆ, ಇಡಿಯ ಗೋಧಿ ಹಾಗೂ ಇತರ ಧಾನ್ಯಗಳು ಹೊಂದಿವೆ. ಅಲ್ಲದೇ ಈ ಅಧಿಕ ನಾರಿನಂಶ ಇರುವ ಆಹಾರಗಳನ್ನು ಸೇವಿಸಿದ ಬಳಿಕ ಹೆಚ್ಚು ಹೊತ್ತಿನವರೆಗೆ ಹಸಿವಾಗದಂತೆ ತಡೆಯುವ ಮೂಲಕ ಅನಗತ್ಯ ಆಹಾರ ಸೇವನೆಯಿಂದ ರಕ್ಷಿಸುತ್ತದೆ.

* ತನ್ಮೂಲಕ ಅಧಿಕ ಕ್ಯಾಲೋರಿಗಳು ದೇಹ ಸೇರದಂತೆ ತಡೆಯುತ್ತದೆ. ಅಲ್ಲದೇ ಈ ಕರಗದ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಮಲಬದ್ದತೆಯಿಂದ ರಕ್ಷಿಸುತ್ತದೆ ಹಾಗೂ ಇತರ ಜೀರ್ಣಕ್ರಿಯೆಗಳಿಗೆ ಸಂಬಂಧಿಸಿದ ತೊಂದರೆಗಳಿಂದಲೂ ರಕ್ಷಿಸುತ್ತದೆ. ಈ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

* ಇದರಲ್ಲಿ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿವೆ
ಇಡಿಯ ಧಾನ್ಯಗಳ ಪಟ್ಟಿಯಲ್ಲಿರುವ ಇತರ ಧಾನ್ಯಗಳಿಗೆ ಹೋಲಿಸಿದರೆ ಬಾರ್ಲಿಯಲ್ಲಿ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿವೆ. ಅಲ್ಲದೇ ಉತ್ತಮ ಪ್ರಮಾಣದ ಪ್ರೋಟೀನ್ ಸಹಾ ಇದ್ದು ಹಸಿವನ್ನು ನಿಗ್ರಹಿಸುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಈ ಎಲ್ಲಾ ಗುಣಗಳನ್ನು ಕ್ರೋಢೀಕರಿಸಿದರೆ ತೂಕ ಇಳಿಸುವ ಇರಾದೆಯುಳ್ಳ ವ್ಯಕ್ತಿಗಳಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.

* ಬಾರ್ಲಿಯಲ್ಲಿ ವಿಟಮಿನ್ ‘ ಎ’ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು .

* ಬಾರ್ಲಿಯಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

* ಇದರಲ್ಲಿ ನಾರಿನಂಶ ಜಾಸ್ತಿಯಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ .

* ಬಾರ್ಲಿಯಲ್ಲಿರುವ ನಾರಿನಂಶದಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಧಾನವಾಗಿ ಬಿಡುಗಡೆ ಮಾಡಿ , ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

* ಮಧುಮೇಹ ಇದ್ದವರಿಗೆ ಬಾರ್ಲಿ ಉಪಯೋಗಿಸುವುದರಿಂದ ಲಾಭಪಡೆಯಬಹುದು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments