Wednesday, October 27, 2021
No menu items!
Home Latest ಜೋ ಬೈಡನ್ ಸಂಪುಟದಲ್ಲಿ ಕನ್ನಡಿಗ, ಮಂಡ್ಯದ ವಿವೇಕ್ ಮೂರ್ತಿ ಮತ್ತು ಅರುಣ್ ಮಜುಂದಾರ್ ಗೆ ಸ್ಥಾನ..?

ಜೋ ಬೈಡನ್ ಸಂಪುಟದಲ್ಲಿ ಕನ್ನಡಿಗ, ಮಂಡ್ಯದ ವಿವೇಕ್ ಮೂರ್ತಿ ಮತ್ತು ಅರುಣ್ ಮಜುಂದಾರ್ ಗೆ ಸ್ಥಾನ..?

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಾಗಿ ಜೋ ಬೈಡನ್ ಇದೀಗಾಗಲೇ ಆಯ್ಕೆಯಾಗಿದ್ದಾರೆ. ಇದೀಗ ಅವರು ಸಂಪುಟ ರಚಿಸಲು ಸಿದ್ದತೆ ನಡೆಸಿದ್ದು ಇದರಲ್ಲಿ ಭಾರತೀಯ ಮೂಲದ ವಿವೇಕ್ ಮೂರ್ತೀ ಮತ್ತು ಅರುಣ್ ಮಜುಂದಾರ್ ಅವರು ಬೈಡನ್- ಹ್ಯಾರಿಸ್ ಸರ್ಕಾರದಲ್ಲಿ ಸಂಭಾವ್ಯ ಸಂಪುಟ ಆಯ್ಕೆಯಲ್ಲಿ ಸೇರಲಿದ್ದಾರೆ ಎಂದು ವರದಿಯಾಗಿದೆ.

ಮಾಜಿ ಸರ್ಜನ್ ವಿವೇಕ್ ಮೂರ್ತಿ ಪ್ರಸ್ತುತ ಬೈಡನ್ ಸರ್ಕಾರದ ಕೋವಿಡ್-19 ಸಲಹಾ ಮಂಡಳಿಯಲ್ಲಿದ್ದು, ನಿಯೋಜಿತ ಅಧ್ಯಕ್ಷ ಬೈಡನ್ ಅವರ ಉನ್ನತ ಭಾರತೀಯ-ಅಮೆರಿಕನ್ ಸಲಹೆಗಾರರಾಗಿದ್ದಾರೆ. ಮೂರ್ತಿ ಅವರು ಆರೋಗ್ಯ ಹಾಗೂ ಮಾನವ ಸೇವೆಗಳ ಕಾರ್ಯದರ್ಶಿ ಹಾಗೂ ಸ್ಟ್ಯಾನ್ ಫೋರ್ಡ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಅರುಣ್ ಮಜುಂದಾರ್ ಅವರು ಇಂಧನ ಕಾರ್ಯದರ್ಶಿ ಹುದ್ದೆಗೆ ಸಂಭಾವ್ಯ ಆಯ್ಕೆಯಾಗಿದ್ದಾರೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ.

ಅಮೆರಿಕದ ಖ್ಯಾತ ತಂತ್ರ ಶಿಲ್ಪಿಗಳಲ್ಲಿ ಒಬ್ಬರಾದ ಡಾ.ಅರುಣ್ ಮಜುಂದಾರ್ ಪ್ರಸ್ತುತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಅಮೆರಿಕದ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಭಾರತೀಯ ಮೂಲದವರಿಗೆ ಜೋ ಬೈಡೆನ್ ಆದ್ಯತೆ ನೀಡಲಿದ್ದಾರೆ ಎಂದು ಕೂಡಾ ವರದಿಯಾಗಿದೆ.

ಇನ್ನು ಅಮೆರಿಕದ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ನೂತನ ಸಂಪುಟದಲ್ಲಿ 43 ವರ್ಷದ ವಿವೇಕ್ ಅವರಿಗೆ ಆರೋಗ್ಯ ಮತ್ತು ಮಾನವ ಸೇವೆ ಕಾರ್ಯದರ್ಶಿ(ಸಚಿವ) ಸ್ಥಾನ ಲಭಿಸುವುದು ಬಹುತೇಕ ಖಚಿತ ಎಂದು ವಾಷಿಂಗ್ಟನ್ ಫೋಸ್ಟ್, ನ್ಯೂಯಾರ್ಕ್ ಟೈಂ ಸೇರಿದಂತೆ ಕೆಲ ಪತ್ರಿಕೆಗಳು ವರದಿ ಮಾಡಿವೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments