Friday, January 21, 2022
No menu items!
Home Karnataka ನನ್ನ ಕರ್ಮಕ್ಕೆ ನನಗೆ ಶಿಕ್ಷೆಯಾಗಿದೆ : ಗಂಗಾ ಕುಲಕರ್ಣಿ ಡೆತ್ ನೋಟ್ ಪತ್ತೆ..!

ನನ್ನ ಕರ್ಮಕ್ಕೆ ನನಗೆ ಶಿಕ್ಷೆಯಾಗಿದೆ : ಗಂಗಾ ಕುಲಕರ್ಣಿ ಡೆತ್ ನೋಟ್ ಪತ್ತೆ..!

ಕೊಪ್ಪಳ : ಸಾಹಿತಿ ಕೆ ಕಲ್ಯಾಣ್ ಅವರ ವೈವಾಹಿಕ ಜೀವನದಲ್ಲಿ ಕಲಹ ತಂದಿದ್ದ ಗಂಗಾ ಕುಲಕರ್ಣಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಗಂಗಾ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಕೆಲವು ಮಾಹಿತಿ ಲಭ್ಯವಾಗಿದೆ.

ಗಂಗಾ ಕುಲಕರ್ಣಿ ಬರೆದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತಾನು ಮುಗ್ದೆ ಎಂಬಂತೆ ಹೇಳಿಕೊಂಡಿದ್ದಾಳೆ. ಜೊತೆಗೆ ನ್ಯಾಯಾಧೀಶರು ಮತ್ತು ವಕೀಲರಲ್ಲಿ ತನ್ನ ಮಕ್ಕಳನ್ನು ನೋಡಿಕೊಳ್ಳಲು ಮನವಿ ಮಾಡಿದ್ದಾರೆ. ಮರಾಠಿಯಲ್ಲಿ ಎರಡು ಪುಟಗಳ ಡೆತ್ನೋಟ್ ಬರೆದಿರುವ ಗಂಗಾ, ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ. ನಾನು ಅಮಾಯಕಿ. ಯಾರ್ಯಾರೋ ಸೇರಿ ನನ್ನ ಮೇಲೆ ಪಿತೂರಿ ಮಾಡಿದ್ದಾರೆ. ನಾನು ಯಾರಿಂದಲೂ ಹಣ ಕದ್ದಿಲ್ಲ, ಆದರೂ ವಿನಾಕಾರಣ ಆರೋಪ ಹೊರಿಸಲಾಗಿದೆ ಎಂದಿದ್ದಾಳೆ.

ಈಗ ನನ್ನ ಬಳಿ ಪ್ರಕರಣ ನಡೆಸಲು ಕೂಡ ದುಡ್ಡಿಲ್ಲ, ವಕೀಲರಿಗೆ ಶುಲ್ಕ ಕೊಡಲು ದುಡ್ಡಿಲ್ಲ. ನನ್ನ ಮೇಲೆ ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆ ನ್ಯಾಯ ಸಿಗುವ ಭರವಸೆಯೂ ಇಲ್ಲ. ಆದ್ದರಿಂದ ನಾನು ಸಾಯುವುದೇ ಮೇಲು ಎಂದಿದ್ದಾಳೆ.

ಇದರ ಬಗ್ಗೆ ತಿಳಿಸಿರುವ ಗಂಗಾ, ನನ್ನ ಹೆಸರು ಜ್ಯೋತಿ ಕುಲಕರ್ಣಿಯಿಂದ ಗಂಗಾ ಕುಲಕರ್ಣಿ ಎಂದು ಬದಲಾವಣೆ ಮಾಡಿಕೊಂಡಿದ್ದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಈ ಹಿಂದೆ ಜೈಲಿನಿಂದ ಹೊರಗೆ ಬಂದಾಗ ನನ್ನ ಇಬ್ಬರು ಪುಟ್ಟ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹೆಸರು ಬದಲಾವಣೆ ಮಾಡಿಕೊಂಡಿದ್ದೆ ಅಷ್ಟೇ, ಇದರಲ್ಲಿ ಯಾವ ಮೋಸವೂ ಇಲ್ಲ ಎಂದಿದ್ದಾಳೆ.

ಕೆ.ಕಲ್ಯಾಣ್ ಕುಟುಂಬಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಆರೋಪ ಬಂದಾಗಿನಿಂದ ಸಮಾಜಕ್ಕೆ ಮುಖ ತೋರಿಸದಂತಾಗಿದೆ ಎಂದಿರುವ ಗಂಗಾ, ನನ್ನ ಇಬ್ಬರು ಮಕ್ಕಳಿಗಾದರೂ ವಕೀಲರು ಹಾಗೂ ನ್ಯಾಯಾಧೀಶರು ನ್ಯಾಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.

ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸಂತೋಷ್ ಕುಲಕರ್ಣಿ ಎಂಬವರಿಂದ ಮೂರು ಲಕ್ಷ ದೋಚಿದ್ದ ಆರೋಪದ ಮೇಲೆ 2016 ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಕೇಸ್ ದಾಖಲಾಗಿತ್ತು. ಜೈಲುವಾಸ ಕೂಡ ಅನುಭವಿಸಿದ್ದಳು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments