ಮುಂಬೈ: ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ಸುದ್ದಿ ಇದೆ, ಜಿಯೋ ಈ ಬಾರಿಯ ಐಪಿಎಲ್ ಅನ್ನು ಹೆಚ್ಚು ಆನಂದದಾಯಕವಾಗಿಸಲು ಹೊಸ ಯೋಜನೆಗಳನ್ನು ಲಾಂಚ್ ಮಾಡಿದೆ. ಜಿಯೋ ಕ್ರಿಕೆಟ್ ಯೋಜನೆಗಳಲ್ಲಿ ಡಿಸ್ನಿ + ಹಾಟ್ಸ್ಟಾರ್ ವಿಐಪಿ ಒಂದು ವರ್ಷದ ಚಂದದಾರಿಕೆಯೊಂದಿಗೆ ಡೇಟಾ, ವಾಯ್ಸ್ ಮತ್ತು ಎಸ್ಎಂಎಸ್ ಲಾಭಗಳನ್ನು ಪಡೆಯಬಹುದಾಗಿದೆ.
ಲೈವ್ ಡಿಸ್ನಿ + ಹಾಟ್ಸ್ಟಾರ್ ವಿಐಪಿ ಸಬ್ಸ್ಕ್ರಿಪ್ಷನ್ನೊಂದಿಗೆ ಲೈವ್ ಐಪಿಎಲ್ ಮ್ಯಾಚ್ಗಳನ್ನು ವೀಕ್ಷಿಸಲು ಹೊಸ ಹೊಸ ಟ್ಯಾರಿಫ್ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ 1 ತಿಂಗಳು, 2 ತಿಂಗಳುಗಳು, 3 ತಿಂಗಳುಗಳು ಮತ್ತು 1 ವರ್ಷದ ಮಾನ್ಯತೆಯನ್ನು ಒಳಗೊಂಡಿರುವ ಪ್ರಿಪೇಯ್ಡ್ ಯೋಜನೆಗಳು ಲಭ್ಯವಿದ್ದು, ಇದರೊಂದಿಗೆ ವಿಶೇಷ ಡೇಟಾ ಲಾಭಗಳು ದೊರೆಯಲಿದೆ.
ಕ್ರಿಕೆಟ್ ಸೀಸನ್ಗಾಗಿ ಜಿಯೋ ಅನೇಕ ಯೋಜನೆಗಳನ್ನು ಪ್ರಕಟಿಸಿದೆ. JIO CRICKET PLAN ಡೇಟಾ, ವಾಯ್ಸ್ ಮತ್ತು ಎಸ್ಎಂಎಸ್ ಲಾಭಗಳೊಂದಿಗೆ 399 ರೂ. ಮೌಲ್ಯದ 1 ವರ್ಷದ ಡಿಸ್ನಿ + ಹಾಟ್ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡಲಿದೆ.
ಯಾವ್ಯಾವ ಪ್ಲ್ಯಾನ್?
ರೂ.401 ಪ್ಲಾನ್: ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 3GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ರೂ.598 ಪ್ಲಾನ್: ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ರೂ. 777 ಪ್ಲ್ಯಾನ್: ರೂ.777ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಜಿಯೋ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಈ ಪ್ಲಾನ್ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ ಪ್ರತಿ ದಿನ 1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ರೂ.2599 ಪ್ಲಾನ್: ರೂ.2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದವರೆಗೆ ನೀಡಲಿದೆ ಮತ್ತು ಒಂದು ವರ್ಷದ ಅವಧಿಗೆ ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ.
ರೂ. 499 ಡೇಟಾ ಆಡ್ ಆನ್ ಪ್ಲಾನ್: ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆ ಒಂದು ವರ್ಷದವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
News In Brief: Jio IPL Plan- Jio announces affordable tariff plans with free Disney + Hotstar VIP subscription