Tuesday, October 26, 2021
No menu items!
Home Special ತೂಕ ಜಾಸ್ತಿ ಬೇಕೆನ್ನುವವರು, ಕಡಿಮೆ ಮಾಡ ಬಯಸುವವರು ಇಬ್ಬರು ಇದನ್ನ ಸೇವಿಸಿ

ತೂಕ ಜಾಸ್ತಿ ಬೇಕೆನ್ನುವವರು, ಕಡಿಮೆ ಮಾಡ ಬಯಸುವವರು ಇಬ್ಬರು ಇದನ್ನ ಸೇವಿಸಿ

ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಿರಿ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು. ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇಡಬಾರದು. ಇದನ್ನು ರಕ್ತವರ್ಧಕ ಟಾನಿಕ್ ಮತ್ತು ಸ್ವಾಭಾವಿಕ ಬಲವರ್ಧಕ ಟಾನಿಕ್ ಎನ್ನುವರು.

ಜೇನುತುಪ್ಪದ ಆರೋಗ್ಯಕರ ಗುಣಗಳು

* ಜೇನುತುಪ್ಪವನ್ನು ಸ್ವಲ್ಪ ಕರಿ ಮೆಣಸಿನ ಪುಡಿಯೊಂದಿಗೆ ಮಿಕ್ಸ್ ಮಾಡಿ ತಿಂದರೆ ಕೆಮ್ಮು ಕಡಿಮೆಯಾಗುವುದು.

* ತೂಕ ಹೆಚ್ಚಬೇಕೆಂದು ಬಯಸುವವರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ಮೈ ತೂಕ ಹೆಚ್ಚುವುದು.

* ತೂಕ ಕಮ್ಮಿಯಾಗಬೇಕೆಂದು ಬಯಸುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ, ಜೇನುತುಪ್ಪ ಹಾಕಿ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು.

* ವಾಂತಿ ಬಂದಂತೆ ಅನಿಸಿದಾಗ ಸ್ವಲ್ಪ ಶುಂಠಿ ಪುಡಿಗೆ ಜೇನು ತುಪ್ಪ ಮಿಶ್ರಣ ಮಾಡಿ ತಿಂದರೆ ಬಾಯಲ್ಲಿ ನೀರು ಬರುವುದು, ಹೊಟ್ಟೆ ಸಂಕಟ ಕಡಿಮೆಯಾಗುವುದು.

* ರಕ್ತದೊತ್ತಡ ಸಮಸ್ಯೆಯಿದ್ದರೆ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದು ಒಳ್ಳೆಯದು.

* ಚಿಕ್ಕಪುಟ್ಟ ಗಾಯಗಳಾದರೆ ಜೇನುತುಪ್ಪ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

* ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಜೇನು ತುಪ್ಪವನ್ನು ಬೆರೆಸಿ ಕೊಟ್ಟರೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ.

* ಸುಟ್ಟಗಾಯಕ್ಕೆ ತಕ್ಷಣ ಜೇನು ತುಪ್ಪ ಹೆಚ್ಚುವುದರಿಂದ ಉರಿ ಶಮನವಾಗುತ್ತದೆ ಮತ್ತು ಗಾಯ ಶ್ರೀಘ್ರವೇ ಮಾಗಲು ಸಹಾಯ ಮಾಡುತ್ತದೆ.

* ಧಡೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನು ತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ತೂಕವು ಕಡಿಮೆಯಾಗಿ ನರಗಳಲ್ಲಿ ಹೊಸ ಉತ್ಸಾಹ ತುಂಬಿಕೊಳ್ಳುವುದು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments