ಹೈದರಾಬಾದ್ : ಬಿಲ್ಡರ್ ಒಬ್ಬರಿಗೆ 1 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಕಾರ್ತಿಕಾ ಮತ್ತು ಆಕೆಯ ಸಹಚರರ ವಿರುದ್ಧ ಹೈದರಾಬಾದಿನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಮತ್ತು ಆಕ್ಷೇಪಣಾ ರಹಿತ ಪ್ರಮಾಣ ಪತ್ರ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಟಚ್ಸ್ಟೋನ್ ಪ್ರಾಪರ್ಟಿ ಡೆವಲಪರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ದೊರೆಸ್ವಾಮಿ ಎಂಬುವರು ಈ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೊರೆಸ್ವಾಮಿ ಅವರು ಕಾರ್ತಿಕಾ ಹಾಗೂ ಆಕೆಯ ಸಹಚರರ ಒಡೆತನದ ಕಾರ್ತಿಕಾ ಬಿಆರ್ಎಂ ಸಂಸ್ಥೆಗೆ ಒಂದು ಕೋಟಿ ರೂಪಾಯಿ ಡೆಪಾಸಿಟ್ ಮಾಡಿದ್ದರಂತೆ. ಮೇದಕ್ ಜಿಲ್ಲೆಯ ಅಮೀನ್ಪುರದಲ್ಲಿರುವ 52 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.
ದೊರೆಸ್ವಾಮಿ 52 ಎಕರೆ ಜಾಗದಲ್ಲಿ ಹೌಸಿಂಗ್ ಪ್ರಾಜೆಕ್ಟ್ ಮಾಡಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಪ್ರಾಬ್ಲಮ್ಸ್ ಬಾರದ ರೀತಿ ತೆಲಂಗಾಣ ಸರ್ಕಾರದಿಂದ ಆಕ್ಷೇಪಣಾ ರಹಿತ ಪ್ರಮಾಣಪತ್ರ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆಂದು ದೂರಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಕಾರ್ತೀಕಾ ತೆಲಂಗಾಣದ ಮಾಜಿ ಸಚಿವ ಮತ್ತು ಪ್ರಸ್ತುತ ಡೆಪ್ಯುಟಿ ಸ್ಪೀಕರ್ ಆಗಿರುವ ಟಿ. ಪದ್ಮ ರಾವ್ ಅವರ ಮೊಮ್ಮಗಳು. ಜೊತೆಗೆ ಪ್ರಖ್ಯಾತ ತೆಲುಗು ಟಿವಿ ನಿರೂಪಕಿ ಕೂಡ ಹೌದು. ಬಿಗ್ಬಾಸ್ ಮೂಲಕ ತೆಲಂಗಾಣದಲ್ಲಿ ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ.