ಜಮ್ಮು-ಕಾಶ್ಮೀರ: ಗಡಿಯಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದ್ದು ಹಿಜ್ಬುಲ್ ಮುಜಾಹುದ್ದೀನ್ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ಡಾ. ಸೈಫುಲ್ಲಾ ನನ್ನು ಹತ್ಯೆ ಮಾಡಲಾಗಿದೆ.
ಉಗ್ರರು ದಕ್ಷಿಣ ಕಾಶ್ಮೀರದ ರಂಗ್ ರೇತ್ ಪ್ರದೇಶಕ್ಕೆ ನುಸುಳಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರಿಗೆ ಮಾಹಿತಿ ದೊರೆತಿತ್ತು.ಖಚಿತ ಮಾಹಿತಿ ಮೇರೆಗೆ ಜಂಟಿಯಾಗಿ ದಾಳಿ ನಡೆಸಿದ ಪೊಲೀಸ್ ಮತ್ತು ಸಿಆರ್ ಪಿಎಫ್ ಸೇನೆ ಉಗ್ರನನ್ನ ಸೆದೆ ಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಇನ್ನೊರ್ವ ಉಗ್ರನನ್ನ ಜೀವಂತವಾಗಿ ಸೆರೆಹಿಡಿದಿದ್ದಾರೆ ಎಂದು ವರದಿಯಾಗಿದೆ.
ಎನ್ ಕೌಂಟರ್ ನಲ್ಲಿ ಹತನಾದ ಉಗ್ರ ಡಾ. ಸೈಫುಲ್ಲಾ ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ಆಗಿದ್ದ. ಇದಕ್ಕಿಂತ ಮೊದಲು ಕಮಾಂಡರ್ ಆಗಿದ್ದ ರಿಯಾಝ್ ನನ್ನ ಪುಲ್ವಾಮ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಆದಾದ ನಂತರ ಡಾ.ಸೈಫುಲ್ಲಾ ಸಂಘಟನೆಯ ಮುಖ್ಯ ಕಮಾಂಡರ್ ಆಗಿ ಗುರುತಿಸಿಕೊಂಡಿದ್ದ.
ಈ ಕಾರ್ಯಾಚರಣೆಯನ್ನ ಭದ್ರತಾ ಪಡೆಗಳಿಗೆ ದಕ್ಕಿದ ಬಹುದೊಡ್ಡ ಯಶಸ್ಸು ಎಂದು ಕಾಶ್ಮೀರ ವಲಯ ಪೊಲೀಸ್ ಮಹಾನಿರೀಕ್ಷಕ ವಿಜಯಕುಮಾರ್ ಹೇಳಿದ್ದಾರೆ. ಇನ್ನು ಮತ್ತೋರ್ವ ಉಗ್ರನನ್ನ ಜೀವಂತವಾಗಿ ಸೆರೆಹಿಡಿಯಾಲಾಗಿದೆ. ಉಗ್ರ ಡಾ. ಸೈಫುಲ್ಲಾ ಈ ವರ್ಷ ದಲ್ಲಿ ಕೊಲ್ಲಲ್ಪಟ್ಟ ಎರಡನೇ ಹಿಜ್ಬುಲ್ ಮುಖ್ಯಸ್ಥ.