ಬೆಂಗಳೂರು: ಹಿಂಧೂ ಧಾರ್ಮಿಕ ಸಂಘಟನೆಗಳ ಸತತ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿ ತರಲು ಮುಂದಾಗಿದೆ. ಈ ಸಂಬಂಧ ಸ್ಪಷ್ಠ ನಿರ್ಧಾರವನ್ನು ತೆಗೆದುಕೊಳ್ಳುವಂತೆ ರಾಷ್ಟ್ರೀಯ ಬಿಜೆಪಿ ನಾಯಕರು ರಾಜ್ಯಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಗೋ ಸಂರಕ್ಷಣಾ ಕಾಯ್ದೆ ಜಾರಿಯಾಗಲಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಜೊತೆ ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಚರ್ಚೆ ಮಾಡಿರುವುದು ತಿಳಿದುಬಂದಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮಸೂದೆ ಮಂಡಿಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈ ವಿಚಾರವನ್ನು ಸಿ.ಟಿ. ರವಿ ಇಂದು ಮಾಧ್ಯಮಗಳ ಮುಂದೆಯೂ ಸ್ಪಷ್ಟಪಡಿಸಿದ್ದಾರೆ. ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧಿಸುವ ಕಾಯ್ದೆಗಳ ಜಾರಿಗೆ ಬಿಜೆಪಿಯ ಕೋರ್ ಕಮಿಟಿ ಸಹಮತ ವ್ಯಕ್ತಪಡಿಸಿದೆ. ಗೋ ಹತ್ಯೆ ನಿಷೇಧ ಕಾನೂನುನನ್ನು ಮತ್ತೆ ತರಬೇಕೆಂಬ ಕೂಗು ಜೋರಾಗಿದೆ. ಕಠಿಣ ಕಾನೂನು ತರುವ ಚಿಂತನೆ ಇದೆ. ನಾನು ಪಶು ಸಂಗೋಪನಾ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಎರಡು ಕಾಯ್ದೆಗಳನ್ನ ತರಬೇಕು ಎಂದು ಸಿ.ಟಿ. ರವಿ ಇಂದು ಹೇಳಿದ್ದಾರೆ.
ಈಗಾಗಲೇ ಸಂಪುಟದಲ್ಲಿ ಗೋ ಸಂರಕ್ಷಣಾ ಬಿಲ್ ಗೆ ಒಪ್ಪಿಗೆ ನೀಡಿರುವ ಸರ್ಕಾರ ಇದನ್ನು ಇದೇ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲಿದೆ. ಈ ವಿಚಾರದ ಬಗ್ಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ ಜೊತೆ ಮಾತುಕತೆ ಮಾಡಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ. ಅಧಿವೇಶದಲ್ಲಿ ಇದನ್ನು ಪಾಸ್ ಮಾಡಿಸಿ ಶಾಸವನ್ನಾಗಿಕೊಳ್ಳುವಂತೆ ಹೇಳಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ನೂತನ ಗೋರಕ್ಷಣಾ ಕಾನೂನು ಜಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ತರುವುದಾಗಿ ಘೋಷಿಸಿತ್ತು. ಆದರೆ ಅಧಿಕಾರ ಬಂದ ಬಳಿಕ ಆ ವಿಚಾರದಲ್ಲಿ ಮೀನಾಮೇಷ ಏಣಿಸುತ್ತಾ ಕೂತಿತ್ತು. ಈ ಹಿನ್ನೆಲೆಯಲ್ಲಿ ಹಿಂಧೂ ಪರ ಸಂಘಟನೆಗಳು ಸರ್ಕಾರ ಮತ್ತು ಸಂಸದರ ಮೇಲೆ ಬಿಲ್ ಜಾರಿಗೆ ಒತ್ತಡ ಹೇರಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ದ ಹೋರಾಟಕ್ಕಿಳಿದಿದ್ದರು.
ಈಗ ಈ ಬೆಳೆವಣಿಗೆಯಿಂದ ಎಚ್ಚೆತ್ತಿರುವ ಬಿಜೆಪಿ ರಾಷ್ಟ್ರೀಯ ವರಿಷ್ಠರು ಕೊಟ್ಟಮಾತನ್ನುಳಿಸಿಕೊಳ್ಳಲು ಶೀಘ್ರವೇ ರಾಜ್ಯದಲ್ಲೂ ಕರ್ನಾಟಕ ಜಾನುವಾರು ಸಂರಕ್ಷಣೆ ಮತ್ತು ವಧೆ ತಡೆ (The Karnataka Prevention of Slaughter & Preservation of Cattle Bil”) ಮಸೂದೆಯನ್ನು ಜಾರಿ ತರಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.