ಬಿಹಾರ : ಮೇವು ಹಗರಣ ಪ್ರಕರಣದಲ್ಲಿ ಬಂಧಿತನಾಗಿ ಕಳೆದ ಎರಡು ದಶಕಗಳಿಂದ ಜೈಲು ವಾಸ ಅನುಭವಿಸುತ್ತಿರುವ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ಮತ್ತೆ ಜೈಲೇ ಗತಿಯಾಗಿದೆ.
ಇಂದು ವಿಚಾರಣೆಯನ್ನ ಮತ್ತೆ ಕೈಗೆತ್ತಿಕೊಂಡಿದ್ದ ಜಾರ್ಖಂಡ್ ಹೈಕೋರ್ಟ್ ಮುಂದಿನ ನ.27 ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ಜೈಲುವಾಸವೇ ಗತಿಯಾಗಿದೆ. ಬಿಹಾರದ ಎಲೆಕ್ಷನ್ ರಿಸಲ್ಟ್ ದಿನವಾದ ಇಂದು ಜೈಲಿನಿಂದ ಹೊರಬರುತ್ತಾರೆ ಎಂದು ಕಾದಿದ್ದ ಅವರಿಗೆ ನಿರಾಶೆಯಾಗಿದೆ.
ಡಿಸೆಂಬರ್ 1995 ಮತ್ತು ಜನವರಿ 1996 ರ ನಡುವೆ “ನಕಲಿ ದಾಖಲೆಗಳನ್ನು’ ಬಳಸಿಕೊಂಡು ಡುಮ್ಕಾ ಖಜಾನೆಯಿಂದ 3.76 ಕೋಟಿ ರೂ.ಗಳನ್ನು ತೆಗೆದುಕೊಂಡು ಪಶು ಆಹಾರದ ಕಾಲ್ಪನಿಕ ಪೂರೈಕೆಗೆ ಸಂಬಂಧಿಸಿದ್ದಾಗಿದೆ. ಡುಮ್ಕಾ ಖಜಾನೆ ಜಾರ್ಖಂಡ್ ನಲ್ಲಿದ್ದು, ಆದರೆ ಆ ಸಂದರ್ಭದಲ್ಲಿ ಅವಿಭಜಿತ ಬಿಹಾರದ ಭಾಗವಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರಿಗೆ ಜೈಲು ಶಿಕ್ಷೆಯಾಗಿತ್ತು.
ತನ್ನ ಏಳು ವರ್ಷಗಳ ಜೈಲು ಶಿಕ್ಷೆಯ ಅರ್ಧಕ್ಕಿಂತ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿಯೇ ಕಳೆದಿದ್ದಾರೆ ಎಂಬ ಕಾರಣಕ್ಕೆ, ಅಕ್ಟೋಬರ್ 9 ರಂದು, ಚೈಬಾಸ ಖಜಾನೆಯಿಂದ ಅಕ್ರಮವಾಗಿ ಹಣವನ್ನು ವಾಪಸ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿತ್ತು.