ಸುದೀಪ್ ಅಭಿಮಾನಿಗಳಷ್ಟೇ ಅಲ್ಲ ಸಿನಿ ಪ್ರೇಕ್ಷರೆಲ್ಲ ಕೋಟಿಗೊಬ್ಬ 3 ಸಿನಿಮಾಗಾಗಿ ಕಾಯುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಥಿಯೇಟರ್ ಓಪನ್ ಆಗಿದ್ರು ಜನ ಮಾತ್ರ ಬರುತ್ತಿಲ್ಲ. ಹೀಗಾಗಿ ಹಳೇ ಸಿನಿಮಾಗಳು, ಬೇಡಿಕೆ ಸಿನಿಮಾಗಳನ್ನೇ ಮತ್ತೆ ರಿಲೀಸ್ ಮಾಡಲಾಗಿದೆ. ಆದ್ರೆ ಈ ಮಧ್ಯೆ ಸುದೀಪ್ ಅಭಿಮಾನಿಗಳಿಗಾಗಿ ಚಿತ್ರತಂಡ ಖುಷಿ ನ್ಯೂಸ್ ನೀಡಿದೆ.
ಇದೀಗ ಇದೇ ತಿಂಗಳ 15ನೇ ತಾರೀಖು, ದೀಪಾವಳಿ ಹಬ್ಬದ ದಿನದಂದು, ‘ಕೋಟಿಗೊಬ್ಬ-3’ ಚಿತ್ರತಂಡ ಲಿರಿಕಲ್ ವಿಡಿಯೋವೊಂದನ್ನ ರಿಲೀಸ್ ಮಾಡ್ತಿದೆ. ವಿಶೇಷ ಅಂದ್ರೆ, ಈ ಹಾಡಿನಲ್ಲಿ ಕಿಚ್ಚನ ಜೊತೆ ನಟಿ ಆಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ. ಪಟಾಕಿ ಪೋರಿಯೋ ಅನ್ನೋ ಹಾಡಿನಲ್ಲಿ, ಆಶಿಕಾ ರಂಗನಾಥ್ ಇದೇ ಮೊದಲ ಬಾರಿಗೆ ಸ್ಪೆಷಲ್ ಅಪಿಯರೆನ್ಸ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಕಿಚ್ಚನ ನೆಚ್ಚಿನ ಗೆಳೆಯ ನಟ ಅರುಣ್ ಸಾಗರ್ ಈ ಹಾಡಿಗಾಗಿ ದುಬಾರಿ ಸೆಟ್ ಡಿಸೈನ್ ಮಾಡಿದ್ದಾರೆ.
ಕಿಚ್ಚನಿಗೆ ಜೊಡಿಯಾಗಿ ಮಲಯಾಳಂ ನಟಿ ಮೆಡೋನಾ ಸೆಬಾಸ್ಟಿನ್ ನಟಿಸಿದ್ದು, ಉಳಿದಂತೆ ಬಾಲಿವುಡ್ ನಟ ಅಫ್ತಬ್ ಶಿವದಸನಿ, ಶೃದ್ಧಾ ದಾಸ್ ಹಾಗೂ ಸುಧಾಂಶು ಪಾಂಡೆ ಈ ಸಿನಿಮಾದಲ್ಲಿದ್ದಾರೆ. ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 2021ರ ಜನವರಿಯಲ್ಲಿ ‘ಕೋಟಿಗೊಬ್ಬ-3’ ಸಿನಿಮಾ ರಿಲೀಸ್ ಮಾಡೋದಕ್ಕೆ ಚಿತ್ರತಂಡ ತಯಾರಿ ನಡೆಸುತ್ತಿದೆ.