Monday, January 24, 2022
No menu items!
Home Karnataka ಇಂದಿನಿಂದ ಬಾಗಿಲು ತೆರೆಯಲಿರುವ ಹಾಸನಾಂಬೆ ದೇವಸ್ಥಾನ; ಭಕ್ತರಿಗಿಲ್ಲ ದೇವಿ ನೇರ ದರ್ಶನ

ಇಂದಿನಿಂದ ಬಾಗಿಲು ತೆರೆಯಲಿರುವ ಹಾಸನಾಂಬೆ ದೇವಸ್ಥಾನ; ಭಕ್ತರಿಗಿಲ್ಲ ದೇವಿ ನೇರ ದರ್ಶನ

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ದರ್ಶನ ಕರುಣಿಸುವ ಹಾಸನದ ಗ್ರಾಮದೇವತೆ ಹಾಸನಾಂಬೆಯ ದೇವಸ್ಥಾನದ ಬಾಗಿಲು nಇಂjದು ತೆರೆಯಲಿದೆ. ಇಂದಿನಿಂದ 12 ದಿನಗಳ ಕಾಲ ದೇವಸ್ಥಾನ ಓಪನ್ ಇರಲಿದ್ದು, ಕೊರೋನಾ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಪ್ರವೇಶ ನಿರಾಕರಿಸಲಾಗಿದೆ.

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಶಕ್ತಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ಪ್ರತೀ ಬಾರಿ ಲಕ್ಷಾಂತರ ಭಕ್ತಸಮೂಹ ಆಗಮಿಸುತ್ತಿದ್ದರು. ಕಳೆದ ಬಾರಿ ಸುಮಾರು 5 ಲಕ್ಷ ಜನ ಹಾಸನಾಂಬೆಯ ನೇರ ದರ್ಶನ ಪಡೆದು ಪುನೀತರಾಗಿದ್ದರು. ಆದರೆ ಈ ಬಾರಿ ಕೊರೋನಾ ವೈರಸ್ ಕಾಟದ ಹಿನ್ನೆಲೆಯಲ್ಲಿ , ಜಿಲ್ಲಾಡಾಳಿತ ಭಕ್ತರಿಗೆ ಹಾಸನಾಂಬೆಯ ನೇರ ದರ್ಶನಕ್ಕೆ ಪ್ರವೇಶ ನಿರ್ಭಂದಿಸಿದ್ದು ಕೇವಲ ಆಹ್ವಾನಿತರಿಗಷ್ಟೇ ಹಾಸನಾಂಬೆ ದೇಗುಲ ಪ್ರವೇಶಿಸಲು ಅನಿಮತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್ , ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ನಿರ್ಭಂದಿಸಲಾಗಿದೆ. ಆದರೆ ದೇವರ ಪೂಜಾ ಕಾರ್ಯಗಳನ್ನ ವೀಕ್ಷಿಸಲು ಹಾಸನ ನಗರದ ವಿವಿಧ ಭಾಗಗಳಲ್ಲಿ ಎಲ್ಇಡಿ ಪರದೆಯ ವ್ಯವಸ್ಥೆ ಮಾಡಿ ಅಲ್ಲಿ ಪೂಜಾ ಕೈಂಕರ್ಯಗಳ ನೇರ ಪ್ರಸಾರ ಮಾಡಲಾಗುವುದು. ಆಹ್ವಾನಿತರಿಗಷ್ಟೇ ದೇವಾಲಯದ ಬಾಗಿಲು ತೆರೆದ ಮೊದಲ ಮತ್ತು ಕೊನೆಯ ದಿನವಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಮತ್ತು ಈ ಬಾರಿ ಯಾವುದೇ ತರಹದ ಪ್ರಸಾದದ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದರು. ಅಲ್ಲದೇ ಈ ಬಾರಿ ಯ್ಯೂ ಟ್ಯೂಬ್ ಮೂಲಕವೂ ಹಾಸನಾಂಬೆ ದೇವಿ ಪೂಜೆಯ ನೇರ ಪ್ರಸಾರವನ್ನ ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹಲವಾರು ಪವಾಡ ಮತ್ತು ಆಶ್ಚರ್ಯಗಳಿಗೆ ಹೆಸರುವಾಸಿಯಾದ ಹಾಸನಾಂಬೆ ದೇಗುಲದ ಬಾಗಿಲು ಇಂದು ಮಧ್ಯಾಹ್ನ
12 ಗಂಟೆಗೆ ತೆರೆಯಲಿದೆ. ವರ್ಷಕ್ಕೊಮ್ಮೆ ತೆರೆಯುವ ಈ ದೇವಸ್ಥಾನದಲ್ಲಿ ಕಳೆದ ವರ್ಷ ಉರಿಸಿದ ದೀಪ ಇನ್ನೂ ಆರಿರುವುದಿಲ್ಲ. ಮತ್ತು ಕಳೆದ ವರ್ಷ ದೇವರಿಗೆ ಅರ್ಪಿಸಿದ ನೈವೇದ್ಯ ಹಳಸಿರುವುದಿಲ್ಲ ಮತ್ತು ಹೂವು ಬಾಡಿರುವುದಿಲ್ಲ ಎಂಬ ನಂಬಿಕೆ ಇದೆ.ಇಂತಹ ಶಕ್ತಿದೇವತೆ ಹಾಸನಾಂಬೆ ದೇಗುಲ ಇಂದಿನಿಂದ ಅಂದರೆ ನ.5 ರಿಂದ ನ.15ರ ವರೆಗೆ ತೆರೆದಿರಲಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments