ಕೊಪ್ಪಳ : ಸಾಹಿತಿ ಕೆ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಇಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಕಲ್ಯಾಣ್ ಪ್ರಕರಣದ ಸಂಬಂಧ ಗಂಗಾ ಕುಲಕರ್ಣಿ ಇಂದು ಕೊಪ್ಪಳ ಜಿಲ್ಲೆಯ ಕುಷ್ಠಗಿಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆದರೆ ಈ ವೇಳೆ ಗಂಗಾ ನ್ಯಾಯಾಲಯದ ಆವರಣದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗಂಗಾ ಕುಲಕರ್ಣಿ ಸಾವನ್ನಪ್ಪಿದ್ದಾರೆ. ಕೋರ್ಟ್ ಗೆ ಆಗಮಿಸುವ ಮೊದಲೇ ಆಕೆ ವಿಷ ಸೇವನೆ ಮಾಡಿದ್ದರು ಎನ್ನಲಾಗಿದೆ.
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸಂತೋಷ್ ಕುಲಕರ್ಣಿ ಎಂಬುವವರಿಂದ ಮೂರು ಲಕ್ಷ ದೋಚಿದ್ದ. ಈ ಸಂಬಂಧ 2016 ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಕೇಸ್ ದಾಖಲಾಗಿತ್ತು.
ಈ ಹಿಂದೆ ಕಲ್ಯಾಣ್ ಪತ್ನಿ ಅಶ್ವಿನಿಯನ್ನು ಅತ್ತೆ, ಮಾವನನ್ನು ಪುಸಲಾಯಿಸಿ ಅಪಹರಣ ಮಾಡಿದ್ದಾರೆ. ಪತ್ನಿ ಅಶ್ವಿನಿ ಅಕೌಂಟ್ನಿಂದ 19 ಲಕ್ಷ ರೂಪಾಯಿ ತನ್ನ ಅಕೌಂಟ್ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಎಂಬುವರ ವಿರುದ್ಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ್ ಪತ್ನಿ ಅಶ್ವಿನಿ ಕರೆತಂದು ಪೊಲೀಸರು ಮಾಹಿತಿ ಪಡೆದಿದ್ದರು. ಸದ್ಯ ಪತಿ ವಿರುದ್ಧ ನೀಡಿರುವ ವಿಚ್ಛೇದನ ಹಿಂಪಡೆಯುವುದಾಗಿ ಅಶ್ವಿನಿ ತಿಳಿಸಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.