Tuesday, August 3, 2021
No menu items!
Home Karnataka ಹಲಸಿನ ಹಣ್ಣಿನ ಸಂಶೋಧನೆಗೆ ಪುತ್ತೂರಿನ ಹುಡುಗರಿಗೆ ಸಿಕ್ತು ಅಂತರಾಷ್ಟ್ರೀಯ ಮನ್ನಣೆ

ಹಲಸಿನ ಹಣ್ಣಿನ ಸಂಶೋಧನೆಗೆ ಪುತ್ತೂರಿನ ಹುಡುಗರಿಗೆ ಸಿಕ್ತು ಅಂತರಾಷ್ಟ್ರೀಯ ಮನ್ನಣೆ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸೇರಿದಂತೆ ಆ ಭಾಗದಲ್ಲಿ ಹಲಸಿನಹಣ್ಣು ಯಥೇಚ್ಚವಾಗಿ ಸಿಗುತ್ತದೆ. ಆ ಸೀಸನ್ ನಲ್ಲಿ ಅಲ್ಲಿನವರು ಹಲಸಿನ ಹಣ್ಣಿನಲ್ಲೇ ವೆರೈಟಿ ವೆರೈಟಿ ತಿನಿಸುಗಳನ್ನ ಮಾಡ್ತಾರೆ. ಅದನ್ನೇ ಬಂಡವಾಳ ಮಾಡಿಕೊಂಡ ಬುದ್ಧಿವಂತ ಹುಡುಗರ ಅದರಿಂದ ಹೊಸ ಸಂಶೋದನೆಯನ್ನೇ ಮಾಡಿದ್ದಾರೆ.

ರಾಮಕೃಷ್ಣ ವಿದ್ಯಾಸಂಸ್ಥೆಯ ಐವರು ವಿದ್ಯಾರ್ಥಿಗಳ ತಂಡ ಹೊಸ ಸಾಧನೆಯೊಂದನ್ನ ಮಾಡಿದ್ದಾರೆ. ಕೊಳೆತು ಹೋಗುತ್ತಿದ್ದ ಹಲಸಿನ ಹಣ್ಣಲ್ಲಿ ಮೋಟಾರು ವಾಹನವನ್ನೇ ಓಡಿಸಿದ್ದಾರೆ. ಹೌದು, ಈ ವಿದಾರ್ಥಿಗಳು ಮಾಡಿರುವ ಸಂಶೋಧನೆಯೊಂದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ತಾಜಾ ಹಾಗೂ ಕೊಳೆತ ಹಲಸಿನ ಹಣ್ಣಿನ ರಸವನ್ನು ಹೀರಿ ಅದನ್ನು ಸಂಸ್ಕರಿಸಿ ಅದರಿಂದ ಎಥೆನಾಲ್ ಪಡೆಯಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳು ತನ್ನ ಸಂಶೋಧನೆಯನ್ನು ಜಿಲ್ಲಾ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲೂ ಪ್ರದರ್ಶಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಈ ವಿದ್ಯಾರ್ಥಿಗಳ ಈ ಸಂಶೋಧನಾ ವರದಿಯನ್ನು ಖ್ಯಾತ ಇಂಧನ ತಯಾರಿಕಾ ಕಂಪನಿಯಾದ ಶೆಲ್ ಉನ್ನತ ಸಂಶೋಧನೆಗಾಗಿ ಆಯ್ಕೆ ಮಾಡಿಕೊಂಡಿದೆ.

29 ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸಂಶೋಧನಾ ಪ್ರದರ್ಶನದಲ್ಲಿ ಆಯ್ಕೆಯಾದ 6 ಸಂಶೋಧನಾ ವರದಿಯಲ್ಲಿ ಪುತ್ತೂರಿನ ಈ ವಿದ್ಯಾರ್ಥಿಗಳ ಹಲಸಿನ ಬಯೋ ಎಥೆನಾಲ್ ವರದಿಯೂ ಸೇರಿಕೊಂಡಿದೆ. ಶಾಲೆಯಲ್ಲಿ ಈ ಬಗ್ಗೆ ಸಂಶೋಧನೆಯನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳ ತಂಡಕ್ಕೆ ಅಧ್ಯಾಪಕರಿಂದ ಹಾಗೂ ಶಾಲೆಯ ಆಡಳಿತ ಮಂಡಳಿಯಿಂದಲೂ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments