ಇಂದು ನಾಡಿನೆಲ್ಲೆಡೆ ದಸರಾ ಹಬ್ಬ ಶುರುವಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾಗೂ ಸರಳಾವಾಗಿದ್ದು, ಇಂದು ಚಾಲನೆ ದೊರೆತಿದೆ. ನವರಾತ್ರಿಯ ಮೊದಲ ದಿನವಾದ ಇಂದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋ ಎಲ್ಲರ ಗಮನ ಸೆಳೆಯುತ್ತಿರುವುದಲ್ಲದೇ ಶಾಕ್ ಕೂಡ ಮಾಡಿದೆ.
ಗಾಯಗೊಂಡಿರುವ ಲಕ್ಷ್ಮೀ ದೇವರ ಫೋಟೋ ಹಂಚಿಕೊಂಡು ಈ ರೀತಿ ಬರೆದಿದ್ದಾರೆ. ʻಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳಲ್ಲಿ ಮೊದಲಲ್ಲಿರುವ ದೇಶದಲ್ಲಿ ಇನ್ನು ಒಂಬತ್ತು ದಿನಗಳ ಕಾಲ ಮಹಿಳೆಯನ್ನು ಪೂಜಿಸಲಾಗುತ್ತದೆ’ ಎಂದು ಬರೆದಿರುವುದರ ಜೊತೆಗೆ ಕಹಿ ಸತ್ಯ ಎಂದು ಮೆನ್ಶನ್ ಮಾಡಿದ್ದಾರೆ.
ವಿಜಯಲಕ್ಷ್ಮೀ ಫೋಟೋ ಸಾಕಷ್ಟು ವೈರಲ್ ಆಗಿದ್ದು. ಕೆಲವರು ಪೋಸ್ಟ್ ಗೆ ಸಮ್ಮತಿ ಸೂಚಿಸಿದ್ದಾರೆ. ಇನ್ನಂದಷ್ಟು ಮಂದಿ ಬೇರೆನೋ ವಿಚಾರವನ್ನು ಇಲ್ಲಿ ಎಳೆದು ತಂದಿದ್ದಾರೆ. ಜೊತೆಗೆ ಕೆಲವರು ಫೋಟೋ ತೆಗೆಯಲು ಒತ್ತಾಯಿಸಿದ್ದಾರೆ. ನೀವೂ ಹೇಳಿರುವ ವಿಚಾರ ಸರಿ ಇರಬಹುದು ಆದ್ರೆ ದೇವತೆ ಲಕ್ಷ್ಮೀ ಫೋಟೋ ಬಳಕೆ ತಪ್ಪು. ಹೀಗಾಗಿ ಫೋಟೋ ತೆಗೆಯಿರಿ ಎಂದು ಒತ್ತಾಯಿದ್ದಾರೆ.
Sad truth😐 pic.twitter.com/aCfyl3TIhm
— Vijayalakshmi (@vijayaananth2) October 17, 2020
ದರ್ಶನ್ ಪತ್ನಿ ಇತ್ತೀಚೆಗೆ ಉದ್ಯಮವೊಂದನ್ನು ಶುರು ಮಾಡಿದ್ದು ರೈತರಿಗೆ ಸಹಾಯ ಮಾಡುತ್ತಿದ್ದಾರೆ. ಅದಕ್ಕಾಗಿ ಪ್ರಶಸ್ತಿಯೊಂದನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಚಟುವಟಿಕೆಯಿಂದ ಇರುತ್ತಾರೆ.